Saturn Transit: ಶೀಘ್ರದಲ್ಲೇ ತನ್ನ ಸ್ವರಾಶಿಯ ಉತ್ಕೃಷ್ಟ ಮತ್ತು ಪವರ್ಫುಲ್ ಸ್ಥಿತಿಯಲ್ಲಿ ಶನಿದೇವನ ಸಂಚಾರ ಆರಂಭ, ಈ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ!

Saturn Transit 2023: ಇತ್ತೀಚೆಗಷ್ಟೇ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿ ಅಸ್ತಮಿಸಿ, ಪುನಃ ಉದಯಿಸಿದ್ದಾನೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ತನ್ನ ಸ್ವರಾಶಿಯಲ್ಲಿ ಶನಿ ಮಹಾರಾಜ ತನ್ನ ಅತ್ಯಂತ ಉತ್ಕೃಷ್ಟ ಹಾಗೂ ಪವರ್ಫುಲ್ ಸ್ಥಿತಿಯಲ್ಲಿ ತನ್ನ ಗೋಚಾರವನ್ನು ಆರಂಭಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಅದೃಷ್ಟದ ದಿನಗಳು ಆರಂಭಗೊಳ್ಳಲಿದ್ದು, ಇವರಿಗೆ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 
 

Shani's Powerful Transit In Kumbha: 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಕರ್ಮ ಫಲದಾತ ಶನಿ ತನ್ನ ಸ್ವರಾಶಿಯಾಗಿರುವ ಕುಂಭರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತವೆ ಮತ್ತು ಕೆಲವೊಮ್ಮೆ ದುರ್ಬಲ ಸ್ಥಿತಿಯಲ್ಲಿ ಸಂಚರಿಸಿದರೆ, ಮತ್ತೆ ಕೆಲವೊಮ್ಮೆ ತನ್ನ ಉತ್ಕೃಷ್ಟ ಸ್ಥಿತಿಯಲ್ಲಿ ಸಂಚಾರ ನಡೆಸುತ್ತವೆ. ಗ್ರಹಗಳ ಈ ಸ್ಥಿತಿಗತಿ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ. ಈ ಪ್ರಭಾವ ಕೆಲ ಜಾತಕದವರ ಪಾಲಿಗೆ ಶುಭ ಸಾಬೀತಾದರೆ, ಉಳಿದ ರಾಶಿಗಳ ಪಾಲಿಗೆ ಅಶುಭ ಸಾಬೀತಾಗುತ್ತವೆ.

 

ಇದನ್ನೂ ಓದಿ-Venus Transit 2023: 48 ಗಂಟೆಗಳ ಬಳಿಕ ಯುವಾವಸ್ಥೆಗೆ ವೈಭವದಾತ ಶುಕ್ರ, 4 ರಾಶಿಗಳ ಜನರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ!

 

ಪ್ರಸ್ತುತ ಮೇ 13 ರಂದು ಶನಿ ಮಹಾರಾಜ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ತನ್ನ ಉತ್ಕೃಷ್ಟ ಮತ್ತು ಅತ್ಯಂತ ಪವರ್ಫುಲ್ ಸ್ಥಿತಿಯಲ್ಲಿ ಸಂಚಾರ ಆರಂಭಿಸಲಿದ್ದಾನೆ. ಏಕೆಂದರೆ ಆತನ ಕೋನದಲ್ಲಿ ನಿಮಗೆ ಅಂತರ ಕಾಣಲು ಸಿಗಲಿದೆ. ಇದು ಎಲ್ಲಾ ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಆದರೆ, ಮೂರು ರಾಶಿಗಳ ಪಾಲಿಗೆ ಶನಿಯ ಈ ಉತ್ಕೃಷ್ಟ ನಡೆ ಅತ್ಯಂತ ಧನಲಾಭಕಾರಿ ಹಾಗೂ ಭಾಗ್ಯೋದಯಕಾರಿ ಸಾಬೀತಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Gajkesari Yog: ಏಪ್ರಿಲ್ 17 ರಂದು ನಿರ್ಮಾಣಗೊಳ್ಳುತ್ತಿದೆ ಗಜಕೇಸರಿ ಯೋಗ,4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮಿಥುನ ರಾಶಿ: ಶನಿ ದೇವನ ಈ ಪವರ್ಫುಲ್ ಸಂಚಾರ ಮಿಥುನ ರಾಶಿಯ ಜಾತಕದವರ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಶನಿ ಮಹಾರಾಜ ನಿಮ್ಮ ಅದೃಷ್ಟ ಭಾವದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಅಪಾರ ಬೆಂಬಲ ಸಿಗಲಿದೆ. ವಿದೇಶ ಯಾತ್ರೆಯ ಸುಖ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ಸ್ಪಾರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅಪಾರ ಯಶಸ್ಸು ಸಿಗಲಿದೆ. ಮನೆಯಲ್ಲಿ ಧಾರ್ಮಿಕ ಹಾಗೂ ಮಂಗಳ ಕಾರ್ಯಗಳು ನೆರವೇರುವ ಸಾಧ್ಯ್ತೆ ಇದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರಲಿದೆ ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಕೌಟುಂಬಿಕ ಜೀವನದಲ್ಲಿ ಸುಮಧುರತೆ ಹಾಗೂ ಲವ್ ಲೈಫಲ್ಲಿ ನೆಮ್ಮದಿ ಇರಲಿದೆ.   

2 /3

ವೃಷಭ ರಾಶಿ: ಸ್ವರಾಶಿಯಲ್ಲಿ ಶನಿ ಮಹಾರಾಜನ ಈ ಉತ್ಕೃಷ್ಟ ನಡೆ ವೃಷಭ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಶನಿ ದೇವ ನಿಮ್ಮ ಗೋಚರ ಜಾತಕದ ಅದೃಷ್ಟ ಸ್ಥಾನಕ್ಕೆ ಅಧಿಪತಿಯಾಗಿ, ಕರ್ಮ ಭಾವದ ಮೇಲೆ ವಿರಾಜಮಾನನಾಗಿದ್ದಾನೆ. ಹೀಗಾಗಿ ಮೇ 13, 2023 ರಿಂದ ನಿಮಗೆ ಅತ್ಯಂತ ಶುಭ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಏಕೆಂದರೆ ಅಲ್ಲಿ ಶಶ ಮಹಾಪುರುಷ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಅವಧಿಯಲ್ಲಿ ಅದೃಷ್ಟದ ಉನ್ನತಿಯಾಗಿ, ವಿದ್ಯಾ ಸುಖ ಪ್ರಾಪ್ತಿಯಾಗಲಿದೆ. ಇದಲ್ಲದೆ ಕೆಲಸ ಕಾರ್ಯಗಳಲ್ಲಿ ಉನ್ನತಿ ಕೂಡ ಆಗಲಿದೆ. ನೀವು ತೀರ್ಥಯಾತ್ರೆ ಕೈಗೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಧರ್ಮಕಾರ್ಯಗಳಲ್ಲಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ನೌಕರವರ್ಗದ ಜನರಿಗೆ ಪ್ರಮೋಷನ್ ಹಾಗೂ ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗಲಿದೆ. ಇದಲ್ಲದೆ ನಿಮಗೆ ಸಂತಾನ ಭಾಗ್ಯ ಕೂಡ ಪ್ರಾಪ್ತಿಯಾಗ್ಲಿದೆ. ವ್ಯಾಪಾರದಲ್ಲಿ ಭಾರಿ ಧನಲಾಭ, ವಿದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಅಪಾರ ಯಶಸ್ಸು ಸಿಗಲಿದೆ.   

3 /3

ತುಲಾ ರಾಶಿ: ಸ್ವರಾಶಿಯ ಉತ್ಕೃಷ್ಟ ಭಾವದಲ್ಲಿ ಶನಿಯ ಈ ಸಂಚಾರ ತುಲಾ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಗೆ ಶುಕ್ರ ಅಧಿಪತಿಯಾಗಿದ್ದು, ಶುಕ್ರ ಹಾಗೂ ಶನಿಯ ನಡುವೆ ಮಿತ್ರ ಭಾವದ ಸಂಬಂಧವಿದೆ. ಇದಲ್ಲದೆ ಶನಿ ದೇವ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಗೋಚರಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಸಂತಾನ ಸುಖ ಪ್ರಾಪ್ತಿಯಾಗಲಿದೆ. ಸಂತಾನ ಪಕ್ಷದ ವತಿಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಬಹುದು. ಇನ್ನೊಂದೆಡೆ ನಿಮ್ಮ ಜಾತಕದ ದಾಂಪತ್ಯ ಜೀವನ ಭಾವದಲ್ಲಿ ಗುರು ಹಾಗೂ ರಾಹು ಇರುವ ಕಾರಣ ವೈವಾಹಿಕ ಜೀವನದಲ್ಲಿ ಕಲಹ ತಲೆದೂರುವ ಸಾಧ್ಯತೆ ಇದೆ. ಆದರೂ ಕೂಡ ಈ ಅವಧಿಯಲ್ಲಿ ನಿಮಗೆ ಉನ್ನತಿ ಪ್ರಾಪ್ತಿಯಾಗುವುದರ ಜೊತೆಗೆ ಆಕಸ್ಮಿಕ ಧನಲಾಭ ಯೋಗ ಕೂಡ ಇದೆ. ಬೆಟ್ಟಿಂಗ್, ಷೇರು ಮಾರುಕಟ್ಟೆ, ಲಾಟರೀ ವ್ಯವಹಾರಗಳಲ್ಲಿ ಧನಲಾಭ ಸಿಗಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದ್ದು, ಯಾವುದಾದರೊಂದು ಕೋರ್ಸ್ ಗೆ ಅವರು ದಾಖಲಾತಿಯನ್ನು ಪಡೆಯಬಹುದು. (ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)