ನವದೆಹಲಿ: ಗೃಹ ಸಚಿವಾಲಯದ ವರದಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಗರಿಷ್ಠ ಸಂಖ್ಯೆಯ ಭಯೋತ್ಪಾದಕರು ಭದ್ರತಾ ಪಡೆಯ ಎನ್ಕೌಂಟರ್ ಗೆ ಬಲಿಯಾಗಿದ್ದಾರೆ. 2016 ರಲ್ಲಿ 135 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದ್ದು, 2017 ರಲ್ಲಿ 207, 2018 ರಲ್ಲಿ 244 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಈ ಮಧ್ಯೆ, ಪಾಕಿಸ್ತಾನ ಭಾರತೀಯ ಗಡಿಯಲ್ಲಿ ಭಯೋತ್ಪಾದಕರನ್ನು ಒಳಸೇರಿಸುವ ಅನೇಕ ಪ್ರಯತ್ನಗಳು ನಡೆದಿವೆ.
ಕಳೆದ ಮೂರು ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಒಳನುಸುಳುವಿಕೆ ಅಂಕಿಅಂಶಗಳನ್ನು ನೋಡಿದರೆ ಕಳೆದ ವರ್ಷ ಈ ಪ್ರಯತ್ನ ಹೆಚ್ಚಾಗಿರುವುದು ಕಂಡು ಬಂದಿದೆ. ಕಳೆದ ವರ್ಷ 143 ಬಾರಿ ಉಗ್ರಗಾಮಿಗಳು ಗಡಿ ನುಸುಳುವ ಪ್ರಯತ್ನ ಮಾಡಿದ್ದಾರೆ. 2016 ರಲ್ಲಿ 119 ಮತ್ತು 2017ರಲ್ಲಿ 136 ಬಾರಿ ಈ ಪ್ರಯತ್ನ ನಡೆದಿತ್ತು.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಸಚಿವ ಕಿರಣ್ ರಿಜಿಜು ಈ ಮಾಹಿತಿ ನೀಡಿದ್ದು, ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸುವ ಸಲುವಾಗಿ ಅಂತರರಾಷ್ಟ್ರೀಯ ಗಡಿಯಲ್ಲಿ ಫೆನ್ಸಿಂಗ್, ರಸ್ತೆ ಮತ್ತು ಫ್ಲಡ್ ಲೈಟ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಗೃಹ ಸಚಿವಾಲಯದ ಪ್ರಕಾರ, ಅಂತರರಾಷ್ಟ್ರೀಯ ಗಡಿಯನ್ನು ರಕ್ಷಿಸಲು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನಲ್ಲಿ ಹಲವು ಸುಧಾರಣೆ ಕೈಗೊಳ್ಳಲಾಗುತ್ತಿದೆ. ಮಾಹಿತಿ ಪ್ರಕಾರ, ಪ್ರಕಾರ ಗಡಿರೇಖೆಯಲ್ಲಿ ಇಪ್ಪತ್ತು ನಾಲ್ಕು ಗಂಟೆಗಳ ಕಾಲ, ಕಣ್ಗಾವಲು ಮತ್ತು ಗಸ್ತು ಮತ್ತು ಜಾವಾನ್ಗಳಿಗೆ ಆಧುನಿಕ ಆಯುಧಗಳನ್ನು ನೀಡಲಾಗಿದೆ.
ಕಳೆದ ವರ್ಷ ಭಾರತ-ಪಾಕ್ ಗಡಿ ರೇಖೆಯಲ್ಲಿ 2018 ರಲ್ಲಿ, 2,140 ಕದನ ವಿರಾಮದ ಉಲ್ಲಂಘನೆಯ ಘಟನೆಗಳು ನಡೆದಿವೆ, ಅದರಲ್ಲಿ 14 ಬಿಎಸ್ಎಫ್ ಸೈನಿಕರು ಮೃತಪಟ್ಟಿದ್ದಾರೆ ಮತ್ತು 53 ಮಂದಿ ಗಾಯಗೊಂಡಿದ್ದಾರೆ. 2017 ರಲ್ಲಿ ನಡೆದ ಕದನ ವಿರಾಮದ ಉಲ್ಲಂಘನೆಯ ಸಂದರ್ಭದಲ್ಲಿ ಗಡಿ ಭಾಗದಲ್ಲಿ 971 ದಾಳಿಯು ಸಂಭವಿಸಿದ್ದು, ಅದರಲ್ಲಿ ನಾಲ್ಕು ಮಂದಿ ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ.