Samantha Tattoo: ವಿಚ್ಛೇದನದ ಬಳಿಕವೂ ಸಮಂತಾ ಸೊಂಟದ ಮೇಲಿದೆ ʻನಾಗ ಚೈತನ್ಯʼ ಟ್ಯಾಟೂ!

Samantha has Naga Chaitanya tattoo: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು 2 ವರ್ಷವಾದರೂ ಈ ಜೋಡಿಯ ಸುದ್ದಿ ಆಗಾಗ ಮುನ್ನೆಲೆಗೆ ಬರುತ್ತಲೆ ಇರುತ್ತೆ. ಟಾಲಿವುಡ್‌ ಕ್ಯೂಟ್‌ ಕಪಲ್‌ ಆಗಿದ್ದ ಸಮಂತಾ ಮತ್ತು ನಾಗ ಚೈತನ್ಯ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿಚ್ಛೇದನದ ಬಳಿಕವೂ ಸಮಂತಾ ಸೊಂಟದ ಮೇಲಿದೆ ʻನಾಗ ಚೈತನ್ಯʼ ಟ್ಯಾಟೂ ಇರುವುದನ್ನು ನೆಟ್ಟಿಗರು ಗುರುತಿಸಿದ್ದಾರೆ.   

Written by - Chetana Devarmani | Last Updated : Apr 21, 2023, 01:33 PM IST
  • ವಿಚ್ಛೇದನದ ಬಳಿಕವೂ ಪತಿಯ ನೆನಪು
  • ಸಮಂತಾ ಸೊಂಟದ ಮೇಲಿದೆ ʻನಾಗ ಚೈತನ್ಯʼ ಟ್ಯಾಟೂ!
  • ಹಳೆಯ ಟ್ಯಾಟೂವನ್ನು ಗುರುತಿಸಿದ ನೆಟ್ಟಿಗರು
Samantha Tattoo: ವಿಚ್ಛೇದನದ ಬಳಿಕವೂ ಸಮಂತಾ ಸೊಂಟದ ಮೇಲಿದೆ ʻನಾಗ ಚೈತನ್ಯʼ ಟ್ಯಾಟೂ! title=
Samantha Ruth Prabhu

Samantha Ruth Prabhu: ಲಂಡನ್‌ನಲ್ಲಿ ನಡೆದ ಸಿಟಾಡೆಲ್ ಪ್ರೀಮಿಯರ್‌ನಿಂದ ಸಮಂತಾ ರುತ್ ಪ್ರಭು ಅವರ ಅದ್ಭುತ ಫೋಟೋಗಳು ಇಂಟರ್ನೆಟರ್‌ನಲ್ಲಿ ಬಿರುಗಾಳಿ ಎಬ್ಬಿಸಿವೆ. ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅಭಿನಯದ ಸರಣಿಯ ಪ್ರದರ್ಶನದಲ್ಲಿ ಸಮಂತಾ ಭಾಗಿಯಾಗಿದ್ದರು. ಕೆಲವು ಹದ್ದಿನ ಕಣ್ಣಿನ ನೆಟಿಜನ್‌ಗಳು ಸಮಂತಾ ಅವರ ಪಕ್ಕೆಲುಬಿನ ಮೇಲೆ ಹಳೆಯ ಟ್ಯಾಟೂವನ್ನು ಗುರುತಿಸಿದ್ದಾರೆ. ಇದು ಇದೀಗ ಹಾಟ್‌ ಟಾಪ್‌ ಆಗಿದೆ. 

ಸಮಂತಾ ತನ್ನ ಮಾಜಿ ಪತಿ ನಾಗ ಚೈತನ್ಯ ಹೆಸರನ್ನು ಪಕ್ಕೆಲುಬಿನ ಬಲಭಾಗದಲ್ಲಿ ‘ಚೈ (Chay)’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು ನಿಮಗೆ ಗೊತ್ತೇ? ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ಹಂಚಿಕೊಂಡ ಕೆಲವು ಫೋಟೋಗಳಲ್ಲಿ, ನೆಟಿಜನ್‌ಗಳು ಸಮಂತಾ ದೇಹದ ಮೇಲೆ ಈ ಟ್ಯಾಟೂವನ್ನು ಹುಡುಕಿದ್ದಾರೆ. ವಿಚ್ಛೇದನದ ಹೊರತಾಗಿಯೂ ಅವರು Chay ಅವರ ಹಚ್ಚೆ ಇಟ್ಟುಕೊಂಡಿದ್ದಾರೆ ಎಂಬ ವಿಚಾರ ಎಲ್ಲರ ಗಮನಸೆಳೆದಿದೆ.

Samantha Tattoo

ಇದನ್ನೂ ಓದಿ: ಗುಲಾಬಿ ಬಟ್ಟೆಯಲ್ಲಿ ಗುಲ್ಕನ್‌ನಂತ ಬ್ಯೂಟಿ ಪೂಜಾ ಹೆಗ್ಡೆ- ಪೋಟೋಸ್‌ ನೋಡಿ

ಸಮಂತಾ ತನ್ನ ಚೊಚ್ಚಲ ಚಿತ್ರ ಯೇ ಮಾಯಾ ಚೇಸಾವೆಗೆ ಈ ಟ್ಯಾಟೂವನ್ನು ಅರ್ಪಿಸಿದ್ದಾರೆ. ತೆಲುಗು ಎಂಟರ್ಟೈನರ್ 2010 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ ಸಮಂತಾ ನಟಿಸಿದ್ದರು. ಇಅಲ್ಲಿಂದಲೇ ಕುಡಿಯೊಡೆಯಿತು ಚೈ - ಸ್ಯಾಮ್‌ ಪ್ರೇಮ. ಅಲ್ಲದೇ ಸಮಂತಾ ತನ್ನ ಕುತ್ತಿಗೆಯ ಕೆಳಭಾಗದಲ್ಲಿ ‘YMC’ ಎಂದು ಬರೆದ ಅಲಂಕಾರಿಕ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದು ಕೂಡ ನಾಗ ಚೈತನ್ಯಗೆ ಸಂಬಂಧಿಸಿದ ಟ್ಯಾಟೂ.

Samantha Tattoo

ಸಮಂತಾ ಮತ್ತು ನಾಗ ಚೈತನ್ಯ ಕಪಲ್‌ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಅವರ ಎರಡು ಬಾಣಗಳ ರೂಪದಲ್ಲಿ ಹೊಂದಿಕೆಯಾಗುವ ಹಚ್ಚೆಗಳನ್ನು ಈ ಗಲೂ ಗಮನಿಸಬಹುದು. ಸ್ಯಾಮ್ ಬಲಗೈಯಲ್ಲಿ ಈ ಟ್ಯಾಟೂ ಇದೆ. ಈ ಟ್ಯಾಟೂಗೆ ನಾಗ ಚೈತನ್ಯ ತಮ್ಮ ಮದುವೆಯ ದಿನಾಂಕವನ್ನೂ ಸೇರಿಸಿದ್ದಾರೆ. ಸಮಂತಾ ಮತ್ತು ಚೈತನ್ಯ 2017 ರಲ್ಲಿ ಮದುವೆಯಾಗಿದ್ದರು ಮತ್ತು ಅಕ್ಟೋಬರ್ 2021 ರಲ್ಲಿ ವಿಚ್ಛೆದನ ಪಡೆದು ಒರಸೊರ ಬೇರ್ಪಟ್ಟರು. 

ಇದನ್ನೂ ಓದಿ: ಮದುವೆಯಲ್ಲಿ ಐಶ್ವರ್ಯಾ ರೈ ಉಟ್ಟಿದ್ರು 75 ಲಕ್ಷದ ಸೀರೆ, ಕೋಟಿ ಕೋಟಿ ಹಣ ನೀರಿನಂತೆ ಹರಿಯಿತು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News