Samantha : ಸಾಲು ಸಾಲು ಸಿನಿಮಾ ಫ್ಲಾಪ್‌ ಆದ್ರೂ ಕಡಿಮೆಯಾಗಿಲ್ಲ ಸಮಂತಾ ಕ್ರೇಜ್!

Samantha Tops in Pan India heroines list Again: ORMAX ಮೀಡಿಯಾ ಮಾರ್ಚ್ 2023 ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ಜನಪ್ರಿಯ ಮಹಿಳಾ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಎಂದಿನಂತೆ ಸಮಂತಾ ರುತ್ ಪ್ರಭು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.  

Written by - Chetana Devarmani | Last Updated : Apr 23, 2023, 12:39 PM IST
  • ಪ್ಯಾನ್ ಇಂಡಿಯಾ ಅತ್ಯಂತ ಜನಪ್ರಿಯ ಮಹಿಳಾ ತಾರೆ
  • ಸಾಲು ಸಾಲು ಸಿನಿಮಾ ಫ್ಲಾಪ್‌
  • ಆದ್ರೂ ಕಡಿಮೆಯಾಗಿಲ್ಲ ಸಮಂತಾ ಕ್ರೇಜ್!
Samantha : ಸಾಲು ಸಾಲು ಸಿನಿಮಾ ಫ್ಲಾಪ್‌ ಆದ್ರೂ ಕಡಿಮೆಯಾಗಿಲ್ಲ ಸಮಂತಾ ಕ್ರೇಜ್! title=
samantha

Samantha : ಪ್ರತಿ ತಿಂಗಳು ಟಾಪ್ ಹೀರೋ ಮತ್ತು ಹೀರೋಯಿನ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿರುವ ORMAX ಮೀಡಿಯಾ ಇತ್ತೀಚೆಗೆ ಮಾರ್ಚ್ 2023 ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ಜನಪ್ರಿಯ ಮಹಿಳಾ ತಾರೆಯರ ಪಟ್ಟಿಯನ್ನು ಪ್ರಕಟಿಸಿದೆ. ಎಂದಿನಂತೆ ಈ ಪಟ್ಟಿಯಲ್ಲಿ ಸಮಂತಾ ಮೊದಲ ಸ್ಥಾನ ಪಡೆದಿದ್ದಾರೆ. ತೆಲುಗು ಚಿತ್ರಗಳ ಮೂಲಕ ಸ್ಟಾರ್ ಹೀರೋಯಿನ್ ಕ್ರೇಜ್ ಗಿಟ್ಟಿಸಿಕೊಂಡ ಸಮಂತಾ ತಮಿಳಿನಲ್ಲೂ ಒಳ್ಳೆ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ:  ಹನಿಮೂನ್‌ ಮೂಡ್‌ನಲ್ಲಿ 'ಸಿಂಹಪ್ರಿಯಾ' ಜೋಡಿ

ಇತ್ತೀಚಿನ ದಿನಗಳಲ್ಲಿ ಅವರು ಮಾಡುತ್ತಿರುವ ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ ಮತ್ತು ಅವರು ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ, ದೀಪಿಕಾ ಪಡುಕೋಣೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಮತ್ತು ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ಎಂದು ಖ್ಯಾತಿ ಪಡೆದಿರುವ ನಯನತಾರಾ ನಾಲ್ಕನೇ ಸ್ಥಾನ ಪಡೆದರೆ, ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾಜಲ್ ಅಗರ್ವಾಲ್ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ನ್ಯಾಶನಲ್ ಕ್ರಶ್ ಎಂದೇ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಈ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಬಹಳ ದಿನಗಳಿಂದ ತನ್ನ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದಿರುವ ತ್ರಿಷಾ ಏಳನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್ ಸೇರಿದಂತೆ ಸೌತ್ ಸಿನಿಮಾಗಳಲ್ಲಿ ಮಿಂಚಿರುವ ಕಿಯಾರಾ ಅಡ್ವಾಣಿ ಎಂಟನೇ ಸ್ಥಾನ ಪಡೆದರೆ, ಸೌತ್ ಸ್ಟಾರ್ ಹೀರೋಯಿನ್ ಎಂದೇ ಖ್ಯಾತಿ ಪಡೆದಿರುವ ಅನುಷ್ಕಾ ಶೆಟ್ಟಿ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸ್ಟಾರ್ ನಾಯಕಿ ಕತ್ರಿನಾ ಕೈಫ್ ಹತ್ತನೇ ಸ್ಥಾನ ಪಡೆದಿದ್ದಾರೆ. 

ಇದನ್ನೂ ಓದಿ:   ಅತಿ ಹೆಚ್ಚು ಸಂಭಾವನೆ ಪಡೆಯುವ ‌ಕನ್ನಡದ ನಟಿಯರು ಇವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News