Suyash Sharma Celebration Video, KKR vs CSK: ನಾಲ್ಕು ಬಾರಿಯ ಚಾಂಪಿಯನ್ ಕಪ್ ಎತ್ತಿ ಹಿಡಿದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್’ಮನ್’ಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಂಚಲನ ಸೃಷ್ಟಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಈ ಪಂದ್ಯದಲ್ಲಿ ಚೆನ್ನೈ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿದೆ. ಇದು ಐಪಿಎಲ್ 2023ರ ಸೀಸನ್’ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ತಂಡವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: Hardik -Krunal: ಪಂದ್ಯದ ಮಧ್ಯೆ ಹಾರ್ದಿಕ್-ಕೃನಾಲ್ ಸಹೋದರರ ಕಿತ್ತಾಟ! ಆಮೇಲೆ ಆಗಿದ್ದು… ವಿಡಿಯೋ ನೋಡಿ
ಆದರೆ ಕೆಕೆಆರ್ ಆಟಗಾರನೊಬ್ಬನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ, ಇದಕ್ಕೆ ಕಾರಣ ಆತ ವಿಕೆಟ್ ಪಡೆದ ನಂತರ ಸಂಭ್ರಮಾಚರಣೆ ಮಾಡಿರುವ ಶೈಲಿ.
ಸಿಎಸ್’ಕೆ ಪರ ಅಜಿಂಕ್ಯ ರಹಾನೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಅಬ್ಬರಿಸಿದ್ದರು. 29 ಎಸೆತಗಳಲ್ಲಿ 71 ರನ್ ಗಳಿಸಿ ಅಜೇಯರಾಗಿ ಮರಳಿದರು. ರಹಾನೆ ಅವರ ಇನ್ನಿಂಗ್ಸ್’ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ಗಳು ಸೇರಿದ್ದವು. ಅವರಲ್ಲದೆ, ಡೆವೊನ್ ಕಾನ್ವೆ 40 ಎಸೆತಗಳಲ್ಲಿ 56 ರನ್ ಗಳಿಸಿದರೆ, ಶಿವಂ ದುಬೆ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ಗಳೊಂದಿಗೆ 50 ರನ್ ಗಳಿಸಿದ್ದಾರೆ. ಈ ಮೂಲಕ ಚೆನ್ನೈ 4 ವಿಕೆಟ್ ಕಳೆದುಕೊಂಡು 235 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಪಂದ್ಯದಲ್ಲಿ ಕೋಲ್ಕತ್ತಾದ ಕುಲ್ವಂತ್ ಖೆಜ್ರೋಲಿಯಾ 2 ವಿಕೆಟ್ ಕಬಳಿಸಿದರಾದರೂ 3 ಓವರ್’ಗಳಲ್ಲಿ 44 ರನ್ ನೀಡಿದರು. ಇವರಲ್ಲದೆ ಸುಯಶ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು. ಸುಯಶ್ 29 ರನ್ ನೀಡಿದರೆ ಚಕ್ರವರ್ತಿ 49 ರನ್ ಗಳಿಸಿದರು. ಈ ಮಧ್ಯೆ, ವಿಕೆಟ್ ಪಡೆದ ನಂತರ ಸುಯಾಶ್ ಅವರ ಸಂಭ್ರಮಾಚರಣೆಯ ವಿಭಿನ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ವಿಡಿಯೋ ನೋಡಿ:
Cleaned up!
Suyash Sharma produces a special delivery to get Ruturaj Gaikwad out!
Follow the match ▶️ https://t.co/j56FWB88GA #TATAIPL | #KKRvCSK pic.twitter.com/8cZ64Wxq11
— IndianPremierLeague (@IPL) April 23, 2023
ಈ ಪಂದ್ಯದಲ್ಲಿ ಸುಯಾಶ್ ಶರ್ಮಾ ರಿತುರಾಜ್ ಗಾಯಕ್ವಾಡ್ (35) ಅವರನ್ನು ಬೌಲ್ಡ್ ಮಾಡಿದರು ಮತ್ತು ಡೆವೊನ್ ಕಾನ್ವೆ ಅವರ ಆರಂಭಿಕ ಜೊತೆಯಾಟವನ್ನು ಮುರಿದರು. ರಿತುರಾಜ್ ಮತ್ತು ಕಾನ್ವೆ ಮೊದಲ ವಿಕೆಟ್’ಗೆ 73 ರನ್ ಸೇರಿಸಿದ್ದರು. ಇನಿಂಗ್ಸ್ ನ 8ನೇ ಓವರ್’ನ ಮೂರನೇ ಎಸೆತದಲ್ಲಿ ಸುಯಶ್ ವಿಕೆಟ್ ಪಡೆದ ತಕ್ಷಣ ವಿಭಿನ್ನವಾಗಿ ಸಂಭ್ರಮಿಸಿದ್ದು ಕಂಡುಬಂತು. ಬೆರಳು ತೋರಿಸುತ್ತಾ ಏನೇನೋ ಮಾತನಾಡುತ್ತಾ, ವಿಚಿತ್ರ ವರ್ತನೆ ತೋರುವುದು ಕಂಡುಬಂತು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ ಪೋಸ್ಟ್ಗಳನ್ನು ಶೇರ್ ಮಾಡಿದ್ದು, ಅವರ ಮಾತುಗಳನ್ನು ವಿಭಿನ್ನವಾಗಿ ಅರ್ಥ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: W,W,W,W..9 ವರ್ಷದಿಂದ ಟೀಂ ಇಂಡಿಯಾದಿಂದ ಔಟ್! ಆದ್ರೆ ಇಂದು ಗುಜರಾತ್ ಗೆಲುವಿಗೆ ಕಾರಣವಾಗಿದ್ದು ಅದೇ ಆಟಗಾರ
“ನಾನು ತಲೆಬಾಗುವುದಿಲ್ಲ” ಎಂದು ಸುಯಾಶಗ ಹೇಳುತ್ತಿದ್ದಾರೆ ಅಂತಾ ಒಬ್ಬರು ಬರೆದಿದ್ದರೆ, ಮತ್ತೊಬ್ಬರು ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಅವರ ಮಾತುಗಳು ಭಾರೀ ವಿವಾದಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ