Hardik -Krunal: ಪಂದ್ಯದ ಮಧ್ಯೆ ಹಾರ್ದಿಕ್-ಕೃನಾಲ್ ಸಹೋದರರ ಕಿತ್ತಾಟ! ಆಮೇಲೆ ಆಗಿದ್ದು… ವಿಡಿಯೋ ನೋಡಿ

Hardik Pandya-Krunal Pandya Video: ಶನಿವಾರದಂದು ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ನಡುವಿನ ಪಂದ್ಯಾಟ ತೀವ್ರ ಕುತೂಹಲ ಕೆರಳಿಸಿತ್ತು ಎನ್ನಬಹುದು. ಇನ್ನು ಈ ಪಂದ್ಯದಲ್ಲಿ ಫನ್ನಿ ಸನ್ನಿವೇಶವೊಂದು ನಡೆದಿದೆ. ಎಲ್‌ಎಸ್‌’ಜಿ ಚೇಸ್‌ನಲ್ಲಿ ಕೃನಾಲ್ ಪಾಂಡ್ಯ ಬ್ಯಾಟಿಂಗ್‌’ಗೆಂದು ಬಂದಾಗ, ಹಾರ್ದಿಕ್ ಪಾಂಡ್ಯ ತನ್ನ ಸಹೋದರನಿಗೆ ಏನೋ ಹೇಳುತ್ತಿರುವುದು ಕಂಡುಬಂದಿತು.

Written by - Bhavishya Shetty | Last Updated : Apr 23, 2023, 05:56 PM IST
    • ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ನಡುವಿನ ಪಂದ್ಯಾಟ ತೀವ್ರ ಕುತೂಹಲ ಕೆರಳಿಸಿತ್ತು
    • ಪಂದ್ಯ ಮುಗಿದ ಬಳಿಕ ಇಬ್ಬರೂ ಸಹ ಹಗ್ ಮಾಡಿಕೊಂಡರು
    • ತನ್ನ ತಂಡದ ಜೆರ್ಸಿಯನ್ನು ಎಕ್ಸ್’ಚೇಂಜ್ ಮಾಡಿಕೊಂಡು ತಮಾಷೆ ಮಾಡುತ್ತಿದ್ದದ್ದು ಕಂಡುಬಂತು.
Hardik -Krunal: ಪಂದ್ಯದ ಮಧ್ಯೆ ಹಾರ್ದಿಕ್-ಕೃನಾಲ್ ಸಹೋದರರ ಕಿತ್ತಾಟ! ಆಮೇಲೆ ಆಗಿದ್ದು… ವಿಡಿಯೋ ನೋಡಿ title=
Hardik and Krunal Pandya

Hardik Pandya-Krunal Pandya Video: ಕಳೆದ ದಿನ ಲಕ್ನೋ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಈ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿ ಒಂದೆಡೆ ಆದ್ರೆ, ಇಬ್ಬರು ಸಹೋದರರ ಎದುರು-ಬದುರು ಆಟಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: IPLನಲ್ಲಿ ವಿಫಲವಾದ್ರೂ ಟಿ20ಯಲ್ಲಿ ‘ಸೂರ್ಯ’ನೇ ಕಿಂಗ್: ಅಗ್ರಸ್ಥಾನದಲ್ಲಿ ಮತ್ತೆ ಟೀಂ ಇಂಡಿಯಾದ ಮಿ.360

ಶನಿವಾರದಂದು ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ನಡುವಿನ ಪಂದ್ಯಾಟ ತೀವ್ರ ಕುತೂಹಲ ಕೆರಳಿಸಿತ್ತು ಎನ್ನಬಹುದು. ಇನ್ನು ಈ ಪಂದ್ಯದಲ್ಲಿ ಫನ್ನಿ ಸನ್ನಿವೇಶವೊಂದು ನಡೆದಿದೆ. ಎಲ್‌ಎಸ್‌’ಜಿ ಚೇಸ್‌ನಲ್ಲಿ ಕೃನಾಲ್ ಪಾಂಡ್ಯ ಬ್ಯಾಟಿಂಗ್‌’ಗೆಂದು ಬಂದಾಗ, ಹಾರ್ದಿಕ್ ಪಾಂಡ್ಯ ತನ್ನ ಸಹೋದರನಿಗೆ ಏನೋ ಹೇಳುತ್ತಿರುವುದು ಕಂಡುಬಂದಿತು. ಹಾರ್ದಿಕ್ ಕೃನಾಲ್ ಅವರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದ್ದರು. ಆದರೆ ಅದನ್ನು ಅವರು ಗಣನೆಗೆ ತೆಗೆದುಕೊಂಡಿರಲಿಲ್ಲ.

ವಿಡಿಯೋ ನೋಡಿ:

 

ಆದರೆ ಪಂದ್ಯ ಮುಗಿದ ಬಳಿಕ ಇಬ್ಬರೂ ಸಹ ಹಗ್ ಮಾಡಿಕೊಂಡು, ತನ್ನ ತಂಡದ ಜೆರ್ಸಿಯನ್ನು ಎಕ್ಸ್’ಚೇಂಜ್ ಮಾಡಿಕೊಂಡು ತಮಾಷೆ ಮಾಡುತ್ತಿದ್ದದ್ದು ಕಂಡುಬಂತು.

ವಿಡಿಯೋ ನೋಡಿ:

 

ಇದನ್ನೂ ಓದಿ: Team India: ಯುಜ್ವೇಂದ್ರ ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕು? ರಾಶಿ ರಾಶಿ ಪ್ರಶ್ನೆ ಹುಟ್ಟುಹಾಕಿತು ಆ ‘ಪೋಸ್ಟ್’

ಗುಜರಾತ್ಗೆ ಗೆಲುವು:

ಈ ರೋಚಕ ಪಂದ್ಯದಲ್ಲಿ ಮೋಹಿತ್ ಶರ್ಮಾ ಕೊನೆಯ ಓವರ್‌’ನಲ್ಲಿ ಗುಜರಾತ್ ಟೈಟಾನ್ಸ್‌’ಗೆ ಜಯ ತಂದುಕೊಟ್ಟರು. ಕೊನೆಯ ಓವರ್‌’ನಲ್ಲಿ ಲಕ್ನೋ ತಂಡಕ್ಕೆ 12 ರನ್‌’ಗಳ ಅಗತ್ಯವಿದ್ದು, ಕೆಎಲ್ ರಾಹುಲ್ (66) ಮತ್ತು ಆಯುಷ್ ಬದೋನಿ (8) ಕ್ರೀಸ್‌’ನಲ್ಲಿದ್ದರು. ಬೌಲಿಂಗ್ ಮಾಡಲು ಬಂದ ಮೋಹಿತ್ ಶರ್ಮಾ ಅವರ ಮೊದಲ ಎಸೆತದಲ್ಲಿ ರಾಹುಲ್ ಎರಡು ರನ್ ಗಳಿಸಿದರು. ಇದಾದ ಬಳಿಕ ಸತತ ನಾಲ್ಕು ಎಸೆತಗಳಲ್ಲಿ ಮೋಹಿತ್ ನಾಲ್ಕು ವಿಕೆಟ್ ಕಬಳಿಸಿದ್ದು, ಈ ಮೂಲಕ ಗುಜರಾತ್ 7 ರನ್‌’ಗಳ ಜಯ ಸಾಧಿಸಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News