Shocking: ಆರ್‌ಓ ವಾಟರ್ ಪ್ಯೂರಿಫೈಯರ್ ಬಗೆಗಿನ ಕಹಿ ಸತ್ಯ!

RO Water Purifier: ಇತ್ತೀಚಿನ ದಿನಗಳಲ್ಲಿ ಬದಲಾದ ಹವಾಮಾನದಿಂದಾಗಿ ಶುದ್ಧವಾದ ನೀರು ಸಿಗುವುದೇ ಕಷ್ಟವಾಗಿದೆ. ಹಾಗಾಗಿ, ಶುದ್ಧ ನೀರಿಗಾಗಿ ಜನರು ಆರ್‌ಓ ವಾಟರ್ ಪ್ಯೂರಿಫೈಯರ್ ಮೊರೆ ಹೋಗುತ್ತಿದ್ದಾರೆ. ಆದರೆ, ಆರ್‌ಓ ವಾಟರ್ ನಿಮ್ಮ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎಂದು ಎಂದಾದರೂ ಯೋಚಿಸಿದ್ದೀರಾ...? 

Written by - Yashaswini V | Last Updated : Apr 25, 2023, 10:05 AM IST
  • ಕಲುಷಿತ ನೀರನ್ನು ಶುದ್ಧಗೊಳಿಸುವ ಆರ್‌ಓ ಈ ಸಮಯದಲ್ಲಿ ನೈಸರ್ಗಿಕವಾಗಿ ಇರುವ ಕೆಲವು ಅಗತ್ಯ ಖನಿಜಗಳು ಮತ್ತು ವಿಟಮಿನ್‌ಗಳನ್ನು ಕೂಡ ತೆಗೆದುಹಾಕುತ್ತದೆ.
  • ದೀರ್ಘ ಸಮಯದವರೆಗೆ ಈ ಆರ್‌ಓ ನೀರನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಿರುವ ವಿಟಮಿನ್ ಬಿ 12 ಕೊರತೆ ಉಂಟಾಗುತ್ತದೆ ಎಂಬ ಶಾಕಿಂಗ್ ಮಾಹಿತಿ ಇತ್ತೀಚಿನ ಸಂಶೋಧನೆಯಿಂದ ಬಹಿರಂಗಗೊಂಡಿದೆ.
  • ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದಾಗ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
Shocking: ಆರ್‌ಓ ವಾಟರ್ ಪ್ಯೂರಿಫೈಯರ್ ಬಗೆಗಿನ ಕಹಿ ಸತ್ಯ!  title=

RO Water Purifier Effects: ಬದಲಾದ ಜೀವನಶೈಲಿಯಲ್ಲಿ ಎಲ್ಲರ ಅಗತ್ಯತೆಗಳು ಬದಲಾಗುತ್ತಿವೆ. ಪ್ರಸ್ತುತ ಪ್ರತಿಯೊಬ್ಬರ ಮನೆಯಲ್ಲಿ ಆರ್‌ಓ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಆರ್‌ಓ ಎಂದರೆ  ರಿವರ್ಸ್ ಆಸ್ಮೋಸಿಸ್ ಕಲುಷಿತ ನೀರನ್ನು ಸ್ವಚ್ಛಗೊಳಿಸುವ ಸಾಧನವಾಗಿದೆ. ಹಾಗಾಗಿಯೇ,  ಜನರು ಮನೆಗಳಲ್ಲಿ ಶುದ್ಧವಾದ ಕುಡಿಯುವ ನೀರಿಗಾಗಿ ಆರ್‌ಒ ವಾಟರ್ ಪ್ಯೂರಿಫೈಯರ್‌ಗಳನ್ನು ಬಳಸುತ್ತಾರೆ. ಒಂದರ್ಥದಲ್ಲಿ ಆರ್‌ಒ ವಾಟರ್ ಪ್ಯೂರಿಫೈಯರ್ ಎಲ್ಲರಿಗೂ ಅನಿವಾರ್ಯವಾಗಿಬಿಟ್ಟಿದೆ. ಆದರೆ, ಆರ್‌ಓ ವಾಟರ್ ಪ್ಯೂರಿಫೈಯರ್ ಬಗೆಗಿನ ಕಹಿ ಸತ್ಯವೊಂದು ಬಹಿರಂಗಗೊಂಡಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ. 

ವಾಸ್ತವವಾಗಿ, ಕಲುಷಿತ ನೀರನ್ನು ಶುದ್ಧಗೊಳಿಸುವ ಆರ್‌ಓ ಈ ಸಮಯದಲ್ಲಿ ನೈಸರ್ಗಿಕವಾಗಿ ಇರುವ ಕೆಲವು ಅಗತ್ಯ ಖನಿಜಗಳು ಮತ್ತು ವಿಟಮಿನ್‌ಗಳನ್ನು ಕೂಡ ತೆಗೆದುಹಾಕುತ್ತದೆ. ದೀರ್ಘ ಸಮಯದವರೆಗೆ ಈ ಆರ್‌ಓ ನೀರನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಿರುವ ವಿಟಮಿನ್ ಬಿ 12 ಕೊರತೆ ಉಂಟಾಗುತ್ತದೆ ಎಂಬ ಶಾಕಿಂಗ್ ಮಾಹಿತಿ ಇತ್ತೀಚಿನ ಸಂಶೋಧನೆಯಿಂದ ಬಹಿರಂಗಗೊಂಡಿದೆ.  

ಇದನ್ನೂ ಓದಿ- Magical Juices: ಈ ಮೂರು ತರಕಾರಿಗಳ ಜ್ಯೂಸ್ ಸೇವಿಸಿ ಹಲವು ಕಾಯಿಲೆಗಳಿಂದ ದೂರ ಉಳಿಯಿರಿ

ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದಾಗ ಏನಾಗುತ್ತದೆ? 
ವಿಟಮಿನ್ ಬಿ 12 ರಕ್ತಪರಿಚಲನಾ ವ್ಯವಸ್ಥೆ, ಸೂಕ್ಷ್ಮ ನರಗಳು ಮತ್ತು ರಕ್ತ ರಚನೆಗೆ ಅಗತ್ಯವಾದ ವಿಟಮಿನ್ ಆಗಿದೆ. ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದಾಗ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅವುಗಳೆಂದರೆ... 

ದೇಹದ ಸಮತೋಲನ ಕಾಯ್ದುಕೊಳ್ಳುವಲ್ಲಿ ತೊಂದರೆ:
ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದಾಗ ದೇಹದ ಸಮತೋಲನ ಕಾಯ್ದುಕೊಳ್ಳುವಲ್ಲಿ ತೊಂದರೆ ಉಂಟಾಗುತ್ತದೆ. ಇದು ಮೆದುಳಿನ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ಗರ್ಭಾವಸ್ಥೆಯಲ್ಲಿ ಸಮಸ್ಯೆ:
ಮಗುವಿನ ಬೆಳವಣಿಗೆಗೆ ವಿಟಮಿನ್ ಬಿ 12 ತುಂಬಾ ಅಗತ್ಯ. ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದಾಗ ಗರ್ಭಾವಸ್ಥೆಯಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ- Mouth Ulcer : ಬೇಸಿಗೆ ಬೇಗೆಗೆ ಬಾಯಲ್ಲಿ ಹುಣ್ಣು ಆಗುತ್ತಿದೆಯೇ..! ಹಾಗಿದ್ದರೇ ಇಲ್ಲಿದೆ ಪರಿಹಾರ

ರಕ್ತ ಹೀನತೆ: 
ವಿಟಮಿನ್ ಬಿ 12 ಕೊರತೆಯು ಮುಖ್ಯವಾಗಿ ದೇಹದಲ್ಲಿ ಮುಖ್ಯವಾಗಿ ರಕ್ತಹೀನತೆ ಕೊರತೆಗೆ ಕಾರಣವಾಗುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಮೂಲವಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News