Karnataka Election Exit Poll Result 2023 Live Updates and News in Kannada: ಮತದಾನ ಮುಗಿಯುತ್ತಿದ್ದಂತೆ ಈಗ ಎಲ್ಲರ ಕಣ್ಣು ಚುನಾವಣೋತ್ತರ ಸಮೀಕ್ಷೆಯ ಮೇಲಿದೆ, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ, ಒಂದೇ ಪಕ್ಷ ಪೂರ್ಣ ಬಹುಮತದೊಂದಿಗೆ ಬರುತ್ತಾ? ಅಥವಾ ಮತ್ತೆ ಅತಂತ್ರ ಸರ್ಕಾರವೇನಾದ್ರೂ ನಿರ್ಮಾಣವಾಗುತ್ತಾ? ಎನ್ನುವ ಪ್ರಶ್ನೆಗಳು ಈಗ ಜನರಲ್ಲಿ ಮೂಡಿವೆ.ಈಗಾಗಲೇ ಮತದಾನ ಪ್ರಭು ತನ್ನ ಮತವನ್ನು ಚಲಾಯಿಸುವ ಮೂಲಕ ತನ್ನ ಆಯ್ಕೆಯನ್ನು ಮಾಡಿದ್ದಾನೆ.ಆದರೆ ಅಧಿಕೃತ ಫಲಿತಾಂಶಕ್ಕಾಗಿ ಮೇ 13 ರ ವರೆಗೆ ಕಾಯಬೇಕಾಗುತ್ತದೆ.ಅದಕ್ಕೂ ಮೊದಲು ಹಲವಾರು ಏಜೆನ್ಸಿಗಳು ಹಾಗೂ ಮಾಧ್ಯಮಗಳು ಅಂತಿಮ ಫಲಿತಾಂಶಕ್ಕೂ ಮುನ್ನ ತನ್ನ ಅಂದಾಜು ಲೆಕ್ಕಾಚಾರದ ಮೂಲಕ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವುದನ್ನು ಹೇಳಲಿವೆ.ಈಗ ಜೀ ಕನ್ನಡ ನ್ಯೂಸ್ ಕೂಡ ಅದರ ಭಾಗವಾಗಿ ತನ್ನ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದೆ.
ಜೀ ಕನ್ನಡ ನ್ಯೂಸ್ ಮತ್ತು ಮ್ಯಾಟ್ರಿಜ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದನ್ನು ಸಮೀಕ್ಷೆ ಕಂಡುಕೊಂಡಿದೆ.ಕಾಂಗ್ರೆಸ್ ಪಕ್ಷಕ್ಕೆ 103 ರಿಂದ 118 ಸ್ಥಾನಗಳು ಲಭಿಸಿದರೆ, ಬಿಜೆಪಿಗೆ 79 ರಿಂದ 94 ಸ್ಥಾನಗಳು ಲಭಿಸಲಿವೆ ಇನ್ನೂ ಜೆಡಿಎಸ್ ಪಕ್ಷವು 25 ರಿಂದ 33 ಸ್ಥಾನಗಳನ್ನು ಪಡೆಯಲಿದೆ. ಇನ್ನೂ ಇತರರಿಗೆ 2 ರಿಂದ 5 ಸ್ಥಾನಗಳು ಸಿಗಲಿವೆ. ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ ಎನ್ನುವುದನ್ನು ಸಮೀಕ್ಷೆ ಹೇಳಿದೆ. ಚುನಾವಣಾ ಪ್ರಚಾರದುದ್ದಕ್ಕೂ ಸ್ಥಳೀಯ ಸಮಸ್ಯೆಗಳ ಮೇಲೆ ಕೇಂದ್ರಿಕರಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ಇನ್ನೂ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ನಂಬಿಕೆ ಹುಸಿಯಾಗಿದೆ.