ಬಂಗಾರದ ಈ ವಸ್ತು ಕಳೆದು ಹೋದರೆ ಸಿಗುವುದಂತೆ ಅಶುಭ ವಾರ್ತೆ ! ಸ್ಥಾನಮಾನದ ಮೇಲೂ ಆಗುವುದಂತೆ ಪ್ರಹಾರ !

Gold Lost meaning : ಚಿನ್ನವನ್ನು ಕಳೆದುಕೊಳ್ಳುವುದು ಅಂದರೆ ಜೀವನದಲ್ಲಿ ಎದುರಾಗುವ ಅಪಾಯದ ಮುನ್ಸೂಚನೆ ಎನ್ನುವುದನ್ನು ಶಕುನ ಶಾಸ್ತ್ರದಲ್ಲಿ ಹೇಳಲಾಗಿದೆ. ಶಕುನ ಶಾಸ್ತ್ರದ ಪ್ರಕಾರ ಯಾವ ಆಭರಣ ಕಳೆದುಕೊಂಡರೆ ಏನು ಅರ್ಥ ಎನ್ನುವುದನ್ನು ನೋಡೋಣ.   

Written by - Ranjitha R K | Last Updated : May 15, 2023, 01:08 PM IST
  • ಚಿನ್ನವನ್ನು ಗುರುವಿನ ಅಂಶವೆಂದು ಪರಿಗಣಿಸಲಾಗುತ್ತದೆ.
  • ಗ್ರಂಥಗಳ ಪ್ರಕಾರ ಚಿನ್ನವನ್ನು ಲಕ್ಷ್ಮೀ ರೂಪವೆಂದು ಕರೆಯಲಾಗುತ್ತದೆ.
  • ಚಿನ್ನವನ್ನು ಕಳೆದುಕೊಳ್ಳುವುದು ಅಂದರೆ ಅಪಾಯದ ಮುನ್ಸೂಚನೆ
ಬಂಗಾರದ ಈ ವಸ್ತು ಕಳೆದು ಹೋದರೆ ಸಿಗುವುದಂತೆ ಅಶುಭ ವಾರ್ತೆ ! ಸ್ಥಾನಮಾನದ ಮೇಲೂ ಆಗುವುದಂತೆ ಪ್ರಹಾರ ! title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಚಿನ್ನವನ್ನು ಗುರುವಿನ ಅಂಶವೆಂದು ಪರಿಗಣಿಸಲಾಗುತ್ತದೆ. ಗುರು ಗ್ರಹವು ವೈವಾಹಿಕ ಜೀವನ, ಸಂಪತ್ತು, ಆಸ್ತಿ ಇತ್ಯಾದಿಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಗ್ರಂಥಗಳ ಪ್ರಕಾರ ಚಿನ್ನವನ್ನು ಲಕ್ಷ್ಮೀ ರೂಪವೆಂದು ಕರೆಯಲಾಗುತ್ತದೆ. ಈ ಕಾರಣದಿಂದಲೇ ಚಿನ್ನ ಕಳೆದು ಹೋದರೆ ಲಕ್ಷ್ಮೀಯ ಜೊತೆಗೆ ಗುರುವಿನ ಪ್ರಭಾವವನ್ನು ಅಶುಭಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಚಿನ್ನವನ್ನು ಕಳೆದುಕೊಳ್ಳುವುದು ಅಂದರೆ ಜೀವನದಲ್ಲಿ ಎದುರಾಗುವ ಅಪಾಯದ ಮುನ್ಸೂಚನೆ ಎನ್ನುವುದನ್ನು ಶಕುನ ಶಾಸ್ತ್ರದಲ್ಲಿ ಹೇಳಲಾಗಿದೆ. ಶಕುನ ಶಾಸ್ತ್ರದ ಪ್ರಕಾರ ಯಾವ ಆಭರಣ ಕಳೆದುಕೊಂಡರೆ ಏನು ಅರ್ಥ ಎನ್ನುವುದನ್ನು ನೋಡೋಣ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹಿಳೆಯ ಮೂಗಿಗೆ ಧರಿಸಿರುವ ಚಿನ್ನ ಕಳೆದು ಹೋದರೆ, ಅದು ಮಾನಹಾನಿಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

ವ್ಯಕ್ತಿಯ ಚಿನ್ನದ ಉಂಗುರ ಕಳೆದುಹೋದರೆ, ಅದು ಆ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : ಸ್ನೇಹ ಎಷ್ಟೇ ಗಾಢವಾಗಿರಲಿ, ವೈವಾಹಿಕ ಜೀವನದ ಈ ಮೂರು ಗುಟ್ಟನ್ನು ಗೆಳೆಯರೊಂದಿಗೆ ಹಂಚಿಕೊಳ್ಳಬಾರದು !

ಒಬ್ಬ ವ್ಯಕ್ತಿಯು ತನ್ನ ಕಿವಿಯಲ್ಲಿ ಧರಿಸಿರುವ ಚಿನ್ನವು ಕಳೆದುಕೊಂಡರೆ ಅಶುಭ ಸುದ್ದಿಯನ್ನು ಕೇಳಲಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.

ಧರ್ಮಗ್ರಂಥಗಳ ಪ್ರಕಾರ, ಚಿನ್ನದ ಬಳೆಯನ್ನು ಕಳೆದುಕೊಳ್ಳುವುದು  ಬಹಳ ಅಶುಭವೆಂದು ಪರಿಗಣಿಸಲಾಗಿದೆ. ಇದು ಗೌರವ ನಷ್ಟದ ಸಂಕೇತ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯದಲ್ಲಿ ಚಿನ್ನದ ಸರವನ್ನು ಕಳೆದುಕೊಳ್ಳುವುದನ್ನು ಕೂಡಾ  ಅಶುಭವೆಂದು ಹೇಳಲಾಗುತ್ತದೆ. ಅದರ ನಷ್ಟವು ಸಂಪತ್ತಿನ ಇಳಿಕೆಯ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ :Weekly Horoscope: ಈ ವಾರ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸಿಗುತ್ತೆ ಕೈ ತುಂಬಾ ಹಣ!

ನಿಮ್ಮ ಚಿನ್ನವು ಕಳೆದುಹೋದರೆ, ಅದರ ದುಷ್ಪರಿಣಾಮಗಳನ್ನು ತಪ್ಪಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು :
ಚಿನ್ನವು ಗುರು ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ, ಒಬ್ಬ ವ್ಯಕ್ತಿಯು ತನ್ನ ಚಿನ್ನವನ್ನು ಕಳೆದುಕೊಂಡಿದ್ದರೆ, ಅವನು ಬೃಹಸ್ಪತಿ ಬೀಜ ಮಂತ್ರಗಳನ್ನು ಪಠಿಸಬೇಕು. ಇದರಿಂದ ಬರುವ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

ಚಿನ್ನದ ಬಣ್ಣ ಹಳದಿ. ಅದಕ್ಕಾಗಿಯೇ ಚಿನ್ನ ಕಳೆದುಕೊಂಡವರು ಹಳದಿ ವಸ್ತುಗಳನ್ನು ದಾನ ಮಾಡುವಂತೆ ಸಲಹೆ ನೀಡುತ್ತಾರೆ. ಇದರಿಂದ ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ದಾನಕ್ಕಾಗಿ ಗುರುವಾರವನ್ನು ಆಯ್ಕೆ ಮಾಡಬೇಕು.

ಇದನ್ನೂ ಓದಿ :Budh Grah Uday: ಈ 4 ರಾಶಿಯ ಜನರ ಮೇಲೆ ಹಣದ ಮಳೆಯಾಗುತ್ತದೆ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News