ಇಸ್ರೇಲ್, ಪೋಲೆಂಡ್‌ಗಳ ಸ್ಪರ್ಧೆಯನ್ನು ಮಣಿಸಲಿವೆ ನಿಖರ ಡ್ರೋನ್‌ಗಳು

ಎಲ್ಎಂಗಳು ಸಾಂಪ್ರದಾಯಿಕ ಯುಎವಿಗಳಿಗೆ ಹೋಲಿಸಿದರೆ ಹಲವು ಅನುಕೂಲತೆಗಳನ್ನು ಹೊಂದಿವೆ. ಮೊದಲನೆಯದಾಗಿ, ಗುರಿಯ ಮೇಲ್ಭಾಗದಲ್ಲಿ ದೀರ್ಘಾವಧಿಯ ತನಕ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, ಅಂತಿಮ ಕ್ಷಣದ ತನಕ ಕಾದು, ಪರಿಣಾಮಕಾರಿಯಾಗಿ ದಾಳಿ ನಡೆಸಲು ಸಾಧ್ಯವಾಗುತ್ತದೆ. ಎರಡನೆಯದಾಗಿ, ಅವುಗಳು ವಿವಿಧ ರೀತಿಯ ಪೇಲೋಡ್ ಅನ್ನು ಒಯ್ಯಬಲ್ಲವಾಗಿದ್ದು, ವಿವಿಧ ಗುರಿಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ದಾಳಿ ಸಂಘಟಿಸಲು ಅನುಕೂಲ ಕಲ್ಪಿಸುತ್ತದೆ. ಇನ್ನು ಮೂರನೆಯದಾಗಿ, ಎಲ್ಎಂಗಳು ಕಡಿಮೆ ವೆಚ್ಚದಾಯಕವಾಗಿದ್ದು, ಮಿಲಿಟರಿಗಳಿಗೆ ಕಡಿಮೆ ವೆಚ್ಚದಲ್ಲಿ ದಾಳಿ ಸಂಘಟಿಸಲು ಅನುಕೂಲಕರವಾಗಿದೆ.

Written by - Girish Linganna | Edited by - Yashaswini V | Last Updated : May 16, 2023, 03:09 PM IST
  • ನಾಗಾಸ್ತ್ರ 1 ಹಾಗೂ 2 ಲಾಯ್ಟರಿಂಗ್ ಮ್ಯುನಿಷನ್‌ಗಳಾಗಿದ್ದು, ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ (ಇಇಎಲ್) ಅಭಿವೃದ್ಧಿ ಪಡಿಸಿದೆ.
  • ಇಇಎಲ್ ಸಂಪೂರ್ಣವಾಗಿ ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್ (ಎಸ್ಐಐಎಲ್) ಮಾಲಿಕತ್ವದ ಸಂಸ್ಥೆಯಾಗಿದೆ.
  • ಎಲ್ಎಂಗಳನ್ನು ಶತ್ರು ವ್ಯಕ್ತಿಗಳು, ವಾಹನಗಳು ಹಾಗೂ ಉಪಕರಣಗಳ ಮೇಲೆ ದಾಳಿ ನಡೆಸುವುದು ಸೇರಿದಂತೆ, ವಿವಿಧ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಬಹುದು.
ಇಸ್ರೇಲ್, ಪೋಲೆಂಡ್‌ಗಳ ಸ್ಪರ್ಧೆಯನ್ನು ಮಣಿಸಲಿವೆ ನಿಖರ ಡ್ರೋನ್‌ಗಳು title=

2023ರ ಎಪ್ರಿಲ್ ತಿಂಗಳ ಅಂತ್ಯದ ವೇಳೆಯಲ್ಲಿ ಭಾರತೀಯ ಸೇನೆ ನಾಗಪುರ ಮೂಲದ ಸೋಲಾರ್ ಇಂಡಸ್ಟ್ರೀಸ್ ಜೊತೆ ನಾಗಾಸ್ತ್ರ ಲಾಯ್ಟರಿಂಗ್ ಮ್ಯುನಿಷನ್ಸ್ (ಎಲ್ಎಂ) ಪೂರೈಕೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಯ ಅಧಿಕಾರಿಯೊಬ್ಬರು ಈ ಕುರಿತು ಹೇಳಿಕೆ ನೀಡಿ, 'ಮೇಡ್ ಇನ್ ಇಂಡಿಯಾ' ಎಲ್ಎಂನಲ್ಲಿ 75%ಕ್ಕೂ ಹೆಚ್ಚು ದೇಶೀಯ ಉತ್ಪನ್ನಗಳಿದ್ದು, ಇದು ಇಸ್ರೇಲ್ ಮತ್ತು ಪೋಲೆಂಡ್ ಗಳು ಒದಗಿಸುವ ಆಯುಧಗಳಿಂದಲೂ ಉತ್ತಮ ಆಯ್ಕೆಗಳಾಗಿವೆ.

ನಾಗಾಸ್ತ್ರ 1 ಹಾಗೂ 2 ಲಾಯ್ಟರಿಂಗ್ ಮ್ಯುನಿಷನ್‌ಗಳಾಗಿದ್ದು, ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ (ಇಇಎಲ್) ಅಭಿವೃದ್ಧಿ ಪಡಿಸಿದೆ. ಇಇಎಲ್ ಸಂಪೂರ್ಣವಾಗಿ ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್ (ಎಸ್ಐಐಎಲ್) ಮಾಲಿಕತ್ವದ ಸಂಸ್ಥೆಯಾಗಿದೆ. ಎಲ್ಎಂಗಳನ್ನು ಶತ್ರು ವ್ಯಕ್ತಿಗಳು, ವಾಹನಗಳು ಹಾಗೂ ಉಪಕರಣಗಳ ಮೇಲೆ ದಾಳಿ ನಡೆಸುವುದು ಸೇರಿದಂತೆ, ವಿವಿಧ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಬಹುದು.

ಲಾಯ್ಟರಿಂಗ್ ಮ್ಯುನಿಷನ್ ಎಂದರೇನು?
ಲಾಯ್ಟರಿಂಗ್ ಮ್ಯುನಿಷನ್ (ಎಲ್ಎಂ) ಒಂದು ರೀತಿಯ ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ಆಗಿದ್ದು, ದಾಳಿ ನಡೆಸುವ ನಿರ್ದೇಶನ ನೀಡುವ ಮೊದಲು ಗುರಿಯ ಮೇಲೆ ದೀರ್ಘಕಾಲದ ತನಕ ಹಾರಾಟ ನಡೆಸಬಹುದು. ಎಲ್ಎಂಗಳಲ್ಲಿ ಸಾಮಾನ್ಯವಾಗಿ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಅವುಗಳು ಗುರಿಯನ್ನು ಗುರುತಿಸಿ, ಅವುಗಳನ್ನು ಹಿಂಬಾಲಿಸಬಲ್ಲವು. ಅವುಗಳು ಸಣ್ಣ ಆಯುಧಗಳು, ಪ್ರಬಲ ಸ್ಫೋಟಕಗಳು ಹಾಗೂ ಕ್ಷಿಪಣಿಗಳನ್ನೂ ಒಯ್ಯಬಲ್ಲವು.

ಎಲ್ಎಂಗಳು ಸಾಂಪ್ರದಾಯಿಕ ಯುಎವಿಗಳಿಗೆ ಹೋಲಿಸಿದರೆ ಹಲವು ಅನುಕೂಲತೆಗಳನ್ನು ಹೊಂದಿವೆ. ಮೊದಲನೆಯದಾಗಿ, ಗುರಿಯ ಮೇಲ್ಭಾಗದಲ್ಲಿ ದೀರ್ಘಾವಧಿಯ ತನಕ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, ಅಂತಿಮ ಕ್ಷಣದ ತನಕ ಕಾದು, ಪರಿಣಾಮಕಾರಿಯಾಗಿ ದಾಳಿ ನಡೆಸಲು ಸಾಧ್ಯವಾಗುತ್ತದೆ. ಎರಡನೆಯದಾಗಿ, ಅವುಗಳು ವಿವಿಧ ರೀತಿಯ ಪೇಲೋಡ್ ಅನ್ನು ಒಯ್ಯಬಲ್ಲವಾಗಿದ್ದು, ವಿವಿಧ ಗುರಿಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ದಾಳಿ ಸಂಘಟಿಸಲು ಅನುಕೂಲ ಕಲ್ಪಿಸುತ್ತದೆ. ಇನ್ನು ಮೂರನೆಯದಾಗಿ, ಎಲ್ಎಂಗಳು ಕಡಿಮೆ ವೆಚ್ಚದಾಯಕವಾಗಿದ್ದು, ಮಿಲಿಟರಿಗಳಿಗೆ ಕಡಿಮೆ ವೆಚ್ಚದಲ್ಲಿ ದಾಳಿ ಸಂಘಟಿಸಲು ಅನುಕೂಲಕರವಾಗಿದೆ.

ಇದನ್ನೂ ಓದಿ- ಮುಸ್ಲಿಮರ ರಾಜ್ಯ, ಮುಸ್ಲಿಂ ರಾಜ್ಯವಲ್ಲ: ಭಯೋತ್ಪಾದನೆಯ ವಿಷಯದಲ್ಲಿ ತಜಿಕಿಸ್ತಾನದ ಕಠಿಣ ನಿಲುವು

ನೂತನವಾದ ತಂತ್ರಜ್ಞಾನ!
ಎಲ್ಎಂಗಳು ಇತ್ತೀಚೆಗೆ ಬೆಳಕಿಗೆ ಬಂದಿರುವ ಹೊಸ ತಂತ್ರಜ್ಞಾನವಾಗಿದ್ದರೂ, ಅವುಗಳು ಜಗತ್ತಿನಾದ್ಯಂತ ಮಿಲಿಟರಿಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ. ಅವುಗಳನ್ನು ವಿಶೇಷವಾಗಿ ಬಂಡಾಯ ನಿಗ್ರಹ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಬಳಸಬಹುದು. ಇಂತಹ ಸಂದರ್ಭಗಳಲ್ಲಿ ಎಲ್ಎಂಗಳು ಅತ್ಯಂತ ನಿಖರವಾಗಿ ಗುರಿಯನ್ನು ಗುರುತಿಸಿ, ದಾಳಿ ನಡೆಸಬಲ್ಲವು.

ನಾಗಾಸ್ತ್ರ 1 ಎನ್ನುವುದು ಮಾನವರು ಒಯ್ಯಬಲ್ಲ ಎಲ್ಎಂ ಆಗಿದ್ದು, ಕೇವಲ ಒಂದು ಬೆನ್ನಿನ ಮೇಲಿನ ಚೀಲದಿಂದ ಉಡಾವಣೆಗೊಳಿಸಬಹುದು. ಇದು ಗರಿಷ್ಠ 15 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದ್ದು, 60 ನಿಮಿಷಗಳ ಹಾರಾಟ ಸಾಮರ್ಥ್ಯ ಹೊಂದಿದೆ. ಎಲ್ಎಂನಲ್ಲಿ ವಿವಿಧ ರೀತಿಯ ಸೆನ್ಸರ್‌ಗಳು, ಕ್ಯಾಮರಾ, ಥರ್ಮಲ್ ಇಮೇಜರ್, ಲೇಸರ್ ರೇಂಜ್ ಫೈಂಡರ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಲ್ಲಿ ವಿವಿಧ ರೀತಿಯ ಪೇಲೋಡ್‌ಗಳನ್ನು ಅಳವಡಿಸಬಹುದಾಗಿದ್ದು, ಪ್ರಬಲ ಸ್ಫೋಟಕ ಸಿಡಿತಲೆಗಳು ಮತ್ತು ಮಾರಣಾಂತಿಕವಲ್ಲದ ಪೇಲೋಡ್‌ಗಳನ್ನೂ ಅಳವಡಿಸಬಹುದು.

ನಾಗಾಸ್ತ್ರ 2 ಒಂದು ವಾಹನ ಆಧಾರಿತ ಎಲ್ಎಂ ಆಗಿದ್ದು, ಇದನ್ನು ಕಾರ್, ಟ್ರಕ್, ಹಾಗೂ ಆರ್ಮರ್ಡ್ ವೆಹಿಕಲ್ ಸೇರಿದಂತೆ ಹಲವು ರೀತಿಯ ವಾಹನಗಳಿಂದ ಉಡಾಯಿಸಬಹುದು. ಇದು 25 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದ್ದು, 90 ನಿಮಿಷಗಳ ಹಾರಾಟ ಸಾಮರ್ಥ್ಯ ಹೊಂದಿದೆ. ಈ ಎಲ್ಎಂನಲ್ಲೂ ವಿವಿಧ ಸೆನ್ಸರ್‌ಗಳು, ಕ್ಯಾಮರಾ, ಥರ್ಮಲ್ ಇಮೇಜರ್, ಹಾಗೂ ಲೇಸರ್ ರೇಂಜ್ ಫೈಂಡರ್‌ಗಳಿವೆ. ಇದರಲ್ಲೂ ಪ್ರಬಲ ಸ್ಫೋಟಕ ಸಿಡಿತಲೆಗಳು ಮತ್ತು ಮಾರಣಾಂತಿಕವಲ್ಲದ ಪೇಲೋಡ್‌ಗಳನ್ನು ಅಳವಡಿಸಬಹುದು.

ನಾಗಾಸ್ತ್ರ 1 ಹಾಗೂ ನಾಗಾಸ್ತ್ರ 2 ಎಲ್ಎಂಗಳಲ್ಲಿ ಜಿಪಿಎಸ್ ನಿರ್ದೇಶಿತ ನ್ಯಾವಿಗೇಶನ್ ವ್ಯವಸ್ಥೆಗಳಿದ್ದು, ಅವುಗಳು ಗುರಿಯ ಮೇಲೆ ಹಾರಾಟ ನಡೆಸಿ, ಅತ್ಯಂತ ನಿಖರ ದಾಳಿ ಸಂಘಟಿಸಲು ನೆರವಾಗುತ್ತವೆ. ಈ ಎಲ್ಎಂಗಳಲ್ಲಿ ಸ್ವಯಂನಾಶಕ ವ್ಯವಸ್ಥೆಗಳೂ ಇದ್ದು, ಶತ್ರುವಿನ ಕೈಗೆ ಸೇರದಂತೆ ತಡೆಯುತ್ತವೆ.

ಇದನ್ನೂ ಓದಿ- ಭಾವನಾತ್ಮಕ ಮತಯಾಚನೆ ಮತ್ತು ಧ್ರುವೀಕರಣ: ಕರ್ನಾಟಕದಲ್ಲಿ ತಿರುಮಂತ್ರವಾಯಿತೇ ಬಿಜೆಪಿಯ ಗೆಲುವಿನ ತಂತ್ರ?

ನಾಗಾಸ್ತ್ರ 1 ಹಾಗೂ ನಾಗಾಸ್ತ್ರ 2 ಭಾರತೀಯ ಸೇನಾಪಡೆಗಳಿಗೆ ಮಹತ್ವದ ತಾಂತ್ರಿಕ ಮೇಲುಗೈ ಒದಗಿಸುತ್ತವೆ. ಈ ಎಲ್ಎಂಗಳು ಭಾರತೀಯ ಸೇನಾಪಡೆಗಳಿಗೆ ಬಹುಮುಖ ಸಾಮರ್ಥ್ಯ ಒದಗಿಸಿ, ವಿವಿಧ ರೀತಿಯ ಅಪಾಯಗಳನ್ನು ಸೋಲಿಸಲು ಅನುಕೂಲ ಕಲ್ಪಿಸುತ್ತವೆ. ಈ ಎಲ್ಎಂಗಳು ಸ್ವಾವಲಂಬಿಯಾಗುವ ಗುರಿ ಹೊಂದಿರುವ ಭಾರತೀಯ ಸೇನೆಗೆ ಪೂರಕವಾಗಿವೆ.

ನಾಗಾಸ್ತ್ರ 1 ಹಾಗೂ ನಾಗಾಸ್ತ್ರ 2ರ ಪ್ರಮುಖ ವೈಶಿಷ್ಟ್ಯಗಳು:
• ವ್ಯಾಪ್ತಿ: ನಾಗಾಸ್ತ್ರ 1 ಅಂದಾಜು 15 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದರೆ, ನಾಗಾಸ್ತ್ರ 2 ಎಲ್ಎಂ 25 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.

• ಸಹಿಷ್ಣುತೆ: ನಾಗಾಸ್ತ್ರ 1 ಎಲ್ಎಂ 60 ನಿಮಿಷಗಳ ಹಾರಾಟ ನಡೆಸಬಲ್ಲದು. ನಾಗಾಸ್ತ್ರ 2 ಬಹುತೇಕ 90 ನಿಮಿಷಗಳ ಹಾರಾಟ ನಡೆಸಬಲ್ಲದು.

• ಪೇಲೋಡ್: ವಿವಿಧ ರೀತಿಯ ಪೇಲೋಡ್ ಹೊಂದಬಲ್ಲವಾಗಿದ್ದು, ಪ್ರಬಲ ಸ್ಫೋಟಕ ಸಿಡಿತಲೆಗಳು, ಮಾರಣಾಂತಿಕವಲ್ಲದ ಪೇಲೋಡ್‌ಗಳನ್ನು ಒಯ್ಯಬಲ್ಲವು.

• ನ್ಯಾವಿಗೇಶನ್: ಜಿಪಿಎಸ್ ನಿರ್ದೇಶಿತ ನ್ಯಾವಿಗೇಶನ್ ವ್ಯವಸ್ಥೆ.

• ಸ್ವಯಂ ನಾಶಕ ವ್ಯವಸ್ಥೆ: ಇವುಗಳಲ್ಲಿ ಸ್ವಯಂನಾಶಕ ವ್ಯವಸ್ಥೆ ಅಳವಡಿಸಲಾಗಿದ್ದು, ಆ ಮೂಲಕ ಶತ್ರುಗಳ ಕೈಗೆ ಸಿಗದಂತೆ ತಡೆಯಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News