ಇಡೀ ಜಗತ್ತಿಗೆ ಸವಾಲಾಗಿದ್ದ ಮಹಾಮಾರಿ ಏಡ್ಸ್ ವೈರಸ್ಗಳಿಂದ ಜೀವ ಉಳಿಸಬಹುದೆಂದು ಲಂಡನ್ ವೈದ್ಯರು ಸಾಧಿಸಿ ತೋರಿಸಿದ್ದಾರೆ.
ಯುಎಸ್ ಮೂಲದ ಒಬ್ಬ ವ್ಯಕ್ತಿ ತಿಮೋತಿ ರೇ ಬ್ರೌನ್ ಅವರನ್ನು ಏಡ್ಸ್ ವೈರಾಣುಗಳಿಂದ ಕಾಪಾಡುವಲ್ಲಿ ಜರ್ಮನಿಯ ಬರ್ಲಿನ್ ವೈದ್ಯರು ಮೊದಲಿಗೆ ಯಶಸ್ಸು ಕಂಡಿದ್ದರು. ಈ ಪ್ರಕರಣದ 12 ವರ್ಷಗಳ ನಂತರ ಈ ಲಂಡನ್ ಮೂಲದ ವ್ಯಕ್ತಿ ಎಚ್ಐವಿ ಪಾಸಿಟಿವ್ ನಿಂದ ಮುಕ್ತವಾಗಿರುವ ಜಗತ್ತಿನ ಎರಡನೇ ವ್ಯಕ್ತಿಯಾಗಿದ್ದಾರೆ.
ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರಲ್ಲಿ ಏಡ್ಸ್ ವೈರಸ್ ಕಾಣಿಸಿಕೊಂಡಿತ್ತು. ಇದನ್ನು ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟ್(ಕಾಂಡಕೋಶ ಕಸಿ) ಮೂಲಕ ಗುಣಪಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಮೂಲಕ ಮಹಾಮಾರಿ ಏಡ್ಸ್ ಕಾಯಿಲೆಗೆ ಚಿಕಿತ್ಸೆಯ ಮೂಲಕ ಗುಣಪಡಿಸುವ ಮಹತ್ತರ ಸಾಧನೆಯನ್ನು ಮಾಡಿದ್ದಾರೆ.
ಎಚ್ಐವಿ ನಿರೋಧಕ ದಾನಿಯಿಂದ ಕಾಂಡಕೋಶ ಕಸಿ ಬಳಿಕ ಲಂಡನ್ ಮನುಷ್ಯನನ್ನು ಗುಣಪಡಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಆದಾಗ್ಯೂ, ಮೂಳೆಯ ಮಜ್ಜೆಯ ಕಸಿ ಸಾಂಪ್ರದಾಯಿಕವಾಗಿ ಅಪಾಯಕಾರಿ ಮತ್ತು ನೋವಿನಿಂದ ಕೂಡಿದೆ.
2003 ರಲ್ಲಿ ಹೆಚ್ಐವಿ ರೋಗಾಣುಗಳು ಈ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದು, 2012 ರಲ್ಲಿ ಸೋಂಕು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು. 2016 ರಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಅವರು ಕಾಂಡಕೋಶ ಕಸಿಗೆ ಒಪ್ಪಿದ್ದರು. ಅದರಂತೆ ದಾನಿಯೊಬ್ಬರ ಸಹಾಯದಿಂದ ಕಸಿ ಚಿಕಿತ್ಸೆ ನಡೆಸಿದ ವೈದ್ಯರು, ಹೆಚ್ಐವಿ ವೈರಾಣುಗಳಿಂದ ಜೀವ ಉಳಿಸಲು ಯಶಸ್ವಿಯಾಗಿದ್ದಾರೆ.
ಕಾಂಡಕೋಶ ಕಸಿಯ ಬಳಿಕ ರೋಗಿಯ ಪ್ರತಿರೋಧಿತ ಶಕ್ತಿ ಹೆಚ್ಚಾಗಿರುವುದನ್ನು ವೈದ್ಯರು ಗಮನಿಸಿದರು.
ಕಾಂಡಕೋಶ ಕಸಿ ಚಿಕಿತ್ಸೆ ಪಡೆದು 18 ತಿಂಗಳು ಕಳೆದರೂ ರೋಗಿಯ ದೇಹದಲ್ಲಿ ಯಾವುದೇ ರೀತಿ ಸೋಂಕಿನ ವೈರಾಣುಗಳು ಪತ್ತೆಯಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಈ ವಿಧಾನವು ದುಬಾರಿ, ಸಂಕೀರ್ಣ ಮತ್ತು ಅಪಾಯಕಾರಿ. ಇದನ್ನು ಇತರರಿಗೆ ಮಾಡಲು, ಉತ್ತರ ಐರೋಪ್ಯ ವಂಶದವರಲ್ಲಿ ಕೆಲವರು ಸರಿಯಾದ ಪ್ರಮಾಣದ ದಾನಿಗಳನ್ನು ಕಂಡುಕೊಳ್ಳಬೇಕಾಗಿರುತ್ತದೆ - ಅವು ವೈರಸ್ಗೆ ನಿರೋಧಕವಾಗಿಸುವ ಸಿಸಿಆರ್ 5 ರೂಪಾಂತರವನ್ನು ಹೊಂದಿವೆ.
CCR5 ಪ್ರತಿರೋಧವು ಏಕೈಕ ಕೀಲಿಯೇ ಎಂಬುದು ಸ್ಪಷ್ಟವಾಗಿಲ್ಲವೆಂದು ತಜ್ಞರು ಹೇಳಿದ್ದಾರೆ. ಬರ್ಲಿನ್ ಮತ್ತು ಲಂಡನ್ ರೋಗಿಗಳಿಬ್ಬರ ಎಚ್ಐವಿ ಸೋಂಕಿತ ಜೀವಕೋಶಗಳ ನಷ್ಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರಬಹುದು ಎಂದು ಗುಪ್ತಾ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ವೈದ್ಯ ಕೇತ್, ಹೆಚ್ ಐವಿ ರೋಗಾಣುಗಳ ಸೋಂಕನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅಲ್ಲದೇ ಈ ಟ್ರಾನ್ಸ್ ಪ್ಲಾಂಟ್ ಮೂಲಕ ಏಡ್ಸ್ ವೈರಸ್ ಗಳನ್ನು ನಿರ್ಮೂಲನೆ ಮಾಡುವುದು ಸರಳ ವಿಧಾನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.