ʼಬಜಾರ್ ಹುಡ್ಗʼನ ಭರ್ಜರಿ ಬಾಡಿ ಲುಕ್‌..! ಸಿಕ್ಸ್‌ ಪ್ಯಾಕ್ಸ್‌ನಲ್ಲಿ ಮಿಂಚಿದ ಧನ್ವೀರ್

ಸ್ಯಾಂಡಲ್‌ವುಡ್‌ ನಟ ಧನ್ವೀರ್‌ ಗೌಡ ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಡ್ತಾರೆ. ಪ್ರತಿ ಸಿನಿಮಾಗಾಗಿ ಬೇಜಾನ್ ಕಸರತ್ತು ಮಾಡ್ತಾರೆ. ಇದೀಗ ಧನ್ವೀರ್‌ ಸಿಕ್ಸ್ ಪ್ಯಾಕ್ ಕ್ಲಬ್ ಸೇರಿದ್ದು, ಹುರಿಗೊಳಿಸಿದ ಕಟ್ಟುಮಸ್ತಾದ ದೇಹ, ಉಕ್ಕಿನ ತೋಳುಗಳಲ್ಲಿ ಧನ್ವೀರ್ ದರ್ಶನ ಕೊಟ್ಟಿರುವ ಝಲಕ್ ವಿಡಿಯೋ ಇಲ್ಲಿದೆ ನೋಡಿ..

Written by - YASHODHA POOJARI | Edited by - Krishna N K | Last Updated : May 17, 2023, 04:05 PM IST
  • ಸಿಕ್ಸ್ ಪ್ಯಾಕ್ ಕ್ಲಬ್ ಸೇರಿ ʼಶೋಕ್ದಾರ್ʼ ಖ್ಯಾತಿಯ ಧನ್ವೀರ್ ಗೌಡ.
  • ಕಟ್ಟುಮಸ್ತಾದ ದೇಹ, ಉಕ್ಕಿನ ತೋಳುಗಳಲ್ಲಿ ಧನ್ವೀರ್ ದರ್ಶನ.
  • ಬಜಾರ್ ಹುಡ್ಗʼನ ಭರ್ಜರಿ ಬಾಡಿ ಲುಕ್‌ನ ವಿಡಿಯೋ ವೈರಲ್‌.
ʼಬಜಾರ್ ಹುಡ್ಗʼನ ಭರ್ಜರಿ ಬಾಡಿ ಲುಕ್‌..! ಸಿಕ್ಸ್‌ ಪ್ಯಾಕ್ಸ್‌ನಲ್ಲಿ ಮಿಂಚಿದ ಧನ್ವೀರ್  title=

Dhanveer Gowda : ಬಜಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ʼಶೋಕ್ದಾರ್ʼ ಖ್ಯಾತಿಯ ಧನ್ವೀರ್ ಗೌಡ ಕೈವ ಹಾಗೂ ವಾಮನ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಶಂಕರ್ ರಾಮನ್ ನಿರ್ದೇಶನದ ವಾಮನ ಹಾಗೂ ಜಯತೀರ್ಥ ನಿರ್ದೇಶನದ ಕೈವ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಈ ಚಿತ್ರಗಳ ಬಿಡುಗಡೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಶೋಕ್ದಾರ್ ಧನ್ವೀರ್ ಬೇರ್ ಬಾಡಿಯಲ್ಲಿ ದರ್ಶನ ಕೊಟ್ಟಿದ್ದಾರೆ.

ಹೇಳಿಕೇಳಿ ಧನ್ವೀರ್ ಫಿಟ್ನೆಸ್ ಗೆ ಹೆಚ್ಚು ಒತ್ತು ಕೊಡುವವರು. ಪ್ರತಿ ಸಿನಿಮಾಕ್ಕಾಗಿ ಬೇಜಾನ್ ಕಸರತ್ತು ನಡೆಸುವ ಅವರೀಗ ಸಿಕ್ಸ್ ಪ್ಯಾಕ್ ಕ್ಲಬ್ ಸೇರಿದ್ದಾರೆ. ಹುರಿಗೊಳಿಸಿದ ಕಟ್ಟುಮಸ್ತಾದ ದೇಹ, ಉಕ್ಕಿನ ತೋಳುಗಳಲ್ಲಿ ಧನ್ವೀರ್ ದರ್ಶನ ಕೊಟ್ಟಿರುವ ಝಲಕ್ ನೋಡ್ತಿದ್ರೆ ಬಾಡಿ ಬಿಲ್ಡರ್ ಗಳೇ ನಾಚುವಂತೆ ಕಸರತ್ತು ಮಾಡಿರುವುದು ಗೊತ್ತಾಗ್ತಿದೆ.

ಇದನ್ನೂ ಓದಿ: Shruti Haasan : ಕಮಲ್‌ ಪುತ್ರಿಯ ಅಂಗಾಂಗ ವೈಭೋಗ ದರ್ಶನ..! ಫೋಟೋಸ್‌ ನೋಡಿ

ಇಷ್ಟೆಲ್ಲಾ ಕಷ್ಟಪಟ್ಟು ದೇಹವನ್ನು ಹುರಿಗೊಳಿಸಿರುವ ಧನ್ವೀರ್ ಗೌಡ ಮುಂದಿನ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ. ಮಾಸ್,ಲವರ್ ಬಾಯ್ ಹೀಗೆ ಯಾವುದೇ ಕೊಟ್ಟರು ಅದ್ಭುತವಾಗಿ ನಟಿಸುವ ಧನ್ವೀರ್ ಬಜಾರ್ ಚಿತ್ರದಲ್ಲಿ ಮಾಸ್ ಅವತಾರದಲ್ಲಿ, ಬೈ ಟು ಲವ್ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅವರೀಗ  ವಾಮನ ಹಾಗೂ ಕೈವ ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಮತ್ತೊಮ್ಮೆ ಚಿತ್ರರಸಿಕರನ್ನು ರಂಜಿಸಲು ಅಣಿಯಾಗಿದ್ದಾರೆ. ಒಂದಷ್ಟು ಹೊಸ ಕಥೆ ಕೇಳಿರುವ ಅವರು ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಿದ್ದಾರೆ. ಹೊಸ ಸಿನಿಮಾಗಾಗಿ ಬಜಾರ್ ಹುಡ್ಗ ಈ ಪಾಟಿಗೆ ಕಸರತ್ತು ಮಾಡಿರೋದಾ ಅನ್ನೋದು ಸದ್ಯದಲ್ಲಿ ರಿವೀಲ್ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News