ರಾಜಕೀಯ ನಾಯಕರ ವೇತನ: ಸಿಎಂ, ಸಚಿವರ ಸಂಬಳ ಎಷ್ಟಿರುತ್ತೆ?

Salary of political leaders: ಕರ್ನಾಟಕದಲ್ಲಿ ನಾಳೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ 30 ಮಂದಿ ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : May 19, 2023, 05:25 PM IST
  • 2015ರಿಂದ ಮುಖ್ಯಮಂತ್ರಿ, ಸಚಿವರು, ಸಭಾಪತಿ, ಉಪ ಸಭಾಪತಿ, ಸ್ಪೀಕರ್, ಉಪಸಭಾಪತಿಗಳ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿರಲಿಲ್ಲ.
  • 2022ರಲ್ಲಿ ಮುಖ್ಯಮಂತ್ರಿ, ಸಚಿವರು, ಸ್ಪೀಕರ್​ ಮತ್ತು ಉಪ ಸ್ಪೀಕರ್​ ಮತ್ತು ಶಾಸಕರ ವೇತನ ಶೇಕಡಾ 50ರಿಂದ 60ರಷ್ಟು ಹೆಚ್ಚಿಸಲಾಯಿತು.
ರಾಜಕೀಯ ನಾಯಕರ ವೇತನ: ಸಿಎಂ, ಸಚಿವರ ಸಂಬಳ ಎಷ್ಟಿರುತ್ತೆ? title=

Karnataka CM, Ministers salary: ಕರ್ನಾಟಕದಲ್ಲಿ ನಾಳೆಯಿಂದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಜೋಡೆತ್ತು ಸರ್ಕಾರ ರಚನೆಗೆ ಈಗಾಗಲೇ ಸಕಲ ಸಿದ್ಧತೆ ಭರದಿಂದ ಸಾಗಿದೆ. ನಾಳೆ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆ ಶಿವಕುಮಾರ್​ ಪಡಗ್ರಹಣ ಮಾಡಲಿದ್ದಾರೆ. ಅವರೊಂದಿಗೆ  30 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಬಂಧಿಸಿದ್ದ ಕೋವಿಡ್​ ಆತಂಕ ಕೊಂಚ ಮಟ್ಟಿಗೆ ತಣ್ಣಗಾದ ಬಳಿಕ ಕಳೆದ ವರ್ಷದ ಫೆಬ್ರವರಿಯಲ್ಲಿ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರು ಮತ್ತು ವಿಧಾನಪರಿಷತ್​ ಸದಸ್ಯರು ಒಕ್ಕೊರಲಿನಿಂದ  ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ, 2022 ಮತ್ತು ಕರ್ನಾಟಕ ಶಾಸಕಾಂಗ ವೇತನಗಳು, ಪಿಂಚಣಿಗಳು ಮತ್ತು ಭತ್ಯೆಗಳು (ತಿದ್ದುಪಡಿ) ಮಸೂದೆ, 2022ಕ್ಕೆ ಒಪ್ಪಿಗೆ ಸೂಚಿಸಿದ್ದರು. 

ಇದನ್ನೂ ಓದಿ- ಸಿಎಂ ಪದಗ್ರಹಣ: ಕಂಠೀರವ ಸ್ಟೇಡಿಯಂಗೆ ಕನೆಕ್ಟ್ ಆಗೋ ರಸ್ತೆ ಮಾರ್ಗ ಬದಲಾವಣೆ

ವಾಸ್ತವವಾಗಿ, 2015ರಿಂದ ಮುಖ್ಯಮಂತ್ರಿ, ಸಚಿವರು, ಸಭಾಪತಿ, ಉಪ ಸಭಾಪತಿ, ಸ್ಪೀಕರ್, ಉಪಸಭಾಪತಿಗಳ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿರಲಿಲ್ಲ.  2022ರಲ್ಲಿ ಮುಖ್ಯಮಂತ್ರಿ, ಸಚಿವರು, ಸ್ಪೀಕರ್​ ಮತ್ತು ಉಪ ಸ್ಪೀಕರ್​ ಮತ್ತು ಶಾಸಕರ ವೇತನ ಶೇಕಡಾ 50ರಿಂದ 60ರಷ್ಟು ಹೆಚ್ಚಿಸಲಾಯಿತು. 

ಇದನ್ನೂ ಓದಿ- ಸಚಿವ ಸ್ಥಾನಕ್ಕೆ ಶಾಸಕರ ನಡುವೆ ಭಾರಿ ಪೈಪೋಟಿ: ಸಿದ್ದು ಬಣಕ್ಕೆ ಎಷ್ಟು..? ಡಿಕೆ ಬಣಕ್ಕೆ ಎಷ್ಟು..?

ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ವೇತನ ಎಷ್ಟಿರುತ್ತದೆ? ಸಚಿವರ ವೇತನ ಎಷ್ಟು? ಸ್ಪೀಕರ್​ ಮತ್ತು ಉಪ ಸ್ಪೀಕರ್​ ಸಂಬಳ ಎಷ್ಟಿರುತ್ತೆ..?

ಮುಖ್ಯಮಂತ್ರಿ, ಸ್ಪೀಕರ್​ ಮತ್ತು ಸಭಾಪತಿ
ವೇತನ: 75 ಸಾವಿರ ರೂ. (ಪ್ರತಿ ತಿಂಗಳಿಗೆ)
===========
ವಿರೋಧ ಪಕ್ಷದ ನಾಯಕರ ವೇತನ
ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿ
===========
ಗೃಹ ಭತ್ಯೆ:
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು,
ಉಪ ಸ್ಪೀಕರ್ ಮತ್ತು ಉಪ ಸಭಾಪತಿ:
1.2 ಲಕ್ಷ ರೂ. (ಪ್ರತಿ ತಿಂಗಳಿಗೆ)
-----------
ಸ್ಪೀಕರ್​ ಮತ್ತು ಸಭಾಪತಿಗೆ
1.6 ಲಕ್ಷ ರೂ. (ಪ್ರತಿ ತಿಂಗಳಿಗೆ)
===========
ಮನೆ ನಿರ್ವಹಣಾ ಭತ್ಯೆ 
35 ಸಾವಿರ ರೂ. ಪ್ರತಿ ತಿಂಗಳಿಗೆ
===========
ಇಂಧನ ಭತ್ಯೆ 
ಪ್ರತಿ ತಿಂಗಳಿಗೆ 2 ಸಾವಿರ ಲೀಟರ್​ ಇಂಧನ
=========
ಪ್ರಯಾಣ ಭತ್ಯೆ:
ಪ್ರತಿ ಕಿಲೋ ಮೀಟರ್‌ಗೆ 40 ರೂ.
=========
ಅತಿಥಿ ಭತ್ಯೆ
4 ರಿಂದ 4.5 ಲಕ್ಷ ರೂ. (ಪ್ರತಿ ತಿಂಗಳಿಗೆ)

ಮಂತ್ರಿಗಳ ವೇತನ: ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿ. ಉಳಿದಂತೆ ಮುಖ್ಯಮಂತ್ರಿಗಳಿಗೆ ಸಿಗುವ ಭತ್ಯೆಗಳು ಸಚಿವರಿಗೆ ಸಿಗುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News