ಲೋಕಸಭಾ ಚುನಾವಣೆ 2019: 18-19 ವಯಸ್ಸಿನ 1.5 ಕೋಟಿ ಮತದಾರರು

543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 11, ಎಪ್ರಿಲ್ 18, ಏಪ್ರಿಲ್ 23, ಎಪ್ರಿಲ್ 29, ಮೇ 6, ಮೇ 12 ಮತ್ತು ಮೇ 19 ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 90 ಕೋಟಿ ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ.

Last Updated : Mar 11, 2019, 09:28 AM IST
ಲೋಕಸಭಾ ಚುನಾವಣೆ 2019: 18-19 ವಯಸ್ಸಿನ 1.5 ಕೋಟಿ ಮತದಾರರು title=
File Image

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ 18-19 ವರ್ಷದೊಳಗಿನ 1.5 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದು, ಮೊದಲ ಬಾರಿಗೆ ತಮ್ಮ ಮತ ಚಲಾಯಿಸಲಿದ್ದಾರೆ. 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 11ರಿಂದ ಒಟ್ಟು ಏಳು ಹಂತಗಳಲ್ಲಿ ನಡೆಯಲಿರುವ ಈ ಮತದಾನ ಪ್ರಕ್ರಿಯೆಯಲ್ಲಿ ದಾಖಲೆ ಮಟ್ಟದಲ್ಲಿ ಮತ ಚಲಾಯಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯುವ ಜನತೆಗೆ ಕರೆ ನೀಡಿದ್ದಾರೆ.

18-19 ವರ್ಷ ವಯಸ್ಸಿನ ಈ ಮತದಾರರು ಒಟ್ಟಾರೆ ಮತದಾರರ ಪೈಕಿ ಶೇ. 1.66 ರಷ್ಟು ಇದ್ದಾರೆ. ಈ ವರ್ಷದ ಜನವರಿ 1 ರಂದು 18 ವರ್ಷ ತುಂಬಿರುವ ಎಲ್ಲ ನಾಗರಿಕರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ಅವಕಾಶ ಸಿಗಲಿದೆ.

"2019 ರ ಜನವರಿಯಲ್ಲಿ ಅಂತಿಮವಾಗಿ ಪ್ರಕಟವಾದ ಇ-ರೋಲ್ಗಳ ಪ್ರಕಾರ ದೇಶದಲ್ಲಿ 2014 ರಲ್ಲಿ ಒಟ್ಟು ಮತದಾರರು 814.5 ಮಿಲಿಯನ್ ಇದ್ದರು. 2019ರಲ್ಲಿ ಸುಮಾರು 900 ಮಿಲಿಯನ್ ಮತದಾರರಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 84 ದಶಲಕ್ಷಕ್ಕಿಂತಲೂ ಹೆಚ್ಚಿನ ಮತದಾರರಿದ್ದಾರೆ. 15 ಮಿಲಿಯನ್ ಮತದಾರರು 18-19 ವರ್ಷ ವಯಸ್ಸಿನವರಾಗಿದ್ದಾರೆ ಒಟ್ಟು 18 ರಿಂದ 19 ವರ್ಷ ವಯಸ್ಸಿನ ಮತದಾರರು ಒಟ್ಟು ಮತದಾರರಲ್ಲಿ ಶೇ. 1.66 ರಷ್ಟು ಮತದಾರರಾಗಿದ್ದಾರೆ ಎಂದು ಚುನಾವಣಾ ಆಯೋಗ ಭಾನುವಾರ ತಿಳಿಸಿದೆ.

ಚುನಾವಣಾ ಆಯೋಗವು 2012 ರಿಂದ ಚುನಾವಣಾ ರೋಲ್ಗಳಲ್ಲಿ "ಇತರರು" ಎಂದು ಬರೆದ ಲಿಂಗದೊಂದಿಗೆ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ದಾಖಲಾತಿಯನ್ನು ಅನುಮತಿಸಿದೆ. "ಇತರರು"(ಲಿಂಗ) ಎಂದು ದಾಖಲಿಸಲ್ಪಟ್ಟ ಮತದಾರರ ಸಂಖ್ಯೆ 38,325 ಇದೆ.

ಭಾರತದ ಪೌರತ್ವ ಹೊಂದಿದ್ದು ವಿದೇಶದಲ್ಲಿ ವಾಸವಾಗಿರುವ ವ್ಯಕ್ತಿ ಎನ್‌ಆರ್‌ಐಯಡಿಯಲ್ಲಿ ಮತ ಚಲಾಯಿಸಲು ಹಕ್ಕಿರುತ್ತದೆ. ಆದರೆ, ಅಂಥ ವ್ಯಕ್ತಿ ಯಾವುದೇ ಕಾರಣಕ್ಕೂ ವಿದೇಶಿದ ನಾಗರಿಕತ್ವವನ್ನು ಪಡೆದಿರಬಾರದು. 1950ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷ ನ್‌ 20ಎ ಪ್ರಕಾರ, ವಿದೇಶದಲ್ಲಿ ವಾಸವಾಗಿರುವ ಎನ್‌ಆರ್‌ಐ ಭಾರತದಲ್ಲಿ ಮತದಾರನಾಗಬಹುದು. ಉದ್ಯೋಗ, ಶಿಕ್ಷ ಣಕ್ಕಾಗಿ ವಿದೇಶಕ್ಕಾಗಿ ತೆರಳಿರುವ ವ್ಯಕ್ತಿಗಳು ತಮ್ಮ ವಿಧಾನಸಭಾ/ಲೋಕಸಭಾ ಕ್ಷೇತ್ರಗಳಲ್ಲಿ ಮತ ಹಾಕಬಹುದಾಗಿದೆ. 

ಪ್ರಸಕ್ತ ಚುನಾವಣಾ ರೋಲ್ನಲ್ಲಿ ದಾಖಲಾದ ವಿದೇಶಿ ಮತದಾರರ ಸಂಖ್ಯೆ 71,735 ಆಗಿದೆ. "ಮತದಾರರ ಪಟ್ಟಿಯಲ್ಲಿ 1,677,386 ಸೇವಾ ಮತದಾರರು ಇದ್ದಾರೆ" ಎನ್ನಲಾಗಿದೆ.

2014 ರ ಲೋಕಸಭಾ ಚುನಾವಣೆಯಲ್ಲಿ 928,000 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು, ಈ ಬಾರಿ 2019ರ ಲೋಕಸಭೆ ಚುನಾವಣೆ ದೇಶದ ಒಟ್ಟು 1,035,918 ಮತಗಟ್ಟೆಗಳಲ್ಲಿ ನಡೆಯಲಿದೆ.
 

Trending News