ನೂತನ ಸಂಸತ್‌ ಭವನದಲ್ಲಿ ಸ್ವರ್ಣ ಖಚಿತ ʼಸೆಂಗೋಲ್‌ʼ..! ʼರಾಜದಂಡ ರಹಸ್ಯ..ʼ ಇಲ್ಲಿದೆ

Sengol History : ʼತಿರುವಾಡುತುರೈ ಅಧೀನಂʼ ಅವರ ಪರ ತಮಿಳುನಾಡಿನಲ್ಲಿ ರಾಜದಂಡವನ್ನು ತಯಾರಿಸಲಾಯಿತು. ಭಾರತದ ಸ್ವಾತಂತ್ರ್ಯದ ಸಾಕ್ಷಿಯಾಗಿ ಮಾಜಿ ಪ್ರಧಾನಿ ನೆಹರೂ ಅವರಿಗೆ ಈ ದಂಡವನ್ನು ನೀಡಲಾಯಿತು ಎಂದು ಹೇಳಲಾಗುತ್ತದೆ. 100 ಸಾವನ್ ಚಿನ್ನ ಮತ್ತು 5 ಅಡಿ ಉದ್ದದ ಈ ರಾಜದಂಡವನ್ನು 'ಚೋಳ ರಾಜದಂಡ' ಎಂದೂ ಸಹ ಕರೆಯಲಾಗುತ್ತದೆ. 

Written by - Krishna N K | Last Updated : May 26, 2023, 04:59 PM IST
  • ಮೇ 28 ನೂತನ ಸಂಸತ್ ಭವನನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
  • ರಾಷ್ಟ್ರಪತಿಗಳು ಸಂಸತ್‌ ಭವನನ್ನು ಉದ್ಘಾಟಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ.
  • ನೂತನ ಭವನದಲ್ಲಿ ಸೆಂಗೋಲ್‌ ಪ್ರತಿಷ್ಠಾಪನೆಗೆ ಬಿಜೆಪಿ ಪಾಳಯ ಮುಂದಾಗಿದೆ.
ನೂತನ ಸಂಸತ್‌ ಭವನದಲ್ಲಿ ಸ್ವರ್ಣ ಖಚಿತ ʼಸೆಂಗೋಲ್‌ʼ..! ʼರಾಜದಂಡ ರಹಸ್ಯ..ʼ ಇಲ್ಲಿದೆ title=

Sengol in new Parliament : ಇದೆ ಮೇ 28ರಂದು ನೂತನ ಸಂಸತ್ ಭವನನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ದೇಶದ ಪ್ರಥಮ ಪ್ರಜೆ ಎಂದೇ ಪರಿಗಣಿಸಲ್ಪಡುವ ರಾಷ್ಟ್ರಪತಿಗಳು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕು ಮತ್ತು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ ಎಂದು ಹಲವು ವಿರೋಧ ಪಕ್ಷಗಳು ಕಿಡಿಕಾರುತ್ತಿವೆ. ಅಲ್ಲದೆ, ಈ ಆರೋಪದ ಬೆನ್ನಲ್ಲೇ 25 ಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದರೆ, ಕಾಂಗ್ರೆಸ್, ಡಿಎಂಕೆ ಸೇರಿದಂತೆ 20 ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸುವುದಾಗಿ ತಿಳಿಸಿವೆ.

ಅಧ್ಯಕ್ಷ ಮುರ್ಮು ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನೂತನ ಸಂಸತ್ ಭವನವನ್ನು ಸ್ವತಃ ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಬಹುದೊಡ್ಡ ಅವಮಾನ ಎಂದು ವಿಪಕ್ಷಗಳು ಕಿಡಿಕಾರುತ್ತಿವೆ. ಅಲ್ಲದೆ, ಇದರಿಂದ ʼರಾಷ್ಟ್ರಪತಿʼ ಉನ್ನತ ಹುದ್ದೆಗೆ ಅವಮಾನವಾಗಿದೆ ಅಂತ ಆಕ್ರೋಶ ವ್ಯಕ್ತ ಪಡಿಸುತ್ತಿವೆ. ಇತ್ತ ಬಿಜೆಪಿಗರು, ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಿರುವ ವಿರೋಧ ಪಕ್ಷಗಳಿಗೆ 'ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ಮಾನದಂಡಗಳು ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಘೋರ ಅವಮಾನ' ಎಂದು ತಿರುಗೇಟು ನೀಡಿದೆ. ಇದಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಸ ಸಂಸತ್ ಭವನದ ಜನರಿಗೆ ಸ್ಪೀಕರ್ ಆಸನದ ಬಳಿ 'ಚೋಳ ರಾಜದಂಡ' ಅಳವಡಿಸಲಾಗುವುದು ಎಂದು ತಿಳಿಸಿದ್ದು, ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. 

ಇದನ್ನೂ ಓದಿ:ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ಜಾಮೀನು : ಅನಾರೋಗ್ಯದ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಮಾನ

'ಚೋಳ ರಾಜದಂಡ' ಹಿನ್ನೆಲೆ : ರಾಜಾಜಿ (ಸಿ ರಾಜಗೋಪಾಲಚಾರಿ) ಮತ್ತು ʼತಿರುವಾಡುತುರೈ ಅಧೀನಂʼ ಅವರ ಪರ ತಮಿಳುನಾಡಿನಲ್ಲಿ ರಾಜದಂಡವನ್ನು ತಯಾರಿಸಲಾಯಿತು. ಭಾರತದ ಸ್ವಾತಂತ್ರ್ಯದ ಸಾಕ್ಷಿಯಾಗಿ ಮಾಜಿ ಪ್ರಧಾನಿ ನೆಹರೂ ಅವರಿಗೆ ಈ ದಂಡವನ್ನು ನೀಡಲಾಯಿತು ಎಂದು ಹೇಳಲಾಗುತ್ತದೆ. 100 ಸಾವನ್ ಚಿನ್ನ ಮತ್ತು 5 ಅಡಿ ಉದ್ದದ ಈ ರಾಜದಂಡವನ್ನು 'ಚೋಳ ರಾಜದಂಡ' ಎಂದೂ ಸಹ ಕರೆಯಲಾಗುತ್ತದೆ. ಆದರೆ, ಇದು ಚೋಳರ ಕಾಲದ್ದಲ್ಲ ಎಂದು ಹೇಳಲಾಗುತ್ತದೆ. 

ಯಾವುದೇ ದಾಖಲೆ ಸಾಕ್ಷ್ಯಗಳಿಲ್ಲ : ಮದ್ರಾಸ್ ಪ್ರಾಂತ್ಯದಲ್ಲಿ (ತಿರುವಾಡುತುರೈ ಅಧೀನಂ) ಧಾರ್ಮಿಕ ಸ್ಥಾಪನೆಯಿಂದ ರಚಿಸಲ್ಪಟ್ಟ ಮತ್ತು ಮದ್ರಾಸ್ ನಗರದಲ್ಲಿ (ಈಗ ಚೆನ್ನೈ) ವಿನ್ಯಾಸಗೊಳಿಸಲಾದ ಭವ್ಯವಾದ ರಾಜದಂಡವನ್ನು ಆಗಸ್ಟ್ 1947 ರಲ್ಲಿ ಜವಾಹರಲಾಲ್ ನೆಹರು ಅವರಿಗೆ ನೀಡಲಾಯಿತು. ಮೌಂಟ್‌ಬ್ಯಾಟನ್, ರಾಜಾಜಿ ಮತ್ತು ನೆಹರೂ ಅವರು ರಾಜದಂಡವನ್ನು ಭಾರತಕ್ಕೆ ಬ್ರಿಟಿಷ್ ಅಧಿಕಾರದ ಹಸ್ತಾಂತರದ ಸಂಕೇತವೆಂದು ವಿವರಿಸಿದ್ದಾರೆ ಎಂಬುದಕ್ಕೆ ಯಾವುದೇ ದಾಖಲಿತ ಪುರಾವೆಗಳಿಲ್ಲ. ಇದು ಕೆಲವರ ಕಪೋಲಕಲ್ಪಿತವಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕಾಂಗ್ರೆಸ್ಸಿಗರ ಈ ಮಾತನ್ನು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಕುಸಿದು ಬಿದ್ದ ಎಎಪಿ ನಾಯಕ ಸತ್ಯೇಂದ್ರ ಜೈನ್‌; ಐಸಿಯುನಲ್ಲಿ ಚಿಕಿತ್ಸೆ

ನೆಹರು ʼವಾಕಿಂಗ್‌ ಸ್ಟಿಕ್‌ʼ : ಕಾಂಗ್ರೆಸ್ ಪಕ್ಷವು ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಏಕೆ ದ್ವೇಷಿಸುತ್ತದೆ..? ಭಾರತದ ಸ್ವಾತಂತ್ರ್ಯವನ್ನು ಸಂಕೇತಿಸುವ ಪವಿತ್ರ ರಾಜದಂಡವನ್ನು ತಮಿಳುನಾಡಿನ ಪವಿತ್ರ ಶೈವ ಮಠವು ನೆಹರೂಗೆ ನೀಡಿತ್ತು. ಆದರೆ, ಅದನ್ನು 'ವಾಕಿಂಗ್ ಸ್ಟಿಕ್' ಎಂದು ಕಾಂಗ್ರೆಸ್ ವಸ್ತುಸಂಗ್ರಹಾಲಯಕ್ಕೆ ಕಳುಹಿಸಿದೆ ಎಂದು ಅಮಿತ್ ಶಾ ಟ್ವೀಟ್ ಮೂಲಕ ಗುಡುಗಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, "ಇದೀಗ ಕಾಂಗ್ರೆಸ್ ಮತ್ತೊಂದು ನಾಚಿಕೆಗೇಡಿನ ಅವಮಾನವನ್ನು ಮರೆಮಾಚಿದೆ. ಕಾಂಗ್ರೆಸ್ ತಿರುವಾಡುತುರೈ ಅಧೀನಂ ಇತಿಹಾಸವನ್ನು ನಕಲಿ ಎಂದು ಕರೆಯುತ್ತಿದೆ, ಕಾಂಗ್ರೆಸ್ ತಮ್ಮ ನಡವಳಿಕೆಯ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ.

ಸಂಸತ್‌ ಭವನದಲ್ಲಿ ʼಸೆಂಗೋಲ್‌ʼ ಸ್ಥಾಪನೆ : ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರದ ಸಂಕೇತವಾಗಿರುವ ಐತಿಹಾಸಿಕ ಮತ್ತು ಪವಿತ್ರ ʼಸೆಂಗೋಲ್‌ʼ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸ್ವೀಕರಿಸಲಿದ್ದಾರೆ. ಅಲ್ಲದೆ, ಮೇ 28 ರಂದು ಅದನ್ನು ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಲಿದ್ದಾರೆ. ಈ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಆಗಸ್ಟ್ 1947 ರಲ್ಲಿ ತಿರುವವಡುತುರೈ ಅಧೀನಂ (ತಮಿಳುನಾಡಿನ ಬ್ರಾಹ್ಮಣೇತರ ಶೈವ ಮಠಗಳು) ಉಪ ಮಠಾಧೀಶರು ನೀಡಿದ್ದರು. ಇದೀಗ ತಮಿಳುನಾಡಿನ 20 'ಅಧೀನಂ' ಮಠಾಧೀಶರಿಂದ ಪ್ರಧಾನಿ ಮೋದಿ ಸೆಂಗೋಲ್ ಅನ್ನು ಸ್ವೀಕರಿಸಲಿದ್ದಾರೆ. ʼಹೋಮʼ 'ಹವನ'ದ ನಂತರ 7.20ಕ್ಕೆ 'ಸೆಂಗೊಲ್' ಅನ್ನು ಹಸ್ತಾಂತರಿಸಲಾಗುತ್ತದೆ. ನಂತರ ಪ್ರಧಾನಿ ಮೋದಿ ಅದನ್ನು ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿರುವ ಪೀಠದ ಮೇಲೆ ಸ್ಥಾಪಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News