ಮೊಟ್ಟೆ ಮತ್ತು ಮಾಂಸವೇ ಆಗಬೇಕೆಂದಿಲ್ಲ, ಈ ತರಕಾರಿಗಳು ಕೂಡಾ ಪ್ರೋಟೀನ್ ಆಗರ

Protein Based Vegetables: ಮೊಟ್ಟೆ ಮಾಂಸಕ್ಕಿಂತ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಲಭ್ಯವಿರುವ  ತರಕಾರಿಗಳು ಕೂಡಾ ಇವೆ.  ಈ ತರಕಾರಿಗಳನ್ನು ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಪಡೆದುಕೊಳ್ಳಬಹುದು. 

Written by - Ranjitha R K | Last Updated : May 29, 2023, 09:04 AM IST
  • ಪ್ರೋಟೀನ್‌ನ ಅಗತ್ಯವನ್ನು ಪೂರೈಸಲು, ಮಾಂಸಾಹಾರಿ ಆಹಾರವನ್ನು ಸೇವಿಸಲಾಗುತ್ತದೆ.
  • ವಿಶೇಷವಾಗಿ ಮೊಟ್ಟೆ ಮತ್ತು ಮಾಂಸವನ್ನು ತಿನ್ನಲು ಸಲಹೆ ನೀಡಲಾಗುತ್ತದೆ.
  • ಈ ತರಕಾರಿಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ ಪ್ರೋಟೀನ್
ಮೊಟ್ಟೆ ಮತ್ತು ಮಾಂಸವೇ ಆಗಬೇಕೆಂದಿಲ್ಲ,  ಈ ತರಕಾರಿಗಳು ಕೂಡಾ ಪ್ರೋಟೀನ್ ಆಗರ   title=

Protein Based Vegetables : ದೇಹದಲ್ಲಿನ ಪ್ರೋಟೀನ್‌ನ ಅಗತ್ಯವನ್ನು ಪೂರೈಸಲು, ಮಾಂಸಾಹಾರಿ ಆಹಾರವನ್ನು ಸೇವಿಸಬೇಕು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮೊಟ್ಟೆ ಮತ್ತು ಮಾಂಸವನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ  ಎಲ್ಲರೂ ಮಾಂಸವನ್ನು ತಿನ್ನುವುದಿಲ್ಲ. ಹಾಗಿದ್ದರೆ ಶಾಖಾಹಾರಿಗಳು ಪ್ರೋಟೀನ್ ಕೊರತೆಯನ್ನು ನೀಗಿಸುವುದು ಹೇಗೆ ? ಇದಕ್ಕಾಗಿ ಮಾತ್ರೆ, ಟಾನಿಕ್ ಗಳ ಮೊರೆ ಹೋಗಬೇಕೇ ? ಖಂಡಿತಾ ಇಲ್ಲ. ಮೊಟ್ಟೆ ಮಾಂಸಕ್ಕಿಂತ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಲಭ್ಯವಿರುವ  ತರಕಾರಿಗಳು ಕೂಡಾ ಇವೆ.  ಈ ತರಕಾರಿಗಳನ್ನು ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಪಡೆದುಕೊಳ್ಳಬಹುದು. 

ಈ ತರಕಾರಿಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ ಪ್ರೋಟೀನ್ : 
1. ಹೂಕೋಸು :
ಹೂಕೋಸಿನಲ್ಲಿ ಪ್ರೋಟೀನ್, ಕ್ಯಾಲೋರಿಗಳು, ಮೆಗ್ನೀಸಿಯಮ್ ಮತ್ತು ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಇದನ್ನು ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲಾಗುತ್ತದೆ. ಆದರೂ   ಮಾರುಕಟ್ಟೆಯಲ್ಲಿ ವರ್ಷವಿಡೀ ಈ ತರಕಾರಿ ಲಭ್ಯವಿರುತ್ತದೆ. ಹೂಕೋಸು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್  ಸಿಗುತ್ತದೆ. ಇದನ್ನೂ ನಿಯಮಿತವಾಗಿ ತಿನ್ನುತ್ತಾ ಬಂದರೆ ದೇಹದಲ್ಲಿ ಪ್ರೋಟೀನ್ ಕೊರತೆ  ಎದುರಾಗುವುದಿಲ್ಲ. 

ಇದನ್ನೂ ಓದಿ : Ivy Gourd Benefits : ಚೋಟುದ್ದ ತೊಂಡೆಕಾಯಿಯನ್ನು ಕಡೆಗಣಿಸಬೇಡಿ.. ಅದರ ಪ್ರಯೋಜನ ತಿಳಿದರೇ ಶಾಕ್‌ ಆಗ್ತಿರಾ..!

2. ಬ್ರೊಕೊಲಿ  : 
ಬ್ರೊಕೊಲಿ  ಇದು ಕೂಡಾ ನೋಡುವುದಕ್ಕೆ ಹೂ ಕೋಸಿನಂತೆ ಕಾಣುತ್ತದೆ.  ಆದರೆ ಇದರ ಬಣ್ಣ ಮಾತ್ರ ಹಸಿರು. ಇದು ಆರೋಗ್ಯಕ್ಕೆ ಉತ್ತಮ ಆಹಾರವೆಂದು ಕರೆಯಲ್ಪಡುತ್ತದೆ.  ಇದನ್ನು ತಿನ್ನುವುದರಿಂದ ಪ್ರೋಟೀನ್ ಮಾತ್ರವಲ್ಲದೆ ದೇಹಕ್ಕೆ ಕಬ್ಬಿಣಡ ಅಂಶ ಕೂಡಾ ಭರಪೂರವಾಗಿ ಸಿಗುತ್ತದೆ. ಬ್ರೊಕೊಲಿಯನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಸ್ನಾಯುಗಳು ಕೂಡಾ ಬಲಗೊಳ್ಳುತ್ತವೆ.

3. ಪಾಲಕ್  ಸೊಪ್ಪು  :
ಅತ್ಯಂತ ಆರೋಗ್ಯಕರವಾದ ಹಸಿರು ಎಲೆಗಳ ತರಕಾರಿಗಳ ಬಗ್ಗೆ  ಹೇಳುವಾಗ ಪಾಲಕ್ ಸೊಪ್ಪಿಗೆ ಮೊದಲ ಸ್ಥಾನ. ಪಾಲಕ್ ಸೊಪ್ಪಿನಲ್ಲಿ ಪ್ರೋಟೀನ್, ವಿಟಮಿನ್ ಬಿ ಮತ್ತು ಫೈಬರ್ ಕಂಡುಬರುತ್ತದೆ. ಪಾಲಕ್ ಸೊಪ್ಪು ಜೀರ್ಣ ಕ್ರಿಯೆಯನ್ನು ಕೂಡಾ ಸುಧಾರಿಸುತ್ತದೆ. ಇದರಿಂದಾಗಿ ನಿಮ್ಮ ಸ್ನಾಯುಗಳು ಬಲಗೊಳ್ಳುತ್ತವೆ.

ಇದನ್ನೂ ಓದಿ : Garlic Benefits: ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಏನೆಲ್ಲಾ ಲಾಭ ಗೊತ್ತಾ?

4. ಅಣಬೆ : 
ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದಕ್ಕಾಗಿ ನೀವು ದೈನಂದಿನ ಆಹಾರದಲ್ಲಿ ಅಣಬೆಗಳನ್ನು ಸೇರಿಸಿಕೊಳ್ಳಬಹುದು. ಅಣಬೆ  ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಪದೇ ಪದೇ  ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಕೂಡಾ ಕಡಿಮೆಯಾಗುತ್ತದೆ. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News