IND vs AUS: ಹರ್ಭಜನ್ ಪ್ರಕಾರ ಟೀಂ ಇಂಡಿಯಾದ ಗೇಮ್ ಚೇಂಜರ್ ಕೊಹ್ಲಿ-ಗಿಲ್ ಅಲ್ಲ… ಈ ಆಟಗಾರನಂತೆ!

Harbhajan picks India's Playing-11 for WTC Final: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ WTC ಫೈನಲ್‌ ನಲ್ಲಿ, ಹರ್ಭಜನ್ ತನ್ನ ಪ್ಲೇಯಿಂಗ್-11 ರಲ್ಲಿ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರನ್ನು ಆರಂಭಿಕ ಜೋಡಿಯನ್ನಾಗಿ ಮಾಡಿದ್ದಾರೆ. ಚೇತೇಶ್ವರ ಪೂಜಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಆಯ್ಕೆಯಾಗಿದ್ದಾರೆ.

Written by - Bhavishya Shetty | Last Updated : Jun 2, 2023, 10:39 AM IST
    • ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ 2023 ರಲ್ಲಿ ಮುಖಾಮುಖಿ
    • ಹರ್ಭಜನ್ ಸಿಂಗ್ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡಿದ್ದಾರೆ.
    • ಇಶಾನ್ ಕಿಶನ್ ಅವರನ್ನು ಗೇಮ್ ಚೇಂಜರ್ ಆಟಗಾರ ಎಂದು ಭಜ್ಜಿ ಪರಿಗಣಿಸಿದ್ದಾರೆ
IND vs AUS: ಹರ್ಭಜನ್ ಪ್ರಕಾರ ಟೀಂ ಇಂಡಿಯಾದ ಗೇಮ್ ಚೇಂಜರ್ ಕೊಹ್ಲಿ-ಗಿಲ್ ಅಲ್ಲ… ಈ ಆಟಗಾರನಂತೆ! title=
Harbhajan Singh

Harbhajan picks India's Playing-11 for WTC Final: ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ 2023 ರಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಇಂಗ್ಲೆಂಡ್‌ ನ ಕೆನ್ನಿಂಗ್ಟನ್ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ತಂಡಗಳು ಲಂಡನ್ ತಲುಪಿದ್ದು, ಸಿದ್ಧತೆ ಆರಂಭಿಸಿವೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಅಥವಾ ವಿರಾಟ್ ಕೊಹ್ಲಿ ಗೇಮ್ ಚೇಂಜರ್ ಅಲ್ಲ, ಈ ಬ್ಯಾಟ್ಸ್‌ಮನ್ ಎಂದು ವಿವರಿಸಲಾಗಿದೆ.

ಇದನ್ನೂ ಓದಿ: Wrestlers Protest: ಕುಸ್ತಿಪಟುಗಳನ್ನು ಭೇಟಿಯಾದ ನರೇಶ್ ಟಿಕಾಯಿತ್, ಮೆಡಲ್ ಗಳನ್ನು ಗಂಗೆಗೆ ಅರ್ಪಿಸುವ ನಿರ್ಧಾರ ಕೈಬಿಟ್ಟ ಆಟಗಾರರು

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ WTC ಫೈನಲ್‌ ನಲ್ಲಿ, ಹರ್ಭಜನ್ ತನ್ನ ಪ್ಲೇಯಿಂಗ್-11 ರಲ್ಲಿ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರನ್ನು ಆರಂಭಿಕ ಜೋಡಿಯನ್ನಾಗಿ ಮಾಡಿದ್ದಾರೆ. ಚೇತೇಶ್ವರ ಪೂಜಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಆಯ್ಕೆಯಾಗಿದ್ದಾರೆ. ಕೌಂಟಿ ಚಾಂಪಿಯನ್‌ ಶಿಪ್‌ನಲ್ಲಿ ಆಡುತ್ತಿದ್ದ ಪೂಜಾರ ತಮ್ಮ ಮಾರಕ ಫಾರ್ಮ್ ಅನ್ನು ಸಾಬೀತುಪಡಿಸಿದ್ದಾರೆ. ಇದಾದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದಾರೆ. ಐಪಿಎಲ್ 2023 ರಲ್ಲೂ ಕೊಹ್ಲಿ ಮಾರಕ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದರು.  

ಹರ್ಭಜನ್ ಅವರು ಅಜಿಂಕ್ಯ ರಹಾನೆ ಅವರನ್ನು ಐದನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಐಪಿಎಲ್ 2023 ರಲ್ಲಿ ಅವರ ಮಾರಕ ಬ್ಯಾಟಿಂಗ್ ಆಧಾರದ ಮೇಲೆ ಅವರು ಟೀಮ್ ಇಂಡಿಯಾದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ಆರನೇ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಶಾನ್ ಕಿಶನ್ ಅವರನ್ನು ಗೇಮ್ ಚೇಂಜರ್ ಆಟಗಾರ ಎಂದು ಭಜ್ಜಿ ಪರಿಗಣಿಸಿದ್ದಾರೆ. “ಕಿಶನ್‌ ಗೆ ಹೊಸ ಶೈಲಿಯ ಬೌಲಿಂಗ್ ನ್ನು ಹೇಗೆ ಎದುರಿಸಬೇಕೆಂದು ತಿಳಿದಿರುವ ಕಾರಣ ಮತ್ತು ಪಂತ್‌ ನಂತೆ ಬ್ಯಾಟಿಂಗ್‌ ಮಾಡಬಲ್ಲ ಕಾರಣ ನಾನು ಅವರಿಗೆ ಗೇಮ್ ಚೇಂಜರ್ ಆಟಗಾರ ಎಂದು ಹೇಳುತ್ತಿದ್ದೇನೆ, ಅಷ್ಟೇ ಅಲ್ಲದೆ ಅವರು ಎಡಗೈ ಬ್ಯಾಟ್ಸ್ ಮನ್ ಆಗಿರುವುದು ತಂಡಕ್ಕೆ ಲಾಭದಾಯಕ” ಎಂದಿದ್ದಾರೆ.

ಹರ್ಭಜನ್ ರವೀಂದ್ರ ಜಡೇಜಾ ಅವರನ್ನು ಏಳನೇ ಕ್ರಮಾಂಕದಲ್ಲಿ ಆಯ್ಕೆ ಮಾಡಿದ್ದಾರೆ. ಜಡೇಜಾ ಬಗ್ಗೆ ಹೊಗಳಿಕೆ ಕಡಿಮೆಯಾಗುತ್ತದೆ. ಅವರು ಐಪಿಎಲ್‌ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಲ್ಲದೆ, ಫೈನಲ್‌ ನಲ್ಲಿ ಆರು-ಬೌಂಡರಿಗಳನ್ನು ಬಾರಿಸುವ ಮೂಲಕ ಚೆನ್ನೈ ತಂಡವನ್ನು ಚಾಂಪಿಯನ್ ಮಾಡಿದ್ದರು. ಇದಾದ ನಂತರ ಶಾರ್ದೂಲ್ ಠಾಕೂರ್ ಎಂಟನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಶಾರ್ದೂಲ್ ಬ್ಯಾಟಿಂಗ್ ಮತ್ತು ಬೌಲಿಂಗ್‌ ನಲ್ಲಿ ಪ್ರಮುಖರಾಗಿದ್ದಾರೆ. ಸ್ಪಿನ್ ಬೌಲಿಂಗ್ ನ ಎರಡನೇ ಆಯ್ಕೆಯಾಗಿ ಅಶ್ವಿನ್ ಅನ್ನು ಆಯ್ಕೆ ಮಾಡಿದ್ದಾರೆ. ಇದಾದ ನಂತರ ವೇಗದ ಬೌಲಿಂಗ್‌ ನಲ್ಲಿ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರನ್ನು ಸೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: 14 ಪಂದ್ಯ, 27 ವಿಕೆಟ್…IPL ನಲ್ಲಿ ಧೂಳೆಬ್ಬಿಸಿದ್ದ ಈ ಆಟಗಾರ 8 ವರ್ಷಗಳ ಬಳಿಕ Team Indiaಗೆ ಮತ್ತೆ ಎಂಟ್ರಿ!

ಹರ್ಭಜನ್ ಆಯ್ಕೆ ಮಾಡಿದ ಭಾರತೀಯ ಪ್ಲೇಯಿಂಗ್-11

ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ / ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News