Ileana D’Cruz: ಗರ್ಭಿಣಿ ಇಲಿಯಾನಾ ಎಂಗೇಜ್ಮೆಂಟ್‌ ಆಗಿದ್ದು ಯಾರ ಜೊತೆ!? ಫೋಟೋದಲ್ಲಿರೋದು ಮಗುವಿನ ತಂದೆನಾ?

Ileana D'Cruz Engagement: ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋವನ್ನು ನೋಡಿ, ನೆಟಿಜನ್‌ಗಳು ನಟಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅನುಮಾನಿಸುತ್ತಿದ್ದಾರೆ.  

Written by - Chetana Devarmani | Last Updated : Jun 3, 2023, 02:16 PM IST
  • ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್
  • ರಹಸ್ಯವಾಗಿ ಎಂಗೇಜ್ಮೆಂಟ್‌ ಆಗಿದ್ದು ಯಾರ ಜೊತೆ!?
  • ಫೋಟೋದಲ್ಲಿರುವ ವ್ಯಕ್ತಿ ಯಾರು ಗೊತ್ತಾ?
Ileana D’Cruz: ಗರ್ಭಿಣಿ ಇಲಿಯಾನಾ ಎಂಗೇಜ್ಮೆಂಟ್‌ ಆಗಿದ್ದು ಯಾರ ಜೊತೆ!? ಫೋಟೋದಲ್ಲಿರೋದು ಮಗುವಿನ ತಂದೆನಾ?  title=
Ileana D'Cruz

Ileana D'Cruz Engagement: ‌ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಅಪ್‌ಡೇಟ್‌ ಮತ್ತೊಮ್ಮೆ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ಇತ್ತೀಚೆಗೆ, ನಟಿ ಬೇಬಿಮೂನ್‌ನ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಒಂದು ಫೋಟೋವನ್ನು ನೋಡಿದ ನೆಟ್ಟಗರು ಇಲಿಯಾನಾ ಗರ್ಭಧಾರಣೆಯ ನಂತರ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅನುಮಾನಿಸುತ್ತಿದ್ದಾರೆ. ಇಲಿಯಾನಾ ಡಿಕ್ರೂಜ್ ಅವರ ಹೊಸ ಫೋಟೋ ವೈರಲ್ ಆದ ನಂತರ, ಅವರು ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ ಎಂಬುದು ಪ್ರತಿಯೊಬ್ಬ ಅಭಿಮಾನಿಯ ಪ್ರಶ್ನೆಯಾಗಿದೆ. ಹಾಗಾದರೆ ಆ ನಿಗೂಢ ವ್ಯಕ್ತಿ ಯಾರು?

 

 
 
 
 

 
 
 
 
 
 
 
 
 
 
 

A post shared by Ileana D'Cruz (@ileana_official)

 

ಇದನ್ನೂ ಓದಿ: ತಮಿಳಿನ ‘ಜಂಟಲ್ ಮ್ಯಾನ್ 2’ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಕೀರವಾಣಿ ಸಂಗೀತ ನಿರ್ದೇಶನ

ಇಲಿಯಾನಾ ಡಿಕ್ರೂಜ್ ಪ್ರೆಗ್ನೆನ್ಸಿ ನಂತರ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾರೆ. ಇದೀಗ ತಮ್ಮ ಅಧಿಕೃತ Instagram ಖಾತೆಯಲ್ಲಿ ಸ್ಟೋರಿಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಎರಡು ಕೈಗಳು ಇವೆ, ಅದರಲ್ಲಿ ಒಂದು ನಟಿ ಇಲಿಯಾನಾ ಡಿಕ್ರೂಜ್ ಮತ್ತು ಇನ್ನೊಂದು ರಹಸ್ಯ ವ್ಯಕ್ತಿಯದ್ದು ಎಂದು ಜನರು ಅಂದುಕೊಂಡಿದ್ದಾರೆ. ಎರಡೂ ಕೈಗಳಲ್ಲಿ ಉಂಗುರ ಬೆರಳಿನಲ್ಲಿ ಉಂಗುರ ಇರುವುದನ್ನು ಫೋಟೋದಲ್ಲಿ ಕಾಣಬಹುದು. ಈ ಚಿತ್ರವನ್ನು ನೋಡಿದ ನೆಟಿಜನ್‌ಗಳು ನಟಿ ಈಗ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಊಹಿಸುತ್ತಿದ್ದಾರೆ. ಈಗ ಇಲಿಯಾನಾ ಡಿಕ್ರೂಜ್ ಎಂಗೇಜ್ಮೆಂಟ್ ಆಗಿದ್ದಾರೋ ಇಲ್ಲವೋ? ಆಗಿದ್ದರೆ ಯಾರ ಜೊತೆ? ನಟಿಯ ಗರ್ಭಧಾರಣೆಗೆ ಕಾರಣ ಇವರೇನಾ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಜನರಲ್ಲಿ ಹುಟ್ಟಿಕೊಂಡಿವೆ.

Ileana D'Cruz Engagement

ಕೆಲವು ಸಮಯದ ಹಿಂದೆ ನಟಿ ಇಲಿಯಾನಾ ಡಿಕ್ರೂಜ್ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಗರ್ಭಧಾರಣೆಯ ವಿಚಾರವನ್ನು ಹಂಚಿಕೊಂಡಾಗ, ಎಲ್ಲರೂ ದಿಗ್ಭ್ರಮೆಗೊಂಡಿದ್ದರು. ಆದರೆ ಇಲಿಯಾನಾ ಡಿಕ್ರೂಜ್ ತನ್ನ ಮಗುವಿನ ತಂದೆಯ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ನೆಟಿಜನ್‌ಗಳ ಈ ಪ್ರಶ್ನೆಗೆ ನಟಿ ಸಂಪೂರ್ಣ ಮೌನ ವಹಿಸಿದ್ದಾರೆ. ನಟಿ ಇಲಿಯಾನಾ ಡಿಕ್ರೂಜ್ ಅವರು ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳಿವೆ. ಆದರೆ ಈ ವರದಿಗಳು ಯಾವುದೇ ರೀತಿಯಲ್ಲಿ ದೃಢಪಟ್ಟಿಲ್ಲ. 

ಇದನ್ನೂ ಓದಿ: ಅಮಿತಾಬ್‌ ಸಾವು-ಬದುಕಿನ ನಡುವೆ ಹೋರಾಡುವಾಗ, ಜಯಾ ಹನುಮಾನ್ ಚಾಲೀಸಾ ಪಠಿಸಿದಾಗ ನಡೀತು ಪವಾಡ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News