ಬೆಂಗಳೂರು : 2023 ವಿಧಾನಸಭೆ ಚುನಾವಣೆ ಗುಂಗನ್ನು ಮುಂಬರುವ ಲೋಕಸಭೆ ಚುನಾವಣೆಗೆ ಮುಂದುವರೆಸಲು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ವಿವಿಧ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
2024 ರ ಲೋಕಸಭಾ ಚುನಾವಣೆ ಮೇಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಣ್ಣು ಇಟ್ಟಿದ್ದು, ಲೋಕಸಭಾ ಚುನಾವಣೆ ಗೆಲ್ಲುವ ತವಕದಲ್ಲಿ ಇದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವಿಧಾನ ಸಭಾ ಚುನಾವಣೆ ಮಾದರಿ ಅನುಸರಿಸಲು ತಯಾರಿ ಆರಂಭಿಸಿದ್ದಾರೆ.
ಇದನ್ನೂ ಓದಿ- ಈ ದಿನದ ಟಾಪ್ 10 ಸುದ್ದಿಗಳು- ಜೂನ್ 08 ಗುರುವಾರ 2023
ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಪ್ರಬಲ ನಾಯಕರಿಗೆ ಡಿ. ಕೆ. ಶಿವಕುಮಾರ್ ಗಾಳ ಹಾಕಿದ್ರು. ಮಾಜಿ ಸಿಎಂ ಹಾಗೂ ಮಾಜಿ ಡಿಸಿಎಂಗಳಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿರನ್ನ ಪಕ್ಷಕ್ಕೆ ಕರೆ ತಂದು ಟಿಕೆಟ್ ನೀಡಿದ್ರು. ಈ ಮೂಲಕ ಉಭಯ ನಾಯಕರ ಜಿಲ್ಲೆ ಮತಗಳನ್ನು ಸೇರಿದಂತೆ ಅಕ್ಕಪಕ್ಕ ಜಿಲ್ಲೆಯಲ್ಲಿ ಸಮುದಾಯ ಹಾಗೂ ಬೆಂಬಲಿಗರ ಮತ ಸೆಳೆಯಲು ಸಾಧ್ಯವಾಯಿತು.
ಇದನ್ನೂ ಓದಿ- ಕಮಲ ನಾಯಕರ ಮೇಲೆ ಕೈ ಕಣ್ಣು! ಉಡುಪಿ-ಚಿಕ್ಕಮಗಳೂರು ಎಂಪಿ ಅಭ್ಯರ್ಥಿ ಆಗ್ತಾರ ಜಯಪ್ರಕಾಶ್ ಹೆಗ್ಡೆ?
ಬಿಜೆಪಿಯಲ್ಲಿ ಟಿಕೆಟ್ ಸಿಗದ ಸಂಸದರ ಮೇಲೆ ಶಿವಕುಮಾರ್ ಕಣ್ಣು ಇಟ್ಟಿದ್ದಾರೆ. ಯಾರ್ ಯಾರು ಡಿಕೆಶಿ ಲಿಸ್ಟ್ ನಲ್ಲಿ ಇದ್ದಾರೆ?
*ಸದಾನಂದಗೌಡ-ಬೆಂಗಳೂರು ಉತ್ತರ
*ತುಮಕೂರು-ಬಸವರಾಜು
*ದಾವಣಗೆರೆ-ಸಿದ್ದೇಶ್ವರ್
*ಹಾವೇರಿ-ಶಿವಕುಮಾರ್ ಉದಾಸಿ
*ಬೆಳಗಾವಿ-ಮಂಗಲ ಅಂಗಡಿ
*ಕೊಪ್ಪಳ-ಸಂಗಣ್ಣ ಕರಡಿ
*ಬಾಗಲಕೋಟೆ-ಗದ್ದಿಗೌಡರ್
ಸೇರಿದಂತೆ 5 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳ ಸದಸ್ಯರ ಮೇಲೆ ಶಿವಕುಮಾರ್ ಲಿಸ್ಟ್ ನಲ್ಲಿ ಇದ್ದಾರೆ. ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೆ, ಕಾಂಗ್ರೆಸ್ ಗೆ ಕರೆ ತಂದು ಟಿಕೆಟ್ ನೀಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದ್ದು, ಸದ್ಯ ಬಿಜೆಪಿ ಹೈಕಮಾಂಡ್ ನಿರ್ಧಾರದ ಮೇಲೆ ವಿಶೇಷ ಲಕ್ಷ್ಯ ವಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ