Amarnath Yatra: ಅಮರನಾಥ್ ಯಾತ್ರೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಅಮಿತ್ ಶಾ ಮಹತ್ವದ ಸಭೆ, ಐಬಿ ಮುಖ್ಯಸ್ಥರು ಉಪಸ್ಥಿತ

Amarnath Yatra 2023: ಜುಲೈ 1 ರಿಂದ ಆರಂಭಗೊಳ್ಳಲಿರುವ ಅಮರನಾಥ ಯಾತ್ರೆ, ಆಗಸ್ಟ್ 31ರವರೆಗೆ ಮುಂದುವರೆಯಲಿದೆ. ಈ ನಿಟ್ಟಿನಲ್ಲಿ ಭರದ ಸಿದ್ಧತೆಗಳು ಮುಂದುವರೆದಿವೆ.   

Written by - Nitin Tabib | Last Updated : Jun 9, 2023, 08:35 PM IST
  • ಬಾಬಾ ಬರ್ಫಾನಿಯನ್ನು ಭೇಟಿ ಮಾಡಲು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ
  • ಅಮರನಾಥನ ಪವಿತ್ರ ಗುಹೆಗೆ 62 ದಿನಗಳ ವಾರ್ಷಿಕ ಯಾತ್ರೆ ಜುಲೈ 1 ರಿಂದ ಆರಂಭಗೊಂಡು ಆಗಸ್ಟ್ 31 ರವರೆಗೆ ಇರಲಿದೆ.
  • ಸುದ್ದಿ ಸಂಸ್ಥೆ ಪಿಟಿಐಗೆ ದೊರೆತಿರುವ ಮಾಹಿತಿಗಳ ಪ್ರಕಾರ, ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಪ್ರಯತ್ನಿಸಬಹುದು ಎಂಬ ಗುಪ್ತಚರ ಮಾಹಿತಿ ಲಭಿಸಿದೆ.
  • ಈ ಹಿನ್ನೆಲೆಯಲ್ಲಿ ಯಾತ್ರೆಯ ಮಾರ್ಗದಲ್ಲಿ ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತಿದೆ ಎನ್ನಲಾಗಿದೆ.
Amarnath Yatra: ಅಮರನಾಥ್ ಯಾತ್ರೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಅಮಿತ್ ಶಾ ಮಹತ್ವದ ಸಭೆ, ಐಬಿ ಮುಖ್ಯಸ್ಥರು ಉಪಸ್ಥಿತ title=

Amarnath Yatra 2023: ಜಮ್ಮು ಮತ್ತು ಕಾಶ್ಮೀರದಿಂದ ಆರಂಭವಾಗಬೇಕಿರುವ ಅಮರನಾಥ ಯಾತ್ರೆಯ ಸಿದ್ಧತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಎಎನ್‌ಐ ಪ್ರಕಾರ, ಸಭೆಯಲ್ಲಿ ಎಲ್‌ಜಿ ಮನೋಜ್ ಸಿನ್ಹಾ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ತಪನ್ ದೇಕಾ ಮತ್ತು ಸಿಆರ್‌ಪಿಎಫ್ ಮಹಾನಿರ್ದೇಶಕ ಎಸ್.ಕೆ. ಎಲ್ ಥಾಸೆನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು ಎನ್ನಲಾಗಿದೆ. 

ಬಾಬಾ ಬರ್ಫಾನಿಯನ್ನು ಭೇಟಿ ಮಾಡಲು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಅಮರನಾಥನ ಪವಿತ್ರ ಗುಹೆಗೆ 62 ದಿನಗಳ ವಾರ್ಷಿಕ ಯಾತ್ರೆ ಜುಲೈ 1 ರಿಂದ ಆರಂಭಗೊಂಡು ಆಗಸ್ಟ್ 31 ರವರೆಗೆ ಇರಲಿದೆ. ಸುದ್ದಿ ಸಂಸ್ಥೆ ಪಿಟಿಐಗೆ ದೊರೆತಿರುವ ಮಾಹಿತಿಗಳ ಪ್ರಕಾರ, ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಪ್ರಯತ್ನಿಸಬಹುದು ಎಂಬ ಗುಪ್ತಚರ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಯ ಮಾರ್ಗದಲ್ಲಿ ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತಿದೆ ಎನ್ನಲಾಗಿದೆ.

ಸಭೆಯಲ್ಲಿ ನಡೆದ ಚರ್ಚೆ ಏನು?
ಕೇಂದ್ರ ಸರ್ಕಾರ, ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತದ ಉನ್ನತ ಅಧಿಕಾರಿಗಳೊಂದಿಗೆ ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ  ಪರಿಶೀಲಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಯಾತ್ರೆಗೆ ಸೂಕ್ತ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಿದ್ಧಪಡಿಸಲಾಗುತ್ತಿರುವ ಯೋಜನೆಗಳ ಬಗ್ಗೆಯೂ ಶಾ ವಿಚಾರಿಸಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-Maharashtra Politics: 'ಶರದ್ ಪವಾರ್ ಮೊಘಲ್ ದೊರೆ ಔರಂಗಜೇಬನ ಪುನರ್ಜನ್ಮ' ಎಂದು ಕರೆದ ಬಿಜೆಪಿ ಮುಖಂಡ

ಕಳೆದ ವರ್ಷ ಅಮನ್ನಾಥ ಯಾತ್ರೆ ಹೇಗೆ ನಡೆದಿತ್ತು?
ಕಳೆದ ವರ್ಷ 3.45 ಲಕ್ಷ ಭಕ್ತರು ಬಾಬಾ ಬರ್ಫಾನಿ ದರ್ಶನವನ್ನು ಪಡೆಯಲು ಅಮರನಾಥ್ ತಲುಪಿದ್ದರು ಮತ್ತು ಈ ವರ್ಷ ಈ ಸಂಖ್ಯೆ ಐದು ಲಕ್ಷದ ಗಡಿ ದಾಟುವ ನಿರೀಕ್ಷೆ ಇದೆ ಎಂದು ಪಿಟಿಐ ವರದಿ ಮಾಡಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಪವಿತ್ರ ಗುಹೆಯ ಬಳಿ ಉಂಟಾದ ಪ್ರವಾಹದಲ್ಲಿ 16 ಭಕ್ತರು ಸಾವನ್ನಪ್ಪಿದ್ದರು.

ಇದನ್ನೂ ಓದಿ-Karnataka ದಲ್ಲಿ ಭಾರಿ ಹಿನ್ನಡೆಯ ಬಳಿಕ ಬಿಜೆಪಿಗೆ ಆರ್ಎಸ್ಎಸ್ ಸಲಹೆ, ಕಾಂಗ್ರೆಸ್ ಗೆಲ್ಲಲು ಇದೇ ಕಾರಣ

ಗ್ಲೇಶಿಯಲ್ ವಿದ್ಯಮಾನಗಳು ಮತ್ತು ಪವಿತ್ರ ಗುಹೆಯ ಮೇಲ್ಭಾಗದಲ್ಲಿ ಸರೋವರಗಳ ರಚನೆಯನ್ನು ಕಂಡುಹಿಡಿಯಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ವೈಮಾನಿಕ ಸಮೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಗ್ಲೇಶಿಯಲ್ ಘಟನೆಗಳು ಮತ್ತು ಸರೋವರಗಳ ರಚನೆಯಿಂದಾಗಿ, ತಗ್ಗು ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಸಾಧ್ಯತೆ ಹೆಚ್ಚಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News