Shah Rukh Khan: ದಿನಕ್ಕೆ 100 ಸಿಗರೇಟ್​ ಸೇದುತ್ತೇನೆ ಎಂದ ಶಾರುಖ್ ಖಾನ್, ಆತಂಕದಲ್ಲಿ ಫ್ಯಾನ್ಸ್‌!!

ಬಾಲಿವುಡ್ ಕಿಂಗ್‌ ಖಾನ್​ ತಮ್ಮ ಸಿನಿಮಾಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಶಾರುಖ್​ ಖಾನ್‌ ಅಭಿಮಾನಿಗಳ ಜೊತೆ ಕೂಡ ಟಚ್‌ನಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ 'ಆಸ್ಕ್ ಎಸ್‌ಆರ್‌ಕೆ' ಸೆಷನ್‌ನೊಂದಿಗೆ ಶಾರುಖ್ ಖಾನ್ ಅವರ ಅಭಿಮಾನಿಗಳನ್ನು ವಿಸ್ಮಯಗೊಳಿಸುತ್ತಾರೆ. ನಟ ಸೋಮವಾರ 'ಆಸ್ಕ್ ಎಸ್‌ಆರ್‌ಕೆ' ಸೆಷನ್ ನಡೆಸಿದರು.‌ ಅವರ ಅಭಿಮಾನಿಗಳ ಪ್ರಶ್ನೆಗಳಿಗೆ ಟ್ರೇಡ್‌ಮಾರ್ಕ್ ಹಾಸ್ಯದ ಉತ್ತರಗಳನ್ನು ನೀಡಿದರು. ನೀವು ಧೂಮಪಾನವನ್ನು ತ್ಯಜಿಸಿದ್ದೀರಾ ಎಂದು ಕೇಳಿದ ಅಭಿಮಾನಿಯೊಬ್ಬರಿಗೆ ಅವರು ನೀಡಿದ ಉತ್ತರವು ಬೆಚ್ಚಿಬೀಳಿಸಿದೆ. 

Written by - Chetana Devarmani | Last Updated : Jun 13, 2023, 03:54 PM IST
  • 'ಆಸ್ಕ್ ಎಸ್‌ಆರ್‌ಕೆ' ಸೆಷನ್ ನಡೆಸಿದ ಶಾರುಖ್​ ಖಾನ್‌
  • ದಿನಕ್ಕೆ 100 ಸಿಗರೇಟ್​ ಸೇದುತ್ತೇನೆ ಎಂದ ಶಾರುಖ್
  • ಅಭಿಮಾನಿಗಳಲ್ಲಿ ಹೆಚ್ಚಾಯ್ತು ಆತಂಕ
Shah Rukh Khan: ದಿನಕ್ಕೆ 100 ಸಿಗರೇಟ್​ ಸೇದುತ್ತೇನೆ ಎಂದ ಶಾರುಖ್ ಖಾನ್, ಆತಂಕದಲ್ಲಿ ಫ್ಯಾನ್ಸ್‌!! title=

Shah Rukh Khan: ಬಾಲಿವುಡ್ ಕಿಂಗ್‌ ಖಾನ್​ ತಮ್ಮ ಸಿನಿಮಾಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಶಾರುಖ್​ ಖಾನ್‌ ಅಭಿಮಾನಿಗಳ ಜೊತೆ ಕೂಡ ಟಚ್‌ನಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ 'ಆಸ್ಕ್ ಎಸ್‌ಆರ್‌ಕೆ' ಸೆಷನ್‌ನೊಂದಿಗೆ ಶಾರುಖ್ ಖಾನ್ ಅವರ ಅಭಿಮಾನಿಗಳನ್ನು ವಿಸ್ಮಯಗೊಳಿಸುತ್ತಾರೆ. ನಟ ಸೋಮವಾರ 'ಆಸ್ಕ್ ಎಸ್‌ಆರ್‌ಕೆ' ಸೆಷನ್ ನಡೆಸಿದರು.‌ ಅವರ ಅಭಿಮಾನಿಗಳ ಪ್ರಶ್ನೆಗಳಿಗೆ ಟ್ರೇಡ್‌ಮಾರ್ಕ್ ಹಾಸ್ಯದ ಉತ್ತರಗಳನ್ನು ನೀಡಿದರು. ನೀವು ಧೂಮಪಾನವನ್ನು ತ್ಯಜಿಸಿದ್ದೀರಾ ಎಂದು ಕೇಳಿದ ಅಭಿಮಾನಿಯೊಬ್ಬರಿಗೆ ಅವರು ನೀಡಿದ ಉತ್ತರವು ಬೆಚ್ಚಿಬೀಳಿಸಿದೆ. 

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಶಾರುಖ್ ಖಾನ್, ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೀವನದಲ್ಲಿ ಅಂದುಕೊಂಡಿದ್ದನ್ನೆಲ್ಲ ಸಾಧಿಸಿದ ಶಾರುಖ್ ಖಾನ್‌ಗೆ ಸಿಗರೇಟ್ ಸೇದುವ ಚಟವನ್ನು ಬಿಡಲು ಸಾಧ್ಯವಾಗಿಲ್ಲ. ತಾನು ದಿನಕ್ಕೆ 100 ಸಿಗರೇಟ್ ಸೇದುತ್ತೇನೆ ಎಂದು ಸ್ವತಃ ಶಾರುಖ್​ ಹೇಳಿದ್ದು, ಅವರ ಅಭಿಮಾನಿಗಳಲ್ಲಿ ಆತಂಕ ತಂದಿದೆ. ಹಲವು ವರ್ಷಗಳ ಬಳಿಕ ಶಾರುಖ್‌ ಮತ್ತೆ ಸಿಗರೇಟ್‌ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಇವರೇ ನೋಡಿ ದಕ್ಷಿಣ ಭಾರತದ ಶ್ರೀಮಂತ ನಟಿ.. ಸಮಂತಾ, ತಮನ್ನಾ, ಅನುಷ್ಕಾ, ರಶ್ಮಿಕಾ ಅಲ್ಲವೇ ಅಲ್ಲ.!

'ಆಸ್ಕ್ ಎಸ್‌ಆರ್‌ಕೆ' ಸೆಷನ್ ನಲ್ಲಿ ಅಭಿಮಾನಿಯೊಬ್ಬರು ನೀವು ಸಿಗರೇಟ್ ಸೇದುವುದನ್ನು ನಿಲ್ಲಿಸಿದ್ದೀರಾ ಎಂದು ಕೇಳಿದರು. ಇದಕ್ಕೆ ತಕ್ಷಣ ಉತ್ತರಿಸಿದ ಶಾರುಖ್ ಖಾನ್‌, ನಾನು ಸುಳ್ಳು ಹೇಳಿದ್ದೇನೆ. ಕ್ಯಾನ್ಸರ್ ಸ್ಟಿಕ್‌ ಹೊಗೆ ನನ್ನನ್ನು ಸುತ್ತುವರಿದಿದೆ ಎಂದು ಉತ್ತರಿಸಿದ್ದಾರೆ. 

SRK ಅವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಹಾಗೆ ಹೇಳಬೇಡಿ. ದೇವರು ನಿಮ್ಮನ್ನು ಆಶೀರ್ವದಿಸಿ ರಕ್ಷಿಸಲಿ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಹೇ ದಯವಿಟ್ಟು ಇದು ನನಗೆ ಮತ್ತೆ ಕೇಳಲು ತುಂಬಾ ಹೆದರಿಕೆ ತರುತ್ತದೆ. ದಯವಿಟ್ಟು ನೀವು ಯಾವಾಗಲೂ ಒಳ್ಳೆಯವರಾಗಿರಲು ಮತ್ತು ಆರೋಗ್ಯವಾಗಿರಲು ನಾವು ಪ್ರಾರ್ಥಿಸುತ್ತೇವೆ” ಎಂದು ಕಾಮೆಂಟ್‌ ಮಾಡಿದ್ದಾರೆ. 

 

 

ಇದನ್ನೂ ಓದಿ: Urvashi: ಇವರೇ ನೋಡಿ ನಟಿ ಊರ್ವಶಿ ಮಗಳು.. ಸಿನಿರಂಗಕ್ಕೆ ತೇಜಲಕ್ಷ್ಮಿ ಎಂಟ್ರಿ ಯಾವಾಗ?

ಶಾರುಖ್ ಖಾನ್‌ 2011 ರಲ್ಲಿ ಸಂದರ್ಶನವೊಂದರಲ್ಲಿ, ಸಿಗರೇಟ್​ ಚಟದ ಬಗ್ಗೆ ಮಾತನಾಡಿದ್ದರು. ಸಿಗರೇಟ್ ಸೇದದೆ ಇದ್ರೆ ನಿದ್ರೆನೇ ಬರಲ್ಲ. ನಾನು ದಿನಕ್ಕೆ ಸುಮಾರು 100 ಸಿಗರೇಟ್ ಸೇದುತ್ತೇನೆ. ಎಷ್ಟೋ ಬಾರಿ ನಾನು ಊಟ, ನೀರು ಕೂಡ ಮರೆತುಬಿಡುತ್ತೇನೆ. ದಿನಕ್ಕೆ 30 ಕಪ್  ಬ್ಲ್ಯಾಕ್​ ಕಾಫಿ ಕುಡಿಯುತ್ತೇನೆ ಎಂದು ಹೇಳಿದ್ದರು. ಆ ಬಳಿಕ ಶಾರುಖ್, 2017 ರ ಸಂದರ್ಶನವೊಂದರಲ್ಲಿ, ತಮ್ಮ ಕಿರಿಯ ಮಗ ಅಬ್ರಾಮ್‌ನೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವ ಕಾರಣ ಸಿಗರೇಟ್ ಮತ್ತು ಮದ್ಯವನ್ನು ತ್ಯಜಿಸಲು ಶಾರುಖ್‌ ಮಾತನಾಡಿದ್ದರು. 

ಶಾರುಖ್ ಖಾನ್ ಕೊನೆಯ ಬಾರಿಗೆ ಈ ವರ್ಷದ ಅತಿದೊಡ್ಡ ಬ್ಲಾಕ್ಬಸ್ಟರ್ ಹಿಟ್, ಪಠಾಣ್‌ನಲ್ಲಿ ಕಾಣಿಸಿಕೊಂಡರು. ಈಗ, ಅವರು ತಮ್ಮ ಮುಂದಿನ ಸಿನಿಮಾ ಜವಾನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಟ್ಲೀ ನಿರ್ದೇಶನದ ಈ ಚಿತ್ರವು ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ನಟ ಸಲ್ಮಾನ್ ಖಾನ್ ಅವರ ಟೈಗರ್ 3 ನಲ್ಲಿ ಅತಿಥಿ ಪಾತ್ರವನ್ನು ಸಹ ಶಾರುಖ್‌ ಖಾನ್ ಮಾಡಲಿದ್ದಾರೆ.

ಇದನ್ನೂ ಓದಿ: Bodyguards Salary: ಸ್ಟಾರ್ ನಟ - ನಟಿಯರ ಬಾಡಿಗಾರ್ಡ್‌ಗಳಲ್ಲಿ ಅತಿ ಹೆಚ್ಚು ಸ್ಯಾಲರಿ ಯಾರದ್ದು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News