ನಾನೊಬ್ಬ ಚೌಕಿದಾರ, ಚೌಕಿದಾರ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ

ಮೇರಠ್‌ನಲ್ಲಿಂದು ಚುನಾವಣಾ ಪ್ರಚಾರ ಅಭಿಯಾನ ಆರಂಭಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.

Last Updated : Mar 28, 2019, 02:51 PM IST
ನಾನೊಬ್ಬ ಚೌಕಿದಾರ, ಚೌಕಿದಾರ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ title=
Pic Courtesy: ANI

ಮೇರಠ್‌: ಉತ್ತರ ಪ್ರದೇಶದ ಮೇರಠ್‌ನಿಂದ 2019ರ ಲೋಕಸಭಾ ಚುನಾವಣೆ ಪ್ರಚಾರ ಅಭಿಯಾನವನ್ನು ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನಾನೊಬ್ಬ ಚೌಕಿದಾರ, ಚೌಕಿದಾರ ಯಾರಿಗೂ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಮೇರಠ್‌ನಲ್ಲಿಂದು ಚುನಾವಣಾ ಪ್ರಚಾರ ಅಭಿಯಾನ ಆರಂಭಿಸಿ ಮಾತನಾಡಿದ ಪ್ರಧಾನಿ ಮೋದಿ, "ಮತ ಹಾಕುವ ಮೊದಲು, 2014ರ ಮೊದಲಿನ ಭಾರತ ಹಾಗೂ 2014ರ ನಂತರದ ಭಾರತದ ಚಿತ್ರಗಳನ್ನು ನೆನಪಿಸಿಕೊಳ್ಳಿ ಎಂದು ಮತದಾರರಿಗೆ ತಿಳಿಸಿದರು.

ನಾನೊಬ್ಬ ಚೌಕಿದಾರ. ಚೌಕಿದಾರ ಎಂದಿಗೂ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಕಾಂಗ್ರೆಸ್ ಅನ್ನು ಕಿತ್ತು ಹಾಕಿದರೆಷ್ಟೇ ಭಾರತದ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂಬುದು ದೇಶದ ಜನತೆ ಅರಿವಿಗೆ ಬರತೊಡಗಿದೆ. ನಿಮಗೆ ದಾಮ್‌ ದಾರ್‌ ಚೌಕಿದಾರ್‌ (ಶಕ್ತಿಶಾಲಿ ಚೌಕಿದಾರ) ಬೇಕೋ ಅಥವಾ ಕಲಬೆರಕೆ ಸರ್ಕಾರ ಬೇಕೇ ಎಂಬುದನ್ನು ನೀವೇ ನಿರ್ಧರಿಸಿ ಎಂದು ಜನತೆಗೆ ಕರೆ ನೀಡಿದರು.

ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಅವರ ಜಾತಿಯನ್ನು ವಿಚಾರಿಸಿ ನಂತರ ವಿಚಾರಣೆ ನಡೆಸುತ್ತಿತ್ತು ಎಂದು ಕಾಂಗ್ರೆಸ್‌ ಪಕ್ಷದ ಮೃದು ಉಗ್ರ ನೀತಿಯ ವಿರುದ್ಧ ಗಂಭೀರವಾದ ಆರೋಪ ಮಾಡಿದರಲ್ಲದೆ, ನಮ್ಮ ಪಡೆಗಳು ಅತ್ಯಾಧುನಿಕ ಶಸ್ತ್ರೋಪಕರಣಗಳಿಗಾಗಿ ಹಿಂದಿನಿಂದಲೂ ಬೇಡುತ್ತಲೇ ಇದ್ದವು. ಆದರೆ ಹಿಂದಿನ ಸರ್ಕಾರವು ಕಡತಗಳನ್ನು ದೂಳಿಡಿಸಿತ್ತು. ಫೆ.26ರಂದು (ಎ-ಸ್ಯಾಟ್ ಎಂಬ ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆ) ಏನಾದರೂ ಸ್ವಲ್ಪ ಎಡವಟ್ಟಾಗಿದ್ದರೂ ಈ ಜನ ನನ್ನ ಪ್ರತಿಕೃತಿ ದಹಿಸುತ್ತಿದ್ದರು ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದರು.

Trending News