ಏಕದಿನದಲ್ಲಿ ತ್ರಿಶತಕ ಬಾರಿಸಬಲ್ಲರು ಈ ಮೂವರು ಬ್ಯಾಟ್ಸ್’ಮನ್’ಗಳು! ಅದರಲ್ಲಿ ಇಬ್ಬರು ಭಾರತೀಯ ದಿಗ್ಗಜರು…

ODI Cricket triple century: ರೋಹಿತ್ ಶರ್ಮಾ 13 ನವೆಂಬರ್ 2014 ರಂದು ಶ್ರೀಲಂಕಾ ವಿರುದ್ಧದ ಕೋಲ್ಕತ್ತಾ ODI ಪಂದ್ಯದಲ್ಲಿ 264 ರನ್‌ ಗಳ ವಿಶ್ವ ದಾಖಲೆಯ ಇನ್ನಿಂಗ್ಸ್ ಆಡಿದ್ದರು. ಅಂದಿನಿಂದ 8 ವರ್ಷಗಳು ಕಳೆದಿವೆ. ಆದರೆ ಏಕದಿನ ಕ್ರಿಕೆಟ್‌ ನಲ್ಲಿ ರೋಹಿತ್ ಶರ್ಮಾ ಅವರ ಈ ವಿಶ್ವ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಲಿಲ್ಲ.

Written by - Bhavishya Shetty | Last Updated : Jun 22, 2023, 08:49 AM IST
    • ಏಕದಿನ ಕ್ರಿಕೆಟ್‌ ನಲ್ಲಿ ರೋಹಿತ್ ಶರ್ಮಾ ವಿಶ್ವ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಲಿಲ್ಲ.
    • ಆದರೆ ಈ ವಿಶ್ವದಾಖಲೆಯನ್ನು ಮುರಿಯುವ 3 ಬ್ಯಾಟ್ಸ್‌ಮನ್‌ ಗಳಿದ್ದಾರೆ.
    • ODI ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಒಂದು ವೇಳೆ ಮೊದಲ ತ್ರಿಶತಕ ಬಾರಿಸಿದರೆ ಅದು ಇತಿಹಾಸವಾಗಲಿದೆ.
ಏಕದಿನದಲ್ಲಿ ತ್ರಿಶತಕ ಬಾರಿಸಬಲ್ಲರು ಈ ಮೂವರು ಬ್ಯಾಟ್ಸ್’ಮನ್’ಗಳು! ಅದರಲ್ಲಿ ಇಬ್ಬರು ಭಾರತೀಯ ದಿಗ್ಗಜರು… title=

ODI Cricket triple century: ಟಿ20 ಮತ್ತು ಟಿ10 ಕ್ರಿಕೆಟ್ ಬಂದ ನಂತರ ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್ ಆಡುವ ಶೈಲಿಯೇ ಬದಲಾಗಿದೆ. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೆ, ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ತ್ರಿಶತಕ ಗಳಿಸಲು ಸಾಧ್ಯವಾಗಿಲ್ಲ. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ವೈಯಕ್ತಿಕ ಇನ್ನಿಂಗ್ಸ್ ಆಡಿದ ವಿಶ್ವದಾಖಲೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಹಾಲಿ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ.

ಇದನ್ನೂ ಓದಿ: ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ರೋಹಿತ್ ಶರ್ಮಾ 13 ನವೆಂಬರ್ 2014 ರಂದು ಶ್ರೀಲಂಕಾ ವಿರುದ್ಧದ ಕೋಲ್ಕತ್ತಾ ODI ಪಂದ್ಯದಲ್ಲಿ 264 ರನ್‌ ಗಳ ವಿಶ್ವ ದಾಖಲೆಯ ಇನ್ನಿಂಗ್ಸ್ ಆಡಿದ್ದರು. ಅಂದಿನಿಂದ 8 ವರ್ಷಗಳು ಕಳೆದಿವೆ. ಆದರೆ ಏಕದಿನ ಕ್ರಿಕೆಟ್‌ ನಲ್ಲಿ ರೋಹಿತ್ ಶರ್ಮಾ ಅವರ ಈ ವಿಶ್ವ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಲಿಲ್ಲ. ಆದರೆ ರೋಹಿತ್ ಶರ್ಮಾ ಅವರ ಈ ವಿಶ್ವದಾಖಲೆಯನ್ನು ಮುರಿಯುವ 3 ಬ್ಯಾಟ್ಸ್‌ಮನ್‌ ಗಳಿದ್ದಾರೆ. ODI ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಒಂದು ವೇಳೆ ಮೊದಲ ತ್ರಿಶತಕ ಬಾರಿಸಿದರೆ ಅದು ಇತಿಹಾಸವಾಗಲಿದೆ.

ಸೂರ್ಯಕುಮಾರ್ ಯಾದವ್ (ಭಾರತ): ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಶರ್ಮಾ ಅವರ 264 ರನ್‌ ಗಳ ವಿಶ್ವ ದಾಖಲೆಯನ್ನು ಮುರಿಯುವುದು ಮಾತ್ರವಲ್ಲದೆ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಟ್ರಿಪಲ್ ಶತಕವನ್ನು ಬಾರಿಸಬಹುದು ಎಂದು ಹೇಳಲಾಗುತ್ತಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ ಎಬಿ ಡಿವಿಲಿಯರ್ಸ್ ಎಂದೂ ಸಹ ಕರೆಯುತ್ತಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಟ್ರಿಪಲ್ ಸೆಂಚುರಿ ಬಾರಿಸುವ ಸಂಪೂರ್ಣ ಸಾಮರ್ಥ್ಯ ಇವರಿಗೆ ಇದೆಯಂತೆ. ಸೂರ್ಯಕುಮಾರ್ ಯಾದವ್ ಪ್ರಸ್ತುತ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಗಳಲ್ಲಿ ಒಬ್ಬರು, ಮೈದಾನದ ಸುತ್ತಲೂ 360 ಡಿಗ್ರಿ ಕೋನದಲ್ಲಿ ಬೌಂಡರಿ ಮತ್ತು ಸಿಕ್ಸರ್‌ ಗಳನ್ನು ಬಾರಿಸುತ್ತಾರೆ.

ಹ್ಯಾರಿ ಬ್ರೂಕ್ (ಇಂಗ್ಲೆಂಡ್): ಇಂಗ್ಲೆಂಡ್‌ ನ ಸ್ಫೋಟಕ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ತ್ರಿಶತಕ ಸಿಡಿಸಬಲ್ಲರು ಎಂದು ಹೇಳಲಾಗುತ್ತಿದೆ. ಹ್ಯಾರಿ ಬ್ರೂಕ್ ಇದುವರೆಗೆ ಇಂಗ್ಲೆಂಡ್ ಪರ ಕೇವಲ 8 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 74.67 ಸರಾಸರಿಯಲ್ಲಿ 896 ರನ್ ಗಳಿಸಿದ್ದಾರೆ. ಹ್ಯಾರಿ ಬ್ರೂಕ್ ಏಕದಿನ ಪಂದ್ಯಗಳಲ್ಲಿ 4 ಶತಕ ಮತ್ತು 3 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ನಲ್ಲಿ ಹ್ಯಾರಿ ಬ್ರೂಕ್ ಅವರ ಅತ್ಯುತ್ತಮ ಇನ್ನಿಂಗ್ಸ್ 186 ರನ್.

ಇದನ್ನೂ ಓದಿ: ಬ್ಯಾಟಿಂಗ್- ವಿಕೆಟ್ ಕೀಪಿಂಗ್’ನಲ್ಲಿ ಧೋನಿ ಆಟ ನೆನಪಿಸುವ ಈ ಆಟಗಾರ Team Indiaಗೆ ಹೆಜ್ಜೆ!

ಶುಭ್ಮನ್ ಗಿಲ್ (ಭಾರತ): ಭಾರತದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಟ್ರಿಪಲ್ ಸೆಂಚುರಿ ಬಾರಿಸುವ ಸಂಪೂರ್ಣ ಶಕ್ತಿ ಹೊಂದಿದ್ದಾರೆ. ಇದುವರೆಗೆ ಭಾರತದ ಪರ ಕೇವಲ 24 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್, 65.55 ಸರಾಸರಿಯಲ್ಲಿ 1311 ರನ್ ಗಳಿಸಿದ್ದಾರೆ. ಶುಭಮನ್ ಗಿಲ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1 ದ್ವಿಶತಕ, 4 ಶತಕ ಮತ್ತು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ 208 ರನ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News