ನೀರಿನ ಬಿಲ್ ಕಟ್ಟದೆ ಜಲಮಂಡಳಿಗೆ ಖನ್ನಾ ಹಾಕಿದ್ವಾ ಸರ್ಕಾರಿ ಸಂಸ್ಥೆಗಳು..?

ಕಳೆದ ನಾಲ್ಕೈದು ವರ್ಷಗಳಿಂದ ಸರ್ಕಾರಿ ಸಂಸ್ಥೆಗಳು ನೀರಿನ ಬಿಲ್ ಕಟ್ಟದೆ ಇರುವುದರಿಂದ ಜಲಮಂಡಲಿಗೆ ಈಗ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.

Written by - Manjunath N | Last Updated : Jul 5, 2023, 12:15 PM IST
  • ಸರ್ಕಾರಿ ಸಂಸ್ಥೆಗಳು ಬರೋಬ್ಬರಿ 1600 ಕೋಟಿಗಿಂತಲೂ ಹೆಚ್ಚು ಬಿಲ್ ಬಾಕಿಗಳನ್ನು ಉಳಿಸಿಕೊಂಡಿವೆ ಎನ್ನಲಾಗಿದೆ.
  • ಅಷ್ಟೇ ಅಲ್ಲದೆ ಸರ್ಕಾರೇತರ ಸಂಸ್ಥೆಗಳಿಂದ 16201ಕೋಟಿ ವಾಟರ್ ಬಿಲ್ ಪಾವತಿಯಾಗಬೇಕಿದೆ.
  • ಈಗ ಜಲಮಂಡಲಿ ಈ ವಿಚಾರವಾಗಿ ಈ ಸಂಸ್ಥೆಗಳಿಗೆ ಬಿಲ್ ಪಾವತಿ ಮಾಡುವಂತೆ ಪತ್ರ ಬರೆದರೂ ಕೂಡ ಯಾವುದೇ ರೀತಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ನೀರಿನ ಬಿಲ್ ಕಟ್ಟದೆ ಜಲಮಂಡಳಿಗೆ ಖನ್ನಾ ಹಾಕಿದ್ವಾ ಸರ್ಕಾರಿ ಸಂಸ್ಥೆಗಳು..? title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ನಾಲ್ಕೈದು ವರ್ಷಗಳಿಂದ ಸರ್ಕಾರಿ ಸಂಸ್ಥೆಗಳು ನೀರಿನ ಬಿಲ್ ಕಟ್ಟದೆ ಇರುವುದರಿಂದ ಜಲಮಂಡಲಿಗೆ ಈಗ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.

ಸರ್ಕಾರಿ ಸಂಸ್ಥೆಗಳು ಬರೋಬ್ಬರಿ  1600 ಕೋಟಿಗಿಂತಲೂ ಹೆಚ್ಚು ಬಿಲ್ ಬಾಕಿಗಳನ್ನು ಉಳಿಸಿಕೊಂಡಿವೆ ಎನ್ನಲಾಗಿದೆ.ಅಷ್ಟೇ ಅಲ್ಲದೆ ಸರ್ಕಾರೇತರ ಸಂಸ್ಥೆಗಳಿಂದ 16201ಕೋಟಿ ವಾಟರ್ ಬಿಲ್ ಪಾವತಿಯಾಗಬೇಕಿದೆ.ಈಗ ಜಲಮಂಡಲಿ ಈ ವಿಚಾರವಾಗಿ ಈ ಸಂಸ್ಥೆಗಳಿಗೆ ಬಿಲ್ ಪಾವತಿ ಮಾಡುವಂತೆ ಪತ್ರ ಬರೆದರೂ ಕೂಡ ಯಾವುದೇ ರೀತಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.ಸಕಾಲಕ್ಕೆ ಪಾವತಿ ಮಾಡದೇ ಇರುವುದಕ್ಕೆ ದಂಡ ವಿಧಿಸಿದರೂ ಕೂಡ ಸರ್ಕಾರಿ ಸಂಸ್ಥೆಗಳು ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Ajit Agarkar: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

ಇನ್ನೂ ಸರ್ಕಾರದ ಇಲಾಖೆವಾರು ಪಾವತಿ ಮಾಡಬೇಕಿರುವ ಬಿಲ್ ಮೊತ್ತವನ್ನು ಗಮನಿಸಿದಾಗ ಈ ಕೆಳಗಿನಂತೆ ಅವು ಬಿಲ್ ಗಳನ್ನು ಪಾವತಿ ಮಾಡಬೇಕಾಗಿದೆ.

ರಕ್ಷಣಾ-28 ಕೋಟಿ

ಕೇಂದ್ರ ಸರ್ಕಾರ ಅಧೀನದ ಇಲಾಖೆಗಳು - 22 ಕೋಟಿ

ರಾಜ್ಯ ಸರ್ಕಾರ ಅಧೀನ ಕಚೇರಿ -  8 ಕೋಟಿ

ಬಿಬಿಎಂಪಿ - 21 ಕೋಟಿ

ನಿಗಮ ಮಂಡಳಿಗಳು - 9 ಕೋಟಿ

ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!

ಈ ವಿಚಾರವಾಗಿ ಜಲಮಂಡಲಿಯ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ಆದಷ್ಟು ಬೇಗನೆ ಪಾವತಿ ಮಾಡುವಂತೆ ಪತ್ರ ಬರೆಯಲಾಗಿದೆ.ಆಸ್ಪತ್ರೆಗಳಲ್ಲೂ ಕೂಡಾ ಬಿಲ್ ಬಾಕಿ ಇದೆ, ಎಲ್ಲವನ್ನೂ ನಾವು ಕಟ್ಟಿಸಲು ತಿಳಿಸಿದ್ದೇವೆಆದ್ರೆ ಬಜೆಟ್ ಮಂಡನೆಯ ನಂತರ ಪಾವತಿ ಮಾಡ್ತಿವಿ ಅಂತಿದ್ದಾರೆ‌ ಎಂದು ಅವರು ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News