Budha Gochara 2023: ನಾಳೆ ಕರ್ಕ ರಾಶಿಗೆ ಬುಧನ ಪ್ರವೇಶ, 4 ರಾಶಿಗಳ ಜನರ ಭಾಗ್ಯ-ನೌಕರಿ-ವ್ಯಾಪಾರದಲ್ಲಿ ಅಪಾರ ಉನ್ನತಿಯ ಯೋಗ!

Mercury Transit 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಜುಲೈ 8, 2023 ರಂದು ನವಗ್ರಹಗಳಲ್ಲಿ ಬುದ್ಧಿ ಮತ್ತು ವಾಣಿಯ ಕಾರಕ ಗ್ರಹ ಎಂದೇ ಕರೆಯಲಾಗುವ ಬುಧ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧನ ಈ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ, ಆದರೆ, ನಾಲ್ಕು ರಾಶಿಗಳ ಜಾತಕದವರ ಮೇಲೆ ಇದರ ವಿಶೇಷ ಪ್ರಭಾವ ಉಂಟಾಗಲಿದ್ದು, ಈ ರಾಶಿಗಳ ಜನರ ಭಾಗ್ಯ, ನೌಕರಿ ಹಾಗೂ ವ್ಯಾಪಾರದಲ್ಲಿ ಅಪಾರ ಉನ್ನತಿ ನೆರವೇರಲಿದೆ.
 

Budh Gochar In Kark Rashi: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನಿಗೆ ಅತ್ಯಂತ ಮಹತ್ವದ ಗ್ರಹದ ಸ್ಥಾನಮಾನ ನೀಡಲಾಗಿದೆ. ಬುಧವನ್ನು ಎಲ್ಲಾ ಒಂಬತ್ತು ಗ್ರಹಗಳಲ್ಲಿ ರಾಜಕುಮಾರ ಎಂದೂ ಕರೆಯಲಾಗುತ್ತದೆ. ಬುಧವು ವ್ಯಕ್ತಿಯ ಬುದ್ಧಿವಂತಿಕೆ, ಸಂವಹನ, ಮಾತು, ತರ್ಕಬದ್ಧ ಚಿಂತನೆ ಮತ್ತು ವ್ಯವಹಾರದ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಇನ್ನೊಂದೆಡೆ ಮಿಥುನ ಮತ್ತು ಕನ್ಯಾ ರಾಶಿಯ ಮೇಲೆ ಬುಧನ ಆಧಿಪತ್ಯ ಇರುತ್ತದೆ. ಬುಧ ಶುಕ್ರ ಮತ್ತು ಶನಿಯೊಂದಿಗೆ ಸ್ನೇಹ ಭಾವದ ಸಂಬಂಧ ಹೊಂದಿದೆ. ಸಾಮಾನ್ಯವಾಗಿ, ಬುಧವು ಸುಮಾರು 23 ದಿನಗಳ ಅವಧಿಯಲ್ಲಿ ಒಂದು ರಾಶಿಯಿಂದ ಇನ್ನೊಂದಕ್ಕೆ ಸಾಗುತ್ತದೆ. ಪ್ರಸ್ತುತ ಜುಲೈ 8, 2023 ರಂದು ಮಧ್ಯಾಹ್ನ 12.05 ಕ್ಕೆ ಬುಧ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು 4 ರಾಶಿಗಳ ಜಾತಕದವರಿಗೆ ಅಪಾರ ಲಾಭ ಉಂಟಾಗುವ ಎಲ್ಲಾ ಸಾಧ್ಯಗಳಿವೆ.  ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Shravan 2023: ನಿರ್ಮಾಣಗೊಂಡಿದೆ ಅತ್ಯಂತ ವಿನಾಶಕಾರಿ 'ವಿಷಯೋಗ', ಆದರೆ 3 ರಾಶಿಗಳ ಮೇಲೆ ಅಪಾರ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೃಷಭ ರಾಶಿ : ವೃಷಭ ರಾಶಿಯ ತೃತೀಯ ಭಾವದಲ್ಲಿ ಬುಧನ ಈ ಸಂಕ್ರಮಣ ನೆರವೇರುತ್ತಿದೆ. ಇನ್ನೊಂದೆಡೆ ವೃಷಭ ರಾಶಿಯ ದ್ವಿತೀಯ ಹಾಗೂ ಪಂಚಮ ಭಾವಕ್ಕೆ ಬುಧ ಅಧಿಪತಿ, ಬುಧನ ಈ ರಾಶಿ ಪರಿವರ್ತನೆ ವಿಶೇಷವಾಗಿ ವೃಷಭ ರಾಶಿಯ ಸ್ಥಳೀಯರಿಗೆ ಯಶಸ್ಸು ಮತ್ತು ಪ್ರಗತಿಯನ್ನು ನೀಡುತ್ತದೆ. ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಈ ರಾಶಿಯ ಜಾತಕದವರಿಗೆ ಹೆಚ್ಚಿನ ಲಾಭ ಮತ್ತು ಕೆಲವು ಉತ್ತಮ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ. ವಿದೇಶದಲ್ಲಿ ಕೆಲಸ ಮಾಡಲು ಬಯಸುವವರ ಆಸೆ ಈಡೇರುವ ಸಾಧ್ಯತೆ ಇದೆ. ನೌಕರ ವರ್ಗಕ್ಕೆ ಸಂಬಂಧಿಸಿದ ಈ ರಾಶಿಯ ಸ್ಥಳೀಯರಿಗೆ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಪರ್ಫಾರ್ಮೆನ್ಸ್ ನಿಮ್ಮದಾಗಲಿದೆ. ವ್ಯಾಪಾರ ವರ್ಗದ ಜನರಿಗೂ ಕೂಡ ಇದರಿಂದ ಸಾಕಷ್ಟು ಲಾಭ ಉಂಟಾಗಲಿದೆ.  

2 /5

ಕನ್ಯಾ ರಾಶಿ : ಬುಧನ ಈ ಸಂಕ್ರಮಣ ಕನ್ಯಾ ರಾಶಿಯ ಸ್ಥಳೀಯರಿಗೆ ಸಾಕಷ್ಟು ಅನುಕೂಲಕರವಾಗಿದೆ, ಬುಧನು ನಿಮಗೆ ನಿಮ್ಮ ಜಾತಕದ ಪ್ರಥಮ ಹಾಗೂ ದಶಮ ಭಾವಗಳಿಗೆ ಅಧಿಪತಿ ಮತ್ತು ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಬುಧನ ಈ ಗೋಚರ ನೆರವೇರುತ್ತಿದೆ.  ಈ ಸಂಚಾರವು ಕನ್ಯಾ ರಾಶಿಯವರಿಗೆ ಅದ್ಭುತ ಸಮಯ ಎಂದು ಸಾಬೀತುಪಡಿಸುತ್ತದೆ. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಇದರೊಂದಿಗೆ, ನಿಮ್ಮ ಆಸೆಗಳು ಈಡೇರಲಿವೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಬುಧನ ಈ ಗೋಚರದಿಂದ ವಿದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಪಡೆಯಲು ಬಹಾಸುವವರಿಗೆ ಅತ್ಯುತ್ತಮವಾಗಿದೆ. ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹಿರಿಯರ ಹಾಗೂ ಮೇಲಾಧಿಕಾರಗಳ ಬೆಂಬಲ ನಿಮಗೆ ಸಿಗಲಿದೆ. ವ್ಯಾಪಾರ ವರ್ಗದ ಜನರಿಗೆ ಈ ಸಮಯ ಒಂದು ವರದಾನ ಸಾಬೀತಾಗಲಿದೆ. ವ್ಯಾಪಾರವನ್ನು ವಿಸ್ತರಿಸುವ ಯೋಜನೇ ಇದ್ದರೆ ಸಮಯ ಅನುಕೂಲಕರವಾಗಿದೆ. ವ್ಯವಹಾರದಲ್ಲಿ ನೀವು ಸಾಕಷ್ಟು ಲಾಭ ಸಂಪಾದಿಸುವಿರಿ.   

3 /5

ತುಲಾ ರಾಶಿ: ಬುಧನ ಈ ಸಂಕ್ರಮಣ ನಿಮ್ಮ ಪಾಲಿಗೆ ಒಂದು ವರದಾನ ಸಾಬೀತಾಗಲಿದೆ. ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಈ ಗೋಚರ ನೆರವೇರುತ್ತಿದೆ. ಇದಲ್ಲದೆ ಬುಧ ನಿಮ್ಮ ಜಾತಕದ ನವಮ ಹಾಗೂ ದ್ವಾದಶ ಭಾವಕ್ಕೆ ಅಧಿಪತಿ ಕೂಡ ಹೌದು.  ಇಂತಹ ಪರಿಸ್ಥಿತಿಯಲ್ಲಿ, ತುಲಾ ರಾಶಿಯ ಜನರು ಈ ಅವಧಿಯಲ್ಲಿ ಉದ್ಯೋಗದಲ್ಲಿ ಕೆಲವು ಬದಲಾವಣೆಗಳನ್ನು ಎದುರಿಸಬೇಕಾಗಬಹುದು ಮತ್ತು ಕೆಲವರು ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. ಈ ಸಮಯದಲ್ಲಿ, ನಿಮ್ಮ ಕೆಲಸದ ಬಗ್ಗೆ ನೀವು ಹೆಚ್ಚು ಜಾಗೃತರಾಗಿರುತ್ತೀರಿ. ವೃತ್ತಿಜೀವನದ ವೇದಿಕೆಯ ಕುರಿತು ಹೇಳುವುದಾದರೆ, ತುಲಾ ರಾಶಿಯ ಜನರು ಈ ಅವಧಿಯಲ್ಲಿ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ, ಅದು ನಿಮಗೆ ತೃಪ್ತಿಯನ್ನು ನೀಡುತ್ತದೆ. ಬಡ್ತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಉದ್ಯೋಗ ಬದಲಾಯಿಸುವ ಯೋಜನೆ ಇದ್ದರೆ ಸಮಯ ಅನುಕೂಲಕರವಾಗಿದೆ. ವ್ಯಾಪಾರ ವರ್ಗದ ಜನರ ಕುರಿತು ಹೇಳುವುದಾದರೆ ಈ ಸಮಯ ಸಾಕಷ್ಟು ಲಾಭದಾಯಕವಾಗಿದೆ. ಆಮದು-ರಫ್ತು ವ್ಯವಹಾರ ನಡೆಸುತ್ತಿರುವ ಸ್ಥಳೀಯರಿಗೆ ಅಪಾರ ಲಾಭ ಸಿಗಲಿದೆ.   

4 /5

ಮಕರ ರಾಶಿ: ಬುಧನ ಈ ಕರ್ಕ ಗೋಚರ ಮಕರ ರಾಶಿಯ ಜಾತಕದವರ ಪಾಲಿಗೆ ಅದ್ಭುತ ಸಾಬೀತಾಗಲಿದೆ.  ಮಕರ ರಾಶಿಯ ಸ್ಥಳೀಯರ ಜಾತಕದ ಷಷ್ಟಮ ಹಾಗೂ ನವಮ ಭಾವಕ್ಕೆ ಬುಧ ಅಧಿಪತಿ. ಈ ಕಾರಣದಿಂದಾಗಿ, ಈ ರಾಹಿಯ ಜನರು ಈ ಅವಧಿಯಲ್ಲಿ ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಲಿದ್ದಾರೆ. ಆದಾಗ್ಯೂ, ವೈಯಕ್ತಿಕ ಜೀವನದಲ್ಲಿ ನಿಮ್ಮ ಬಾಳಸಂಗಾತಿಯೊಂದಿಗೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನೀವು ದೂರದ ಪ್ರಯಾಣವನ್ನು ಮಾಡಬೇಕಾಗಬಹುದು ಮತ್ತು ಈ ಪ್ರಯಾಣವು ನಿಮಗೆ ಮಂಗಳಕರವಾಗಿರುತ್ತದೆ. ಕರ್ಕ ರಾಶಿಯಲ್ಲಿ ಬುಧದ ಈ ಸಂಕ್ರಮಣವು ಪಾರ್ಟ್ನರ್ಶಿಪ್ ವ್ಯವಹಾರ ಮಾಡುವವರಿಗೆ ವಿಶೇಷವಾಗಿ ಪ್ರಯೋಜನವನ್ನು ನೀಡುತ್ತದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಿಮಗೆ ನಿಮ್ಮ ನೌಕರಿಯಲ್ಲಿ ವೇಗವಾಗಿ ಬೆಳೆಯುವ ಅವಕಾಶ ಸಿಗಲಿದೆ. ವಿದೇಶಗಳಿಂದ ನಿಮಗೆ ಅವಕಾಶಗಳು ಒದಗಿ ಬರಲಿವೆ. ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿರಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)