ನವದೆಹಲಿ: ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಫಾಕ್ಸ್ಕಾನ್ ಭಾರತದ ವೇದಾಂತ ಕಂಪನಿಯೊಂದಿಗಿನ ಸೆಮಿಕಂಡಕ್ಟರ್ ಜಂಟಿ ಉದ್ಯಮದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರದ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೋಮವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ, "ವೇದಾಂತ ಜೊತೆಗಿನ ತನ್ನ ಜಂಟಿ ಉದ್ಯಮದಿಂದ ಹಿಂದೆ ಸರಿಯುವ ಫಾಕ್ಸ್ಕಾನ್ ನಿರ್ಧಾರವು ಭಾರತದ ಸೆಮಿಕಂಡಕ್ಟರ್ ಫ್ಯಾಬ್ ಗುರಿಗಳ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ" ಎಂದಿದ್ದಾರೆ.
➡️This decision of Foxconn to withdraw from its JV wth Vedanta has no impact on India's #Semiconductor Fab goals. None.
➡️Both Foxconn n Vedanta have significant investments in India and are valued investors who are creating jobs n growth.
➡️It was well known that both… https://t.co/0DQrwXeCIr
— Rajeev Chandrasekhar 🇮🇳 (@Rajeev_GoI) July 10, 2023
ಫಾಕ್ಸ್ಕಾನ್ ಕಳೆದ ವರ್ಷ ಗುಜರಾತ್ನಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಘಟಕವನ್ನು ಸ್ಥಾಪಿಸಲು ವೇದಾಂತದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಸುಮಾರು 1.5 ಲಕ್ಷ ಕೋಟಿ ಹೂಡಿಕೆಯಾಗಬೇಕಿತ್ತು.
'ಖಾಸಗಿ ಕಂಪನಿಗಳು ಪಾಲುದಾರರನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತವೆ ಎಂಬುದು ಸರ್ಕಾರದ ಕೆಲಸವಲ್ಲ'
ಎರಡು ಖಾಸಗಿ ಕಂಪನಿಗಳು ಪಾಲುದಾರರನ್ನು ಆಯ್ಕೆ ಮಾಡುವುದು ಅಥವಾ ಆಯ್ಕೆ ಮಾಡದಿರುವುದು ಸರ್ಕಾರದ ಕೆಲಸವಲ್ಲ. ಆದರೆ ಸರಳ ಭಾಷೆಯಲ್ಲಿ ಹೇಳುವುದಾದರೆ, ಸೆಮಿಕಾನ್ ಮತ್ತು ಎಲೆಕ್ಟ್ರಾನಿಕ್ಸ್ನಲ್ಲಿ ಸರಿಯಾದ ತಂತ್ರಜ್ಞಾನ ಪಾಲುದಾರರೊಂದಿಗೆ ಎರಡೂ ಕಂಪನಿಗಳು ಭಾರತದಲ್ಲಿ ಮುಕ್ತವಾಗಿ ತಂತ್ರಗಳನ್ನು (Tech News In Kannada) ರೂಪಿಸುವ ಮೂಲಕ ಕಾರ್ಯನಿರ್ವಹಿಸಬಹುದು ಎಂದು ಸಚಿವ ಚಂದ್ರಶೇಖರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ-Tech News: ಭಾರತದಲ್ಲಿ ನಾಳೆ ಬಿಡುಗಡೆಯಾಗುತ್ತಿದೆ ಒಪ್ಪೋ ರೆನೊ 10 ಸರಣಿ, DSLR ಕ್ಯಾಮೆರಾ ಮರೆತ್ಹೋಗುವಿರಿ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಸೆಮಿಕಾನ್ ಸ್ಟ್ರಾಟಜಿ ಮತ್ತು ನೀತಿಯನ್ನು ಅನುಮೋದಿಸಿದ 18 ತಿಂಗಳುಗಳಲ್ಲಿ ಅರೆವಾಹಕ ಪರಿಸರ ವ್ಯವಸ್ಥೆಯನ್ನು (ಸೆಮಿ ಕಂಡಕ್ಟರ್ ಎನ್ವಿರಾನ್ಮೆಂಟ್ ಸಿಸ್ಟಮ್) ವೇಗಗೊಳಿಸುವ ಭಾರತದ ಕಾರ್ಯತಂತ್ರವು ತ್ವರಿತ ಪ್ರಗತಿಯನ್ನು ಕಂಡಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Rain Update: ಬೆಟ್ಟಗಳಿಂದ ಹಿಡಿದು ಮೈದಾನಗಳವರೆಗೆ ಎಲ್ಲಿ ನೋಡಿದರು ಜಲಪ್ರಳಯ... ಇಲ್ಲಿದೆ ಮಳೆಯ ತಾಂಡವದ ಚಿತ್ರಣ
ಎರಡೂ ಕಂಪನಿಗಳು 'ಮೇಕ್ ಇನ್ ಇಂಡಿಯಾ'ಕ್ಕೆ ಬದ್ಧವಾಗಿವೆ- ಅಶ್ವಿನಿ ವೈಷ್ಣವ್
ಇದಕ್ಕೆ ಪ್ರತಿಕ್ರಿಯೆ ನೀಡಿದ ರೈಲ್ವೆ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, "ಫಾಕ್ಸ್ಕಾನ್ ಮತ್ತು ವೇದಾಂತ ಕಂಪನಿಗಳು ಭಾರತದ ಸೆಮಿಕಂಡಕ್ಟರ್ ಮಿಷನ್ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬದ್ಧವಾಗಿವೆ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.