Viral Video: ವರನ ಮುಖಕ್ಕೆ ಉಗುಳಿ, ಕಾಲಿನಿಂದ ಒದ್ದು ವೇದಿಕೆಯಿಂದ ತಳ್ಳಿದ ವಧು!

Wedding Viral Video: ಈ ವಿಡಿಯೋವನ್ನು yourlostlines ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 37 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Written by - Puttaraj K Alur | Last Updated : Jul 19, 2023, 05:04 PM IST
  • ಮದುವೆ ಕಾರ್ಯಕ್ರಮದಲ್ಲಿ ಬಲವಂತವಾಗಿ ಸಿಹಿ ತಿನ್ನಿಸಿದ ವರನಿಗೆ ವಧುವಿನಿಂದ ಗೂಸಾ
  • ಸಿಟ್ಟಿಗೆದ್ದು ವರನಿಗೆ ಉಗುಳಿ, ಒದ್ದು ವೇದಕೆಯಿಂದ ಕೆಳಗೆ ತಳ್ಳಿದ ವಧು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ವರನ ಮುಖಕ್ಕೆ ಉಗುಳಿ, ಕಾಲಿನಿಂದ ಒದ್ದು ವೇದಿಕೆಯಿಂದ ತಳ್ಳಿದ ವಧು!  title=
ಸಿಹಿ ತಿನ್ನಿಸಿದ ವರನಿಗೆ ವಧುವಿನಿಂದ ಗೂಸಾ!

ನವದೆಹಲಿ: ಮದುವೆ ಅಂದ್ರೆ ಸಂಭ್ರಮ ಮನೆಮಾಡಿರುತ್ತದೆ. ಬಂಧುಗಳು, ಸ್ನೇಹಿತರು-ಸಂಬಂಧಿಕರು ಹೀಗೆ ಸಾವಿರಾರು ಜನರು ಸೇರಿ ಖುಷಿ ಖುಷಿಯಾಗಿ ಮದುವೆಯಲ್ಲಿ ಭಾಗವಹಿಸಿರುತ್ತಾರೆ. ಆದರೆ ಕೆಲವು ಮದುವೆಗಳಲ್ಲಿ ಯಡವಟ್ಟುಗಳಾಗುತ್ತವೆ. ಅದೇ ರೀತಿಯ ಘಟನೆಗೆ ಈ ಮದುವೆ ಸಾಕ್ಷಿಯಾಗಿದೆ.

ಹೌದು, ಈ ಮದುವೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಲವಂತವಾಗಿ ಸಿಹಿ ತಿನ್ನಿಸಿದ ವರನಿಗೆ ವಧು ಮದುವೆ ಕಾರ್ಯಕ್ರಮದ ವೇದಿಕೆಯಲ್ಲಿ ಸರಿಯಾಗಿ ಜಾಡಿಸಿದ್ದಾಳೆ. ಹಾಗಾದ್ರೆ ನಡೆದಿರುವುದಾದರೂ ಏನು ಅಂತೀರಾ?  

ಇದನ್ನೂ ಓದಿ: ವಿದ್ಯುತ್ ಸ್ಪರ್ಶದಿಂದ 10 ಮಂದಿ ಸಾವು : ಉತ್ತರಾಖಂಡದ ಚಮೋಲಿಯಲ್ಲಿ ಅವಘಡ

ಮದುವೆ ವೇದಿಕೆಯಲ್ಲಿ ಮೊದಲು ವಧು ವರನಿಗೆ ಸಿಹಿ ತಿನ್ನಿಸುತ್ತಾಳೆ. ನಂತರ ವರ ಸಿಹಿ ತಿನ್ನಿಸಲು ಪ್ರಯತ್ನಿಸುತ್ತಿರುವಾಗ ವಧು ಮುಖವನ್ನು ಪಕ್ಕಕ್ಕೆ ತಿರುಗಿಸುತ್ತಾಳೆ. ಆಗ ವರ ಆಕೆಗೆ ಬಲವಂತವಾಗಿ ಸಿಹಿ ತಿನ್ನಿಸಿ ಬಾಯಿಗೆ ತುರುಕುತ್ತಾನೆ. ಇದರಿಂದ ಸಿಟ್ಟಿಗೆದ್ದ ವಧು ತಕ್ಷಣ ಆತನನ್ನು ಮಂಟಪದಿಂದ ಕೆಳಕೆ ತಳ್ಳಿಬಿಡುತ್ತಾಳೆ. ಬಳಿಕ ಅಷ್ಟಕ್ಕೇ ಸುಮ್ಮನಾಗದೆ ಆತನಿಗೆ ಒದ್ದು, ಮುಖಕ್ಕೆ ಉಗುಳುತ್ತಾಳೆ.

ಈ ವೇಳೆ ನೆರೆದಿದ್ದ ಜನರು ಆಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಆದರೆ ವಧು ಕೋಪ ನೆತ್ತಿಗೇರಿರುತ್ತದೆ. ಆಕೆ ಯಾರ ಮಾತನ್ನೂ ಕೇಳುವುದಿಲ್ಲ. ನಂತರ ಕೆಲವು ಹೆಣ್ಣುಮಕ್ಕಳು ಸಹ ಕೈ ಕೈ ಮೀಲಾಯಿಸುತ್ತಾರೆ. ಈ ವೇಳೆ ಮನೆ ಮಂದಿ ಅವರಿಗೆ ಸಮಾಧಾನ ಮಾಡಲು ಯತ್ನಿಸುತ್ತಾರೆ. ಬಳಿಕ ವಧು-ವರರ ಸಹ ಪರಸ್ಪರ ಜಗಳ ಆಡುತ್ತಾರೆ. ಈ ವಿಡಿಯೋವನ್ನು yourlostlines ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 37 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸಾಲಿ, ಸಹೇಲಿ ಹೀಗೆ ವಿಚಿತ್ರ ಹೆಸರುಗಳುಳ್ಳ ಭಾರತದ ಟಾಪ್ 14 ರೈಲು ನಿಲ್ದಾಣಗಳಿವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News