36 ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟಿನ 'ಯುವರಾಜ'

ಕ್ರಿಕೆಟ್ ನಲ್ಲಿ ಆಟಗಾರನೊಬ್ಬ ತಂಡದಲ್ಲಿ ಇಲ್ಲದಿದ್ದಾಗೂ ಕೂಡ ಅಷ್ಟೇ ಪ್ರಖ್ಯಾತಿ ಪಡೆದವರ ಹೆಸರಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ನಂತರ ಅಷ್ಟೇ ರೀತಿಯ ಜನಪ್ರಿಯತೆ ಹೊಂದಿದ ಆಟಗಾರನೆಂದರೆ ಅದು ನಿಸ್ಸಂಶಯವಾಗಿ ಯುವರಾಜ್ ಸಿಂಗ್. 

Last Updated : Dec 12, 2017, 02:45 PM IST
  • ಏಕದಿನ ಪಂದ್ಯಗಳಲ್ಲಿ 8701, ಟೆಸ್ಟ್ ಕ್ರಿಕೆಟ್ ನಲ್ಲಿ 1900 ಹಾಗೂ T20 ಪಂದ್ಯಾವಳಿಗಳಲ್ಲಿ 1177 ರನ್ ಗಳನ್ನು ಗಳಿಸಿದ್ದಾರೆ.
  • 2011 ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಅಲ್ಲದೆ ನಂತರದ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ್ದ ಯುವರಾಜ್ ಅದನ್ನು ಕೂಡ ಯಶಸ್ವಿಯಾಗಿ ಎದುರಿಸಿದ್ದರು.
  • ಈ ಆಟಗಾರ ತಮ್ಮ 36ನೆ ವಸಂತಕ್ಕೆ ಕಾಲಿಟ್ಟಿದ್ದಾರೆ, ಇದಕ್ಕೆ ಮಮತಾ ಬ್ಯಾನರ್ಜಿಯವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ
36 ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟಿನ 'ಯುವರಾಜ'  title=

ಮುಂಬೈ: ಕ್ರಿಕೆಟ್ ನಲ್ಲಿ ಆಟಗಾರನೊಬ್ಬ ತಂಡದಲ್ಲಿ ಇಲ್ಲದಿದ್ದಾಗೂ ಕೂಡ ಅಷ್ಟೇ ಪ್ರಖ್ಯಾತಿ ಪಡೆದವರ ಹೆಸರಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ನಂತರ ಅಷ್ಟೇ ರೀತಿಯ ಜನಪ್ರಿಯತೆ ಹೊಂದಿದ ಆಟಗಾರನೆಂದರೆ ಅದು ನಿಸ್ಸಂಶಯವಾಗಿ ಯುವರಾಜ್ ಸಿಂಗ್. ಈಗ ಈ ಆಟಗಾರ ತಮ್ಮ 36ನೆ ವಸಂತಕ್ಕೆ ಕಾಲಿಟ್ಟಿದ್ದಾರೆ, ಇದಕ್ಕೆ ಮಮತಾ ಬ್ಯಾನರ್ಜಿಯವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. 

ಹೌದು,  ಕೆಚ್ಚೆದೆಯ  ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಯುವರಾಜ್ ಮೈದಾನಕ್ಕೆ ಇಳಿದರೆ ಮುಗಿಯಿತು, ಬೌಲರ್ಗಳ ಎಸೆತಗಳನ್ನು ಹಿಗ್ಗಾ ಮುಗ್ಗಾ ತಳಿಸುತ್ತಾರೆ. ಈ ಹಿಂದೆ T20 ವಿಶ್ವಕಪ್ ಪಂದ್ಯಾವಳಿಯಲ್ಲಿ  ಯುವರಾಜ್ ಜೊತೆ ಜಗಳಕ್ಕೆ ಬಂದ ಇಂಗ್ಲೆಂಡಿನ ಆಟಗಾರ್ ಪ್ಲಿಂಟಾಫ್ ಮತ್ತು ಸ್ಟುವರ್ಟ್ ಬ್ರಾಡ್ ರವರಿಗೆ ಪಾಠ ಕಳಿಸಿದ ಯುವರಾಜ್, ಮರುಕ್ಷಣ ಬ್ರಾಡ್ರ ಎಸೆತಗಳನ್ನು ಓವರ್ ಒಂದರಲ್ಲಿ ಆರು ಬಾರಿ ಸಿಕ್ಸರ್ ಬಾರಿಸಿ ಕೇವಲ 12 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ್ದರು. 

ಇದು ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ ಗಳಿಸಿದ ಅರ್ಧಶತಕ ವೆಂದು ದಾಖಲಾಗಿದೆ. ಅಲ್ಲದೆ ಅವರು  2011 ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಅಲ್ಲದೆ ನಂತರದ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ್ದ  ಯುವರಾಜ್ ಅದನ್ನು ಕೂಡ ಯಶಸ್ವಿಯಾಗಿ ಎದುರಿಸಿದ್ದರು.

ಏಕದಿನ ಪಂದ್ಯಗಳಲ್ಲಿ  8701, ಟೆಸ್ಟ್ ಕ್ರಿಕೆಟ್ ನಲ್ಲಿ  1900  ಹಾಗೂ  T20 ಪಂದ್ಯಾವಳಿಗಳಲ್ಲಿ  1177 ರನ್ ಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಬಾಲಿವುಡ್ ನಟಿ ಹಜ್ಯಲ್ ಕೀಚ್ ರನ್ನು ಮದುವೆಯಾಗಿದ್ದ ಯುವರಾಜ್, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮತ್ತೆ ತಂಡಕ್ಕೆ ಸೇರುವ ನಿಟ್ಟಿನಲ್ಲಿ ಅಭ್ಯಾಸ ನಡೆಸಿದ್ದಾರೆ.

Trending News