August Graha Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಪ್ರತಿ ಗ್ರಹಕ್ಕೂ ಕೂಡ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ಗ್ರಹವೂ ಸಹ ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. ಗ್ರಹಗಳ ಸ್ಥಾನದಲ್ಲಿನ ಸಣ್ಣ ಬದಲಾವಣೆಯೂ ಕೂಡ ಎಲ್ಲಾ ಜೀವ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಇದೀಗ ಆಗಸ್ಟ್ ತಿಂಗಳಿನಲ್ಲಿ ನಾಲ್ಕು ಪ್ರಮುಖ ಗ್ರಹಗಳ ಸ್ಥಾನದಲ್ಲಿ ಬದಲಾವಣೆ ಕಂಡು ಬರಲಿದೆ.
ಆಗಸ್ಟ್ನಲ್ಲಿ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಗಸ್ಟ್ ಮಾಸದಲ್ಲಿ ಐಷಾರಾಮಿ ಜೀವನ ಕಾರಕನಾದ ಶುಕ್ರ, ಗ್ರಹಗಳ ರಾಜ ಸೂರ್ಯ, ಗ್ರಹಗಳ ಕಮಾಂಡರ್ ಮಂಗಳ ಮತ್ತು ಗ್ರಹಗಳ ರಾಜಕುಮಾರ ಬುಧ ಗ್ರಹಗಳು ರಾಶಿ ಪರಿವರ್ತನೆ ಹೊಂದಲಿವೆ. ಮೊದಲಿಗೆ ಪ್ರಸ್ತುತ ಹಿಮ್ಮುಖವಾಗಿ ಚಲಿಸುತ್ತಿರುವ ಶುಕ್ರನು ಸಿಂಹ ರಾಶಿಯನ್ನು ತೊರೆದು ಆಗಸ್ಟ್ 7 ರಂದು ಕರ್ಕಾಟಕಕ್ಕೆ ಪ್ರವೇಶಿಸಲಿದ್ದಾನೆ. ನಂತರ, ಆಗಸ್ಟ್ 17 ರಂದು ಸೂರ್ಯ ತನ್ನದೇ ಆದ ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಅದರ ಮರುದಿನವೇ ಮಂಗಳನು ಸಿಂಹ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ತಿಂಗಳ ಕೊನೆಯ ವಾರದಲ್ಲಿ ಬುಧ ಆಗಸ್ಟ್ 24ರಂದು ಸಿಂಹ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ.
ಶುಕ್ರ ರಾಶಿ ಪರಿವರ್ತನೆ ಮತ್ತು ಶುಕ್ರ ಅಸ್ತ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂತೋಷ ಮತ್ತು ಸಮೃದ್ಧಿಯ ಅಂಶವಾದ ಶುಕ್ರ ಗ್ರಹವು ಆಗಸ್ಟ್ 07, 2023ರಂದು ಹಿಮ್ಮುಖ ಸ್ಥಿತಿಯಲ್ಲಿಯೇ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಮರುದಿನ ಅಂದರೆ ಆಗಸ್ಟ್ 08 ರಂದು ಅದೇ ರಾಶಿಚಕ್ರದಲ್ಲಿ ಅಸ್ತಮಿಸಲಿದೆ. ಆಗಸ್ಟ್ ತಿಂಗಳಿನಲ್ಲಿಯೇ ಶುಕ್ರಗ್ರಹವೂ ಉದಯಿಸಲಿದೆ. ಆಗಸ್ಟ್ 18 ರಂದು ಸಂಜೆ 7:17 ಕ್ಕೆ ಶುಕ್ರನು ಕರ್ಕಾಟಕದಲ್ಲಿ ಉದಯಿಸುತ್ತಾನೆ.
ಇದನ್ನೂ ಓದಿ- Monthly Horoscope: ಆಗಸ್ಟ್ ತಿಂಗಳಲ್ಲಿ ಕೈತುಂಬಾ ಹಣ ಗಳಿಸಲಿದ್ದಾರೆ ಈ ಮೂರು ರಾಶಿಯ ಜನ
ಶುಕ್ರ ಸಂಚಾರ ಪರಿಣಾಮ:
ಆಗಸ್ಟ್ನಲ್ಲಿ ಚಂದ್ರನ ಚಿಹ್ನೆಯಾದ ಕರ್ಕ ರಾಶಿಯಲ್ಲಿ ಶುಕ್ರನ ಸಾಗಣೆಯು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ವರವನ್ನು ನೀಡುತ್ತದೆ. ಅದರಲ್ಲೂ ಶುಕ್ರ ರಾಶಿ ಪರಿವರ್ತನೆಯು ಮಿಥುನ ಮತ್ತು ವೃಶ್ಚಿಕ ರಾಶಿಯವರಿಗೆ ವರದಾನವೆಂತಲೆ ಹೇಳಲಾಗುತ್ತಿದೆ. ಈ ಎರಡೂ ರಾಶಿಗಳ ಜನರು ಆಗಸ್ಟ್ನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ಆಗಸ್ಟ್ನಲ್ಲಿ ಶುಕ್ರ ಅಸ್ತ ಕೆಲವು ರಾಶಿಯವರ ಮೇಲೆ ಮಿಶ್ರ ಫಲಗಳನ್ನು ಬೀರಲಿದೆ ಎಂದು ಹೇಳಲಾಗುತ್ತಿದೆ. ಶುಕ್ರನ ಉದಯದ ನಂತರ ಕೆಲವು ರಾಶಿಯ ಸ್ಥಳೀಯರ ಜೀವನದಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗುತ್ತದೆ.
ಸೂರ್ಯ ರಾಶಿ ಪರಿವರ್ತನೆ:
ಆಗಸ್ಟ್ 17, 2023ರಂದು ಗ್ರಹಗಳ ರಾಜ ಸೂರ್ಯನು ತನ್ನದೇ ಆದ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತಿದೆ.
ಸೂರ್ಯ ಸಂಚಾರದ ಪರಿಣಾಮ:
ಸೂರ್ಯ ರಾಶಿ ಪರಿವರ್ತನೆಯು ಸಿಂಹ ರಾಶಿ, ಧನು ರಾಶಿ ಮತ್ತು ಮಕರ ರಾಶಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ಈ ಮೂರು ರಾಶಿಯವರು ವೃತ್ತಿ ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಜೀವನದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯುತ್ತಾರೆ ಎಂದು ಬಣ್ಣಿಸಲಾಗುತ್ತಿದೆ.
ಇದನ್ನೂ ಓದಿ- Surya Gochara: ವಾಶಿ ರಾಜಯೋಗದಿಂದ ಸೂರ್ಯನಂತೆ ಕಂಗೊಳಿಸಲಿದೆ ಮೂರು ರಾಶಿಯವರ ಭವಿಷ್ಯ
ಮಂಗಳರ ರಾಶಿ ಪರಿವರ್ತನೆ:
ಗ್ರಹಗಳ ರಾಜ ಸೂರ್ಯದೇವನ ರಾಶಿ ಬದಲಾವಣೆಯ ಮರುದಿನವೇ ಎಂದರೆ ಆಗಸ್ಟ್ 18, 2023ರಂದು ಮಧ್ಯಾಹ್ನ 3ಗಂಟೆಗೆ ಧೈರ್ಯ, ಶೌರ್ಯ ಮತ್ತು ಶಕ್ತಿಯ ಅಂಶವಾದ ಗ್ರಹಗಳ ಕಮಾಂಡರ್ ಮಂಗಳನು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ.
ಮಂಗಳ ಸಂಚಾರದ ಪರಿಣಾಮ:
ಕನ್ಯಾ ರಾಶಿಗೆ ಮಂಗಳ ರಾಶಿ ಪರಿವರ್ತನೆಯು ಮೇಷ, ಮಿಥುನ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. ಮಂಗಳಕರ ಸುದ್ದಿಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
ಬುಧ ಹಿಮ್ಮುಖ ಚಲನೆ:
ಆಗಸ್ಟ್ ತಿಂಗಳಿನಲ್ಲಿ ಬುದ್ಧಿವಂತಿಕೆ, ಮಾತು ಮತ್ತು ವ್ಯವಹಾರದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಗ್ರಹಗಳ ರಾಜಕುಮಾರನಾದ ಬುಧನು ಆಗಸ್ಟ್ 24, 2023 ರಂದು ಮಧ್ಯಾಹ್ನ 12:52ಕ್ಕೆ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿಯವರು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎನ್ನಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.