Ilaiyaraaja Biopic: ಶೀಘ್ರದಲ್ಲೇ ಬೆಳ್ಳಿತೆರೆಗೆ ಇಳಯರಾಜ ಬಯೋಪಿಕ್.. ನಾಯಕ ಯಾರು ಗೊತ್ತಾ?

Ilaiyaraaja Biopic: ತಮ್ಮ ಸಂಗೀತದಿಂದ ಜನಮನ ಗೆದ್ದ ಚಕ್ರವರ್ತಿ ಅವರು. ತಮ್ಮ ಕಂಠದಿಂದ ಹಲವಾರು ಕೇಳುಗರನ್ನು ಪುಳಕಿತಗೊಳಿಸಿದ ಮೇಷ್ಟ್ರು. ಅವರೇ ಇಳಯರಾಜ. ಶೀಘ್ರದಲ್ಲೇ ಅವರ ಜೀವನ ತೆರೆ ಮೇಲೆ ಅನಾವರಣಗೊಳ್ಳಲಿದೆ.  

Written by - Chetana Devarmani | Last Updated : Aug 3, 2023, 02:52 PM IST
  • ಸಂಗೀತದಿಂದ ಜನಮನ ಗೆದ್ದ ಚಕ್ರವರ್ತಿ ಅವರು
  • ಭಾರತೀಯ ಸಂಗೀತ ಲೋಕದಲ್ಲಿ ಮೇಷ್ಟ್ರು
  • ಶೀಘ್ರದಲ್ಲೇ ಬೆಳ್ಳಿತೆರೆಗೆ ಇಳಯರಾಜ ಬಯೋಪಿಕ್
Ilaiyaraaja Biopic: ಶೀಘ್ರದಲ್ಲೇ ಬೆಳ್ಳಿತೆರೆಗೆ ಇಳಯರಾಜ ಬಯೋಪಿಕ್.. ನಾಯಕ ಯಾರು ಗೊತ್ತಾ?  title=

Ilaiyaraaja Biopic: ಇಳಯರಾಜ ಅವರನ್ನು ಭಾರತೀಯ ಸಂಗೀತ ಲೋಕದಲ್ಲಿ ಮೇಷ್ಟ್ರು ಎಂದು ಕರೆಯುತ್ತಾರೆ. ಯಾಕೆಂದರೆ ಅವರು ತಮ್ಮ ಸಂಗೀತದಿಂದ ಅನೇಕ ಸಿನಿಮಾಗಳಿಗೆ ಜೀವ ತುಂಬಿದರು. ಅವರು ತಮ್ಮ ಧ್ವನಿಯಿಂದ ಅನೇಕ ಕೇಳುಗರನ್ನು ಆಕರ್ಷಿಸಿದರು. ಅವರು ರಚಿಸಿದ ಹಾಡುಗಳು ಜನಮಾನಸದಲ್ಲಿ ಉಳಿದಿವೆ. ತೆರೆಮರೆಯಲ್ಲಿ ಸಂಗೀತದೊಂದಿಗೆ ಹಲವು ಚಿತ್ರಗಳಿಗೆ ಉಸಿರು ತುಂಬಿದ ಇಳಯರಾಜ ಅವರ ಜೀವನಗಾಥೆ ಶೀಘ್ರದಲ್ಲೇ ತೆರೆಗೆ ಬರಲಿದೆ.

ಅವರು ತಮ್ಮ ವೃತ್ತಿ ಜೀವನದಲ್ಲಿ ಸುಮಾರು 1500 ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್ ನಿರ್ದೇಶಕ ಬಾಲ್ಕಿ ಈಗ ಅವರ ಜೀವನ ಚರಿತ್ರೆಯನ್ನು (ಇಳಯರಾಜ ಬಯೋಪಿಕ್) ಪ್ರೇಕ್ಷಕರ ಮುಂದೆ ತರಲಿದ್ದಾರೆ. ಸಂಗೀತ ರಾಜನಾಗಿ ಜನಮನ ಗೆದ್ದಿರುವ ಇಳಯರಾಜ ಈಗ ಬೆಳ್ಳಿತೆರೆಗೆ ಬರುತ್ತಿದ್ದಂತೆ ಸಂಗೀತ ಪ್ರೇಮಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಳಯರಾಜ ಅವರು ನಾಲ್ಕು ಬಾರಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರಪ್ರಶಸ್ತಿ ಪಡೆದರು. 2018 ರಲ್ಲಿ, ಭಾರತ ಸರ್ಕಾರವು ಅವರಿಗೆ "ಪದ್ಮ ವಿಭೂಷಣ" ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜುಲೈ 6, 2022 ರಂದು ರಾಜ್ಯಸಭೆಗೆ ನಾಮನಿರ್ದೇಶನಗೊಂಡರು.

ಇದನ್ನೂ ಓದಿ: ರಾಮ್ ಪೋತಿನೇನಿ‌ ʼಸ್ಕಂದ’ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌..! ಶ್ರೀಲೀಲಾ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ

ಆದರೆ ಕೆಲ ದಿನಗಳಿಂದ ನಿರ್ದೇಶಕ ಬಾಲ್ಕಿ ಇಳಯರಾಜ ಅವರ ಬಯೋಪಿಕ್ ಮಾಡಲು ಹೊರಟಿದ್ದಾರೆ ಎಂಬ ಪ್ರಚಾರ ಜೋರಾಗಿದೆ. ಮೇಲಾಗಿ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದಲ್ಲದೇ ಇಳಯರಾಜ ಪಾತ್ರದಲ್ಲಿ ನಟಿಸುತ್ತಿರುವ ನಟನ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ನಾಯಕ ಧನುಷ್ ಈ ಬಯೋಪಿಕ್ ನಲ್ಲಿ ನಟಿಸಲಿದ್ದಾರಂತೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನಿರ್ದೇಶಕ ಬಾಲ್ಕಿ ಅವರು ಇಳಯರಾಜ ಅವರ ಬಯೋಪಿಕ್ ಮಾಡಲು ಬಯಸುವುದಾಗಿ ಹೇಳಿದ್ದಾರೆ. ಆ ಸಿನಿಮಾದಲ್ಲಿ ಧನುಷ್ ಅವರನ್ನು ನಾಯಕನನ್ನಾಗಿ ಮಾಡುವ ಭರವಸೆ ಇದೆ ಎಂದರು. ಧನುಷ್ ಕೂಡ ಈ ಸಿನಿಮಾ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ಬಾಲ್ಕಿ ಹೇಳಿದ್ದಾರೆ.

ಇದನ್ನೂ ಓದಿ: ವಿವಾದ ಸೃಷ್ಟಿಸುವುದಾ ಲೈಂಗಿಕ ಶಿಕ್ಷಣದ ಜಾಗೃತಿ ಮೂಡಿಸುವ ʻಒಎಂಜಿ 2’ ಸಿನಿಮಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News