ಕೇವಲ ರೂ.540ಕ್ಕೆ ಮನೆಗ ತನ್ನಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್14 5G ಫೋನ್!

Samsung Galaxy F14 5G 6.6-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ, ಇದು ಪೂರ್ಣ HD + ನ ರೆಸಲ್ಯೂಶನ್ ಮತ್ತು 90Hz ನ ರಿಫ್ರೆಶ್ ದರವನ್ನು ಹೊಂದಿದೆ (Technology News In Kannada).  

Written by - Nitin Tabib | Last Updated : Aug 8, 2023, 07:40 PM IST
  • ಕ್ಯಾಮೆರಾ ಸೆಟಪ್ ಕುರಿತು ಹೇಳುವುದಾದರೆ, Samsung Galaxy F14 5G ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮೈಕ್ರೋ ಕ್ಯಾಮೆರಾವನ್ನು ನೀಡಲಾಗಿದೆ.
  • ಇದೇ ವೇಳೆ, ಇದು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
  • ಈ ಸ್ಮಾರ್ಟ್ಫೋನ್ Android 13 ಆಧಾರಿತ One UI ಕೋರ್ 5.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕೇವಲ ರೂ.540ಕ್ಕೆ ಮನೆಗ ತನ್ನಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್14 5G ಫೋನ್! title=

ಬೆಂಗಳೂರು: ನೀವು ಹೊಸ 5G ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, Flipkart ನಲ್ಲಿ Flipkart Big Saving Days ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ Samsung Galaxy F14 5G ಅನ್ನು ನೀವು  1,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಮತ್ತು ಇದೆ ವೇಳೆ, ವಿನಿಮಯ ಕೊಡುಗೆಗಳ ಲಾಭವನ್ನು ಪಡೆದುಕೊಂಡು ನೀವು ನಿಮ್ಮ  ಹಳೆಯ ಫೋನ್ ನಿಂದಲೂ ಕೂಡ ಮುಕ್ತಿಯನ್ನು ಪಡೆಯಬಹುದು. ಬನ್ನಿ ಹಾಗಾದರೆ Samsung Galaxy F14 5G ನಲ್ಲಿ ಲಭ್ಯವಿರುವ ಆಫರ್‌ಗಳ  ವಿವರವಾಗಿ ತಿಳಿದುಕೊಳ್ಳೋಣ.

Samsung Galaxy F14 5G ಬೆಲೆ ಮತ್ತು ಕೊಡುಗೆಗಳು
Samsung Galaxy F14 5G ಯ ​​4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ರೂ 12,990 ಗೆ ಪಟ್ಟಿ ಮಾಡಲಾಗಿದೆ. ಬ್ಯಾಂಕ್ ಆಫರ್‌ನಲ್ಲಿ, ICICI ಬ್ಯಾಂಕ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಶೇ. 10 ರಷ್ಟು ತ್ವರಿತ ರಿಯಾಯಿತಿಯನ್ನು (ಗರಿಷ್ಠ ರೂ. 1250 ವರೆಗೆ) ಪಡೆಯಬಹುದು.

ಎಕ್ಸ್‌ಚೇಂಜ್ ಆಫರ್‌ಗೆ ಬರುವುದಾದರೆ, ನಿಮ್ಮ ಹಳೆಯ ಅಥವಾ ಅಸ್ತಿತ್ವದಲ್ಲಿರುವ ಫೋನ್ ಅನ್ನು ಎಕ್ಸ್‌ಚೇಂಜ್ ಮಾಡುವ ಮೂಲಕ ನೀವು ರೂ 12,450 ಉಳಿಸಬಹುದು, ಅದರ ಪರಿಣಾಮವಶಾತ್ ಫೋನಿನ ಬೆಲೆ ರೂ 540 ಕ್ಕೆ ಇಳಿಯಲಿದೆ. ಆದಾಗ್ಯೂ, ವಿನಿಮಯ ಕೊಡುಗೆಯ ಗರಿಷ್ಠ ಪ್ರಯೋಜನವು ಪ್ರಸ್ತುತ ಸ್ಥಿತಿ ಮತ್ತು ಫೋನ್‌ನ ವಿನಿಮಯದ ಮಾದರಿಯನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ-Indian Railways ಸಾಮಾನ್ಯ ಟಿಕೆಟ್ ನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವವರಿಗೊಂದು ಸಂತಸದ ಸುದ್ದಿ !

Samsung Galaxy F14 5G ನ ವೈಶಿಷ್ಟ್ಯಗಳು
Samsung Galaxy F14 5G 6.6-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ, ಇದು ಪೂರ್ಣ HD + ನ ರೆಸಲ್ಯೂಶನ್ ಮತ್ತು 90Hz ನ ರಿಫ್ರೆಶ್ ದರವನ್ನು ಹೊಂದಿದೆ. Samsung Exynos 1330 SoC ಅನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗಿದೆ. ಬ್ಯಾಟರಿ ಬ್ಯಾಕಪ್ ಕುರಿತು ಹೇಳುವುದಾದರೆ, ಈ ಫೋನ್‌ನಲ್ಲಿ 6,000mAh ಬ್ಯಾಟರಿಯನ್ನು ಒದಗಿಸಲಾಗಿದೆ, ಇದು 25W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದನ್ನೂ ನೋಡಿ-

ಇದನ್ನೂ ಓದಿ-ತನ್ನ ಬಳಕೆದಾರರಿಗೆ ಮತ್ತೊಂದು ಜಬ್ಬರ್ದಸ್ತ್ ವೈಶಿಷ್ಟ್ಯ ಬಿಡುಗಡೆ ಮಾಡಿದ ವಾಟ್ಸ್ ಆಪ್!

ಕ್ಯಾಮೆರಾ ಸೆಟಪ್ ಕುರಿತು ಹೇಳುವುದಾದರೆ, Samsung Galaxy F14 5G ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮೈಕ್ರೋ ಕ್ಯಾಮೆರಾವನ್ನು ನೀಡಲಾಗಿದೆ. ಇದೇ ವೇಳೆ, ಇದು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ Android 13 ಆಧಾರಿತ One UI ಕೋರ್ 5.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು 4 ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಭರವಸೆ ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.2, ವೈ-ಫೈ, ಜಿಪಿಎಸ್, ಎನ್‌ಎಫ್‌ಸಿ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಶಾಮೀಲಾಗಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News