ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಮಾಸ್ಟರ್ ಸ್ರ್ಟೋಕ್..! 'ಕೈ'ಕೊಟ್ಟಿದ್ದ ಬಿಜೆಪಿ ಶಾಸಕರಿಗೆ ಡಿಕೆಶಿ ರೆಡ್ ಕಾರ್ಪೆಟ್..?

Operation Kamala : ಬಿಜೆಪಿ ನಾಯಕರು ಸರ್ಕಾರ ಬೀಳುತ್ತೆ ಅನ್ನೋ ಬಾಂಬ್ ಸಿಡಿಸುತ್ತಲೇ ಇತ್ತ ಕೈನಾಯಕರು ಆಪರೇಷನ್ ಹಸ್ತಕ್ಕೆ ಕೈಹಾಕಿದಂತೆ ಕಾಣ್ತಿದೆ..ಈ ಮೂಲಕ ಬಿಜೆಪಿ ನಾಯಕರ ಏಟಿಗೆ ತಿರುಗೇಟು ನೀಡೋಕೆ ಹೊರಟಿದ್ದಾರೆ..ಮನೆ ತೊರೆದವರಿಗೆ ಘರ್ ವಾಪ್ಸಿ ಮೂಲಕ ಮನೆಗೆ ಆಹ್ವಾನ ನೀಡಿದ್ದಾರೆ...ಹೀಗಾಗಿ ಅಧಿಕೃತವಾಗಿಯೇ ಆಪರೇಷನ್ ಹಸ್ತಕ್ಕೆ ಚಾಲನೆ ಕೊಟ್ಟಿದ್ದಾರೆ...

Written by - Savita M B | Last Updated : Aug 16, 2023, 08:31 PM IST
  • ಬಿಜೆಪಿ ನಾಯಕರ ಮಾತಿಗೆ ಕಾಂಗ್ರೆಸ್ ಟಕ್ಕರ್ ಕೊಟ್ಟಿದೆ
  • ಪಕ್ಷದ ತತ್ವ ಸಿದ್ಧಾಂತ ಹಾಗೂ ಹೈಕಮಾಂಡ್ ನಾಯಕತ್ವವನ್ನ ಒಪ್ಪಿ ಬರುವವರಿಗೆ ರಣವೀಳ್ಯ ನೀಡಿದೆ
  • ಕಾಂಗ್ರೆಸ್ ಕಡೆ ವಾಪಸ್ ಬರುವ ಬಗ್ಗೆ ಮಾತುಕತೆ ನಡೆಸ್ತಿದ್ದಾರೆಂಬ ಮಾತುಗಳು ಹರಿದಾಡ್ತಿವೆ
ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಮಾಸ್ಟರ್ ಸ್ರ್ಟೋಕ್..! 'ಕೈ'ಕೊಟ್ಟಿದ್ದ ಬಿಜೆಪಿ ಶಾಸಕರಿಗೆ ಡಿಕೆಶಿ ರೆಡ್ ಕಾರ್ಪೆಟ್..? title=

BJP Leaders : ಯೆಸ್..ಇಂತದ್ದೊಂದು ಸಣ್ಣ ಅನುಮಾನ ಇದೀಗ ಶುರುವಾಗಿದೆ..ಆರೇಳು ತಿಂಗಳಷ್ಟೇ ಸರ್ಕಾರ ಪವರ್ ಅನ್ನೋ ಬಿಜೆಪಿ ನಾಯಕರ ಮಾತಿಗೆ ಕಾಂಗ್ರೆಸ್ ಟಕ್ಕರ್ ಕೊಟ್ಟಿದೆ..ಘರ್ ವಾಪ್ಸಿ ಮೂಲಕ ಪಕ್ಷ ಬಿಟ್ಟವರನ್ನ ಮತ್ತೆ ಹುಡಿತುಂಬಿ ಬರಮಾಡಿಕೊಳ್ಳೋಕೆ ಹೊರಟಿದೆ..

ಯಾರೆಲ್ಲಾ ಹಿಂದೆ ಆಪರೇಷನ್ ಕಮಲಕ್ಕೊಳಗಾಗಿ ಬಿಜೆಪಿ ಸೇರಿದ್ರೋ ಅವರಿಗೆ ಮುಕ್ತ ಆಹ್ವಾನ ಕೊಟ್ಟಿದೆ..ಪಕ್ಷದ ತತ್ವ ಸಿದ್ಧಾಂತ ಹಾಗೂ ಹೈಕಮಾಂಡ್ ನಾಯಕತ್ವವನ್ನ ಒಪ್ಪಿ ಬರುವವರಿಗೆ ರಣವೀಳ್ಯ ನೀಡಿದೆ..ಈ ಮೂಲಕ ಬಿಜೆಪಿಯ ಆಪರೇಷನ್ ಗೆ ಸೆಡ್ಡು ಹೊಡೆದಿದೆ.

ಕಾಂಗ್ರೆಸ್ ಶಾಸಕರ ಅಸಮಾಧಾನವನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ನಾಯಕರು ಒಳಗೊಳಗೇ ಆಪರೇಷನ್ ಖೆಡ್ಡಾ ರೂಪಿಸೋಕೆ ಹೊರಟಿದ್ರು..ಇದ್ರ ಸಣ್ಣ ಎಳೆಯೊಂದು ಡಿಸಿಎಂ ಡಿಕೆಶಿ ಕಿವಿಗೆ ಬಿದ್ದು ಆಪರೇಷನ್ ಹಸ್ತದ ಪ್ರಯೋಗ ನಡೆದಿದೆ ಎನ್ನಲಾಗ್ತಿದೆ..ಇದ್ರ ಜೊತೆಗೆ ವಿಧಾನಸಭಾ ಚುನಾವಣೆಯ ಹಿಂದಿನಿಂದ್ಲೂ ಕೆಲ ಬೆಂಗಳೂರು ಭಾಗದ ಶಾಸಕರು ಕೈ ಕಡೆ ವಾಲೋಕೆ ಶುರುವಾಗಿದ್ರು..

ಆದ್ರೆ ಆ ಸಮಯದಲ್ಲಿ ಬೇರೆ ಬೇರೆ ಬೆಳವಣಿಗೆಗಳು ಶುರುವಾದ ನಂತ್ರ ಕೈಬಿಟ್ಟಿದ್ದರು..ಇದೀಗ ಮತ್ತೆ ಅವರು ಕೈ ನಾಯಕರ ಮನೆ ಬಾಗಿಲಿಗೆ ಎಡತಾಕ್ತಿದ್ದಾರೆ..ಕಾಂಗ್ರೆಸ್ ಕಡೆ ವಾಪಸ್ ಬರುವ ಬಗ್ಗೆ ಮಾತುಕತೆ ನಡೆಸ್ತಿದ್ದಾರೆಂಬ ಮಾತುಗಳು ಹರಿದಾಡ್ತಿವೆ..ಪೂರಕವಾಗಿ ಎಸ್.ಟಿ.ಸೋಮಶೇಖರ್ ಪದೇ ಪದೇ ಡಿಕೆಶಿ ಪರ ಹೊಗಳ್ತಿದ್ದಾರೆ..

ಇದನ್ನೂ ಓದಿ-ಉಡುಪಿ ಘಟನೆ ವಿಚಾರದಲ್ಲಿ ರಾಜಕೀಯ ಬೇಡ, ಮಕ್ಕಳ ಹಿತಾಸಕ್ತಿ ಮುಖ್ಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಇನ್ನು ಗೋಪಾಲಯ್ಯ ಕಾರ್ಯಕ್ರಮದ ನೆಪದಲ್ಲಿ ಡಿಕೆ ಭೇಟಿ ಮಾಡಿದ್ದಾರೆ..ಅತ್ತ ವಿ.ಸೋಮಣ್ಣ,ರೋಷನ್ ಬೇಗ್ ಪರಮೇಶ್ವರ್ ಭೇಟಿಮಾಡಿದ್ದಾರೆ..ಎಂಟಿಬಿ ಸೋತ್ಮೇಲೆ ಸಿದ್ದು ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆ..ಇದೆಲ್ಲವನ್ನ ಗಮನಿಸಿದಾಗ ಬಿಜೆಪಿ ಮುಖಂಡರು ಕಾಂಗ್ರೆಸ್ ಕಡೆ ಮುಖಮಾಡಿರೋದು ಸುಳ್ಳೇನಲ್ಲ ಎನ್ನವಂತಾಗಿದೆ.

ಲೋಕಸಭೆ ಚುನಾವಣೆಗೆ ದೃಷ್ಟಿಯಿಂದ,ಸಣ್ಣ ಪುಟ್ಟ ಸಮಸ್ಯೆ ಇದ್ದರೂ,ಅದನ್ನ ಸರಿದೂಗಿಸಕೊಂಡು ಹೋಗಬೇಕು ಎಂದು ಪಕ್ಷಕ್ಕೆ ಬರುವವರೆಗೆ ಸ್ವಾಗತ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಪಕ್ಷಕ್ಕೆ ಬರ್ಲಿ..ಆದ್ರೆ ಲಾಸ್ಟ್ ಬೇಂಜ್ ಖಾಲಿ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಇನ್ನು ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗೋದಿಲ್ಲ.ಬೇರೆಯವರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಮುನಿರತ್ನ ಹೇಳಿದ್ದಾರೆ.ಇನ್ನು ಲಾಸ್ಟ್ ಬೆಂಚ್ ಅಷ್ಟೇ ಖಾಲಿ ಅನ್ನೋ ಮಾತಿಗೆ ನಾವು ಲಾಸ್ಟ್ ಬೆಂಚ್ ಕಾಯಿಸೋಕೆ ಹೋಗ್ಬೇಕಾ ಎಂದು ಗುಟುರು ಹಾಕಿದ್ದಾರೆ.

ನಾನು ರಾಜಕೀಯ ನಿವೃತ್ತಿ ತೆಗೆದುಕೊಂಡ್ರೂ ಕಾಂಗ್ರೆಸ್ ಕಡೆ ಮುಖಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದರು..ಅದಾದ ಮರುಕ್ಷಣವೇ ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿದ್ದೇಕೆಂಬ ಪ್ರಶ್ನೆಗಳು ಶುರುವಾಗಿವೆ..ಡಿಸಿಎಂ ಹಾಗೂ ಡಿ.ಕೆ.ಸುರೇಶ್ ಜೊತೆ ಅವರು ಮಾತುಕತೆ ನಡೆಸಿದ್ದೇನು ಎಂಬ ಪ್ರಶ್ನೆ ಉದ್ಬವವಾಗಿವೆ..

ಒಂದು ಮಾಹಿತಿಯ ಪ್ರಕಾರ ಮುನಿರತ್ನ ಬಿಜೆಪಿಯಲ್ಲೇ ಉಳಿದ್ರೂ‌ ಲೋಕಸಭಾ ಚುನಾವಣೆ ವೇಳೆ ಅವರ ಲಾಭಪಡೆಯಬೇಕೆಂಬ ಉದ್ದೇಶ ಡಿಕೆ ಬ್ರದರ್ಸ್ ಗಿದ್ದಂತಿದೆ..ಹಾಗಾಗಿಯೇ ತನಿಖೆಯ ಹೆಸರಿನಲ್ಲಿ ಅವರಿಗೆ ಕಾಟ ನೀಡಲಾಗ್ತಿದೆ ಎಂಬ ಮಾಹಿತಿಗಳಿವೆ.

ಕಾಂಗ್ರೆಸ್ ಕಡೆ ಮುಖಮಾಡೋಕೆ ಮುನಿರತ್ನ ಎರಡ್ಮೂರು ಭಾರಿ ಪ್ರಯತ್ನ ನಡೆಸಿದ್ದಾರೆ..ಡಿಕೆಶಿ ಒಪ್ಪಿದ್ರೂ ಡಿ.ಕೆ.ಸುರೇಶ್ ಸೇರ್ಪಡೆಗೆ ಒಪ್ತಿಲ್ಲವೆಂಬ ಮಾತುಗಳು ಕೇಳಿಬರ್ತಿವೆ..ಹಾಗಾಗಿ ಮುನಿರತ್ನ ಯಾವಾಗ ಬೇಕಾದ್ರು ಕಾಂಗ್ರೆಸ್ ಕಡೆ ವಾಲ್ತಾರೆಂಬ ಚರ್ಚೆ ಶುರುವಾಗಿವೆ..

ಒಟ್ನಲ್ಲಿ, ಬಿಜೆಪಿ ನಾಯಕರು‌ ಸರ್ಕಾರ ಬೀಳಲಿದೆ ಎಂಬ ಚರ್ಚೆ ಸೃಷ್ಟಿ‌ಮಾಡುತ್ತಲೇ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದಾರೆ..ಬಿಜೆಪಿಗೆ ತಿರುಗೇಟು ನೀಡೋಕೆ ಆಪರೇಷನ್ ಹಸ್ತಕ್ಕೆ ಚಾಲನೆ ನೀಡಿದ್ದಾರೆ..ಘರ್ ವಾಪ್ಸಿ ಮೂಲಕ ಪಕ್ಷತೊರೆದವರನ್ನ ಮಡಿಲು ತುಂಬಿಕೊಳ್ಳೋಕೆ ಪ್ರಯತ್ನ ಮುಂದುವರಿಸಿದ್ದಾರೆ..

ಇದಕ್ಕೆ ಪೂರಕವಾಗಿ ಕೆಲವು ನಾಯಕರು ಪದೇ ಪದೇ ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಎಡತಾಕ್ತಿದ್ದಾರೆ.. ಬಿಜೆಪಿ,ಜೆಡಿಎಸ್ ನಿಂದ ಬರುವವರನ್ನ ಪಕ್ಷದೊಳಗೆ ಎಂಟ್ರಿ ಕೊಡಲು ಕೈ ನಾಯಕರು ಮುಕ್ತ ಆಹ್ವಾನ ಕೊಟ್ಟಿದ್ದಾರೆ..ಹೀಗಾಗಿ‌,ಲೋಕಸಭಾ ಚುನಾವಣೆ ವೇಳೆಗೆ ಆಪರೇಷನ್ ಹಸ್ತ ನಡೆಯುವುದು ಖಚಿತವಾಗ್ತಿದೆ.

ಇದನ್ನೂ ಓದಿ-Dharwad News: ಇಂದು ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News