ನಾಳೆಯಿಂದ ಈ ರಾಶಿಯವರಿಗೆ ಶುಕ್ರ ದೆಸೆ ! ಆಗುವುದು ಧನವೃಷ್ಟಿ, ಎದುರಾಗಿದ್ದ ಎಲ್ಲಾ ಕಷ್ಟಗಳಿಂದ ಮುಕ್ತಿ

ಎಲ್ಲಾ ದ್ವಾದಶ ರಾಶಿಗಳಿಗೆ ಶುಕ್ರನ ಪ್ರವೇಶವಾದಾಗ ಅದಕ್ಕೆ ಬಹಳ ಮಹತ್ವ ಇರುತ್ತದೆ. ಎಲ್ಲಾ ಭೌತಿಕ ಸುಖಗಳಿಗೆ ಶುಕ್ರನನ್ನು  ಕಾರಣಕರ್ತ ಎಂದು ಹೇಳಲಾಗುತ್ತದೆ  

Written by - Ranjitha R K | Last Updated : Aug 17, 2023, 02:12 PM IST
  • ವೈದಿಕ ಗ್ರಂಥಗಳಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ.
  • ಪ್ರತಿ ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ತನ್ನ ಸ್ಥಾನವನ್ನು ಬದಲಿಸುತ್ತದೆ
  • ರಾಶಿ ನಕ್ಷತ್ರವನ್ನು ಬದಲಿಸುತ್ತಾ ಮುಂದೆ ಸಾಗುತ್ತದೆ.
ನಾಳೆಯಿಂದ ಈ ರಾಶಿಯವರಿಗೆ ಶುಕ್ರ ದೆಸೆ ! ಆಗುವುದು ಧನವೃಷ್ಟಿ, ಎದುರಾಗಿದ್ದ ಎಲ್ಲಾ ಕಷ್ಟಗಳಿಂದ ಮುಕ್ತಿ   title=

ಬೆಂಗಳೂರು : ವೈದಿಕ ಗ್ರಂಥಗಳಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ವೈದಿಕ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ತನ್ನ ಸ್ಥಾನವನ್ನು ಬದಲಿಸುತ್ತದೆ. ಅಂದರೆ ರಾಶಿ ನಕ್ಷತ್ರವನ್ನು ಬದಲಿಸುತ್ತಾ ಮುಂದೆ ಸಾಗುತ್ತದೆ. ಹೀಗೆಯೇ  ಕೆಲವು ಗ್ರಹಗಳು ಉದಯಿಸುತ್ತವೆ ಮತ್ತು ಅಸ್ತಮಿಸುತ್ತವೆ ಕೂಡಾ. ಎಲ್ಲಾ ದ್ವಾದಶ ರಾಶಿಗಳಿಗೆ ಶುಕ್ರನ ಪ್ರವೇಶವಾದಾಗ ಅದಕ್ಕೆ ಬಹಳ ಮಹತ್ವ ಇರುತ್ತದೆ. ಎಲ್ಲಾ ಭೌತಿಕ ಸುಖಗಳಿಗೆ ಶುಕ್ರನನ್ನು  ಕಾರಣಕರ್ತ ಎಂದು ಹೇಳಲಾಗುತ್ತದೆ. ಶುಕ್ರವು ಪ್ರಸ್ತುತ ಕರ್ಕಾಟಕ ರಾಶಿಯಲ್ಲಿ ಅಸ್ತ ಸ್ಥಿತಿಯಲ್ಲಿದ್ದು ನಾಳೆ ಉದಯವಾಗಲಿದ್ದಾನೆ. 

ನಾಳೆ ಸಂಜೆ 7.17 ಕ್ಕೆ ಶುಕ್ರನು ಕರ್ಕಾಟಕ ರಾಶಿಯಲ್ಲಿ ಉದಯಿಸುತ್ತಾನೆ. ಈ ಅವಧಿಯು ಕೆಲವು ಜನರಿಗೆ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಶುಕ್ರನು ಉದಯವಾಗುತ್ತಿದ್ದಂತೆಯೇ ಕೆಲವು ರಾಶಿಯವರ ಜೀವನದಲ್ಲಿ ಸಂಪತ್ತು, ಐಶ್ವರ್ಯ ಮತ್ತು ಭೌತಿಕ ಸಂತೋಷಗಳು ಹೆಚ್ಚುತ್ತವೆ. ಶುಕ್ರನ ಶುಭ ಪ್ರಭಾವದಿಂದಾಗಿ ವೈವಾಹಿಕ ಸುಖ, ಕೀರ್ತಿ ಪ್ರಾಪ್ತಿಯಾಗುತ್ತದೆ. 

ಇದನ್ನೂ ಓದಿ : ಕುಬೇರನ ಅತಿಯಾದ ಆಶೀರ್ವಾದ ಈ ರಾಶಿಯ ಮೇಲಿರಲಿದೆ: 2025ರವರೆಗೆ ಸಂಪತ್ತಿಗಿರಲ್ಲ ಕೊರತೆ, ಹೆಜ್ಜೆಯಿಟ್ಟಲ್ಲೆಲ್ಲಾ ವಿಜಯವೇ..!

ಮೇಷ ರಾಶಿ : ಮೇಷ ರಾಶಿಯವರ ಜಾತಕದ ನಾಲ್ಕನೇ ಮನೆಯಲ್ಲಿ ಶುಕ್ರನು ಉದಯಿಸುತ್ತಾನೆ. ಈ ರಾಶಿಯವರು ಇಲ್ಲಿಯವರೆಗೆ ಎದುರಿಸುತ್ತಿದ್ದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾರೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳು, ಜೀವನ ಸಂಗಾತಿಯೊಂದಿಗಿನ ಕಲಹ, ವ್ಯಾಪಾರ ವ್ಯವಹಾರದಲ್ಲಿ ಸೋಲು, ಹೀಗೆ ಎಲ್ಲಾ ರೀತಿಯ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಈ ರಾಶಿಯವರ ಜೀವನದಲ್ಲಿ ಕೇವಲ ಸುಖ ಸಮೃದ್ದಿ ನೆಲೆಯಾಗುವುದು. 

ವೃಷಭ ರಾಶಿ : ಶುಕ್ರ ಗ್ರಹವು ವೃಷಭ ರಾಶಿಯ ಮೂರನೇ ಮನೆಯಲ್ಲಿ ಉದಯಿಸುತ್ತಾನೆ. ಉದಯಿಸುತ್ತಿರುವ ಶುಕ್ರನ ಪ್ರಭಾವದಿಂದ, ಜೀವನದ ಅಭಿವೃದ್ಧಿ ಕಾಣುವುದು. ಇಲ್ಲಿಯವರೆಗೆ ಸೋಲಿನಿಂದ ಕಂಗೆಟ್ಟಿದ್ದ ನಿಮ್ಮ ಜೀವನದ ಮುಂದಿನ ಹಾದಿಯಲ್ಲಿ ಗೆಲುವೇ ಇರುವುದು. ಇನ್ನು ಯಾವ ಕೆಲಸವನ್ನು ಬೇಕಾದರೂ ಧೈರ್ಯದಿಂದ ಮುಂದುವರೆಸಿಕೊಂಡು ಹೋಗಬಹುದು. 

ಇದನ್ನೂ ಓದಿ : ಪಿತಾ-ಪುತ್ರರ ಮುಖಾಮುಖಿಯಿಂದ ಅಪಾಯಕಾರಿ ಸಂಸಪ್ತಕ ಯೋಗ ನಿರ್ಮಾಣ: ಈ ರಾಶಿಯವರಿಗೆ ಧನಹಾನಿ

ಕರ್ಕಾಟಕ ರಾಶಿ :  ಕರ್ಕಾಟಕ ರಾಶಿಯವರ,  ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಶುಕ್ರ. ಈಗ ಅದು ಮೊದಲ ಮನೆಯಲ್ಲಿ ಉದಯವಾಗುತ್ತಿದೆ. ಇದು ಅನುಕೂಲಕರ ಫಲಿತಾಂಶಗಳನ್ನೇ ನೀಡಲಿದೆ. ಲಗ್ನ ಮನೆಯಲ್ಲಿ ಶುಕ್ರನ ಉದಯವು ಕರ್ಕಾಟಕ ರಾಶಿಯವರಿಗೆ ತುಂಬಾ ಶುಭವಾಗಲಿದೆ. ನಿಮ್ಮ ದೈಹಿಕ ನೋಟವು ಹೆಚ್ಚು ಆಕರ್ಷಕವಾಗುವ ಸಾಧ್ಯತೆಯಿದೆ.

ಮೀನ ರಾಶಿ : ಘರ್ಷಣೆಗಳು, ಜಗಳ ಇತ್ಯಾದಿಗಳಿಂದ ಪ್ರೇಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಮೀನ ರಾಶಿಯವರಿಗೆ ಈಗ ಪರಿಹಾರ ಸಿಗುವುದು. ಅಂತಿಮವಾಗಿ ಬಯಸಿದ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ರಾಶಿಯ ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು. ಇದು ನಿಮ್ಮ ವೃತ್ತಿಜೀವನದಲ್ಲಿ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News