ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಪೊಲೀಸರಿಂದ ಬಿಗಿಭದ್ರತೆ-ಸಂಚಾರಕ್ಕೆ ಈ ರಸ್ತೆಗಳನ್ನು ಬಳಸಲು ಸೂಚನೆ

PM Narendra Modi Bengaluru Visit: ಚಂದ್ರಯಾನ-3 ಯಶಸ್ವಿ ಉಡಾವಣೆ ಮತ್ತು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಇಸ್ರೋ ತಂಡವನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಳಿಗ್ಗೆ HAL ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

Written by - Bhavishya Shetty | Last Updated : Aug 26, 2023, 07:54 AM IST
    • ಇಸ್ರೋ ತಂಡವನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಳಿಗ್ಗೆ HAL ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ
    • ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಉಂಟಾಗಬಾರದೆಂದು ಬೆಂಗಳೂರು ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ
    • ಈ ಮಾರ್ಗಗಳನ್ನು 9 ಗಂಟೆವರೆಗೆ ಬಳಕೆ ಮಾಡದಿರಲು ಮನವಿ ಮಾಡಲಾಗಿದೆ.
ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಪೊಲೀಸರಿಂದ ಬಿಗಿಭದ್ರತೆ-ಸಂಚಾರಕ್ಕೆ ಈ ರಸ್ತೆಗಳನ್ನು ಬಳಸಲು ಸೂಚನೆ title=
Prime Minister Narendra Modi

PM Narendra Modi Bengaluru Visit: ಗ್ರೀಸ್‌’ನಿಂದ ಹಿಂದಿರುಗಿದ ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಆಗಮಿಸಲಿದ್ದು,  ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಲಿದ್ದಾರೆ. ಚಂದ್ರಯಾನ-3 ಯಶಸ್ವಿ ಉಡಾವಣೆ ಮತ್ತು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಇಸ್ರೋ ತಂಡವನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಳಿಗ್ಗೆ HAL ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಶ್ರಾವಣ ಶನಿವಾರದಂದು ಈ ರಾಶಿಯ ಅದೃಷ್ಟ ಬೆಳಗುವನು ಶನಿಮಹಾತ್ಮ: ಕೈಯಿಟ್ಟಲ್ಲೆಲ್ಲಾ ಯಶಸ್ಸು!

ಈ ಸಂದರ್ಭದಲ್ಲಿ ದಿನನಿತ್ಯದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಉಂಟಾಗಬಾರದೆಂದು ಬೆಂಗಳೂರು ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗ ಬದಲಾವಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಮಾರ್ಗಗಳನ್ನು 9 ಗಂಟೆವರೆಗೆ ಬಳಕೆ ಮಾಡದಿರಲು ಮನವಿ ಮಾಡಲಾಗಿದೆ.

-ಓಲ್ಡ್ ವಿಮಾನ ನಿಲ್ದಾಣ ರಸ್ತೆ

-ಓಲ್ಡ್ ಮದ್ರಾಸ್ ರಸ್ತೆ

-ಎಂ.ಜಿ.ರೋಡ್

-ಕಬ್ಬನ್ ರಸ್ತೆ

-ರಾಜಭವನ ರಸ್ತೆ

-ಬಳ್ಳಾರಿ ರಸ್ತೆ

-ಸಿ.ವಿ.ರಾಮನ್ ರಸ್ತೆ

-ಯಶವಂತಪುರ ಫ್ಲೈ ಓವರ್

-ತುಮಕೂರು ರಸ್ತೆ

-ಮಾಗಡಿ ರಸ್ತೆ

-ಹೊರ ವರ್ತುಲ ರಸ್ತೆ

-ಜಾಲಹಳ್ಳಿ ಅಡ್ಡರಸ್ತೆ

ಈ ರಸ್ತೆಗಳಲ್ಲಿ ಬೆಳಿಗ್ಗೆ 9:30 ರವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ ಬೆಳಗ್ಗೆ 10 ಗಂಟೆಯವರೆಗೆ ಎಲ್ಲಾ ರೀತಿಯ ಭಾರೀ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಏಷ್ಯಾಕಪ್’ಗೆ ಆಯ್ಕೆಯಾಗಿದ್ದ ಇಬ್ಬರು ಆಟಗಾರರಿಗೆ ಕೊರೊನಾ! ರದ್ದಾಗುತ್ತಾ Asia Cup?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News