ವಿವಾದ ಸೃಷ್ಟಿಸಿದ ವೈರಲ್‌ ವಿಡಿಯೋ..ಶಿಕ್ಷಕರ ಆದೇಶದಂತೆ ಅನ್ಯ‌‌ ಕೋಮಿನ ವಿದ್ಯಾರ್ಥಿಯ ಕಪಾಳಕ್ಕೆ ಬಾರಿಸಿದ ವಿದ್ಯಾರ್ಥಿಗಳು!

Viral Video: 2ನೇ ತರಗತಿಯ ಅನ್ಯ‌‌ ಕೋಮಿನ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಶಿಕ್ಷಕಿಯೊಬ್ಬರು ಇತರ ವಿದ್ಯಾರ್ಥಿಗಳಿಗೆ ಹೇಳುವ ವಿಡಿಯೋ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಂಚಲನ ಮೂಡಿಸಿದೆ.   

Written by - Savita M B | Last Updated : Aug 26, 2023, 01:55 PM IST
  • ಶಾಲಾ ಶಿಕ್ಷಕಿಯೊಬ್ಬರು ಅನ್ಯ‌‌ ಕೋಮಿನ ಹುಡುಗನಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿರುವ ಆಕ್ಷೇಪಾರ್ಹ ವಿಡಿಯೋ
  • ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.
  • ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ
ವಿವಾದ ಸೃಷ್ಟಿಸಿದ ವೈರಲ್‌ ವಿಡಿಯೋ..ಶಿಕ್ಷಕರ ಆದೇಶದಂತೆ ಅನ್ಯ‌‌ ಕೋಮಿನ ವಿದ್ಯಾರ್ಥಿಯ ಕಪಾಳಕ್ಕೆ ಬಾರಿಸಿದ ವಿದ್ಯಾರ್ಥಿಗಳು!  title=

Rahul Gandhi on Viral Video : ಶಾಲಾ ಶಿಕ್ಷಕಿಯೊಬ್ಬರು ಅನ್ಯ‌‌ ಕೋಮಿನ ಹುಡುಗನಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿರುವ ಆಕ್ಷೇಪಾರ್ಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. 

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮನ್ಸೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಪ್ಪಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ದ್ರಪತಿ ತ್ಯಾಗಿ ಎಂಬ ಶಿಕ್ಷಕಿ ಆ ಶಾಲೆಯ 2ನೇ ತರಗತಿ ವಿದ್ಯಾರ್ಥಿಗಳಿಗೆ ಅನ್ಯ‌‌ ಕೋಮಿನ ವಿದ್ಯಾರ್ಥಿಯೊಬ್ಬನಿಗೆ ಥಳಿಸಲು ಹೇಳುತ್ತಿರುವುದನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗಿದೆ. 

ಘಟನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ರವಿಶಂಕರ್ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಶಾಲೆಯಲ್ಲಿ ನೀಡಿದ ಹೋಂ ವರ್ಕ್ ಪೂರ್ಣಗೊಳಿಸದ ಕಾರಣಕ್ಕೆ ಮಗುವಿಗೆ ಥಳಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ,’’ ಎಂದಿದ್ದಾರೆ. 

ಇದನ್ನೂ ಓದಿ-Madurai: ಲಕ್ನೋ-ರಾಮೇಶ್ವರಂ ಟೂರಿಸ್ಟ್ ರೈಲಿನಲ್ಲಿ ಬೆಂಕಿ ಅವಘಡ; 9 ಮಂದಿ ಸಾವು!

ವಿದ್ಯಾರ್ಥಿಗಳ ಹೊರತಾಗಿ, ಇಬ್ಬರು ವ್ಯಕ್ತಿಗಳು ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ, ಅವರಲ್ಲಿ ಒಬ್ಬರು ಶಿಕ್ಷಕರಾಗಿದ್ದಾರೆ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲ ಶಿಕ್ಷಣಾಧಿಕಾರಿ ಶುಭಂ ಶುಕ್ಲಾ ತಿಳಿಸಿದ್ದಾರೆ. ಸದ್ಯ ಇಬ್ಬರ ವಿರುದ್ಧ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. 

ಇನ್ನು ಮುಂದುವರೆದು ಮಾತನಾಡಿದ ಶಿಕ್ಷಣಾಧಿಕಾರಿ ಶುಕ್ಲಾ ಅವರು, "ತನಿಖೆ ನಡೆಯುತ್ತಿರುವುದರಿಂದ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ತಂಡವು ಈ ವಿಷಯವನ್ನು ತನಿಖೆ ಮಾಡುತ್ತದೆ ಮತ್ತು ಪೊಲೀಸರು ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ" ಎಂದು ಹೇಳಿದ್ದಾರೆ. 

ಘಟನೆ ಕುರಿತು ಪ್ರತಿಕ್ರಿಯಿಸಿದ ಲೋಕಸಭಾ ಸದಸ್ಯ  ರಾಹುಲ್ ಗಾಂಧಿ , ''ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷಬೀಜ ಬಿತ್ತಿ ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷದ ಮಾರುಕಟ್ಟೆಯನ್ನಾಗಿ ಮಾಡುವುದು - ಇದಕ್ಕಿಂತ ಕೆಟ್ಟದ್ದನ್ನು ಶಿಕ್ಷಕರಿಂದ ಊಹಿಸಲು ಸಾಧ್ಯವಿಲ್ಲ. " 

"ಅಲ್ಲದೇ ಮಕ್ಕಳು ಭಾರತದ ಭವಿಷ್ಯ - ಅವರನ್ನು ದ್ವೇಷಿಸಬೇಡಿ. ನಾವೆಲ್ಲರೂ ಒಗ್ಗೂಡಿ ಅವರಿಗೆ ಪ್ರೀತಿಯನ್ನು ಕಲಿಸಬೇಕು" ಎಂದು ಟ್ವೀಟ್‌ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ-ಇಂದಿನಿಂದ 3 ದಿನ ರಾಜ್ಯದ ಈ ಭಾಗಗಳಲ್ಲಿ ಬಿಡುವಿಲ್ಲದೆ ಸುರಿಯಲಿದೆ ಮಳೆ: ಪ್ರವಾಹ ಭೀತಿ, ಗುಡುಗು-ಸಿಡಿಲಿನ ಅಬ್ಬರ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News