September 2023 Love Horoscope : ಅನೇಕ ಜನರು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದು, ಅದರಿಂದ ತಿಳಿದು ಬರುವ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಾರೆ. ಕೆಲವು ಜನರು ವೈಯಕ್ತಿಕ ಜೀವನದಲ್ಲಿ ಬೆಳವಣಿಗೆಗಳನ್ನು ಊಹಿಸಲು, ಮುಂಬರುವ ಸಮಸ್ಯೆ ತಿಳಿಯಲು, ಇರುವ ಸಮಸ್ಯೆಗೆ ಪರಿಹಾರ ತಿಳಿಯಲು ಜ್ಯೋತಿಷ್ಯದ ಮೊರೆ ಹೋಗುತ್ತಾರೆ.. ಈ ಪೈಕಿ ಪ್ರೇಮಿಗಳೂ ಸಹ ಲವ್ ಚಾತಕದ ಮೊರೆ ಹೋಗಿ ತಮ್ಮ ಪ್ರೇಮ ಜೀವನದ ಬಗ್ಗೆ ತಿಳಿಯುತ್ತಾರೆ. ಸಧ್ಯ ಈ ತಿಂಗಳು 12 ರಾಶಿಚಕ್ರದವರ ಪ್ರೀತಿಯ ಜೀವನ ಹೇಗಿರುತ್ತದೆ..? ಯಾರು ಲವ್ನಲ್ಲಿ ಬೀಳುತ್ತಾರೆ ಅಂತ ತಿಳಿಯೋಣ.
ಮೇಷ : ಸೆಪ್ಟೆಂಬರ್ನಲ್ಲಿ, ಮೇಷ ರಾಶಿಯು ಅವರು ತಮ್ಮ ಹೃದಯದ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುತ್ತದೆ. ಸದಾ ಕರ್ತವ್ಯ ಬದ್ಧರಾಗಿರುವ ಇವರ ಪ್ರೇಮ ಜೀವನ ಸ್ವಲ್ಪಮಟ್ಟಿಗೆ ಉತ್ತಮವಾಗಿರಲಿದೆ. ಅವರು ತಮ್ಮ ಪ್ರೀತಿಪಾತ್ರರನ್ನು ಸಂತೋಷಪಡಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಇದರಿಂದ ಸಂತೋಷದಾಯಕ ಅನುಭವ ಪಡೆಯುತ್ತಾರೆ.
ಇದನ್ನೂ ಓದಿ: ಎಂಥಾ ಸಂಕಷ್ಟದಲ್ಲೂ ಈ ನಕ್ಷತ್ರದಲ್ಲಿ ಜನಿಸಿದವರ ಕೈಬಿಡಲ್ಲ ಪರಮೇಶ್ವರ: ಮೀನಾಮೇಷ ಎಣಿಸದೆ ಸಕಲ ಸಂಪತ್ತು ಕರುಣಿತ್ತಾರೆ ವಿಶ್ವಾಂಭರ
ವೃಷಭ ರಾಶಿ: ಈ ರಾಶಿಯವರು ಸೆಪ್ಟೆಂಬರ್ನಲ್ಲಿ ಲವ್ನಲ್ಲಿ ಬಿಳುವ ಸಾಧ್ಯತೆ ಇದೆ. ಕೆಲವೊಮ್ಮೆ ತಮ್ಮನ್ನು ನಂಬದ ವೃಷಭ ರಾಶಿಯವರು ಈ ತಿಂಗಳು ತಮ್ಮ ಪ್ರೀತಿಪಾತ್ರರ ಮೇಲೆ ನಂಬಿಕೆ ಇಡುತ್ತಾರೆ. ಲವ್ ಲೈಫ್ ಬಗ್ಗೆ ಮುಕ್ತವಾಗಿ ಮಾತನಾಡಿ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿಕೊಳ್ಳುತ್ತಾರೆ.
ಮಿಥುನ ರಾಶಿ : ಈ ತಿಂಗಳು, ಮಿಥುನ ರಾಶಿಯವರು ಜೀವನ ಮತ್ತು ಪ್ರೀತಿಯ ಪಾಠಗಳನ್ನು ಕಲಿಯಲಿದ್ದಾರೆ. ಪ್ರೀತಿಯಲ್ಲಿ ಜಗಳವಾಗುವುದನ್ನು ತಪ್ಪಿಸಲು ಅವರು ಏನು ಬೇಕಾದರೂ ಮಾಡುತ್ತಾರೆ. ಇದು ಅವರ ಪ್ರೀತಿಪಾತ್ರರ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕರ್ಕಾಟಕ ರಾಶಿ : ಸೆಪ್ಟೆಂಬರ್ ತಿಂಗಳು ಕರ್ಕಾಟಕ ರಾಶಿಯವರಿಗೆ ಉಡುಗೊರೆ ಬರುತ್ತವೆ. ಈ ರಾಶಿಚಕ್ರದ ಚಿಹ್ನೆಗಳು ತಮ್ಮ ಗೆಳೆಯ ಅಥವಾ ಗೆಳತಿಗೆ ಭಾವನಾತ್ಮಕವಾಗಿ ಹತ್ತಿರವಾಗುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಈ ನಾಲ್ಕು ರಾಶಿಯವರ ಅದೃಷ್ಟ ಕೈ ಹಿಡಿಯಬೇಕಾದರೆ ಇವರು ಚಿನ್ನದ ಉಂಗುರ ಧರಿಸಲೇ ಬೇಕು
ಸಿಂಹ ರಾಶಿ : ಸೆಪ್ಟೆಂಬರ್ ಸಿಂಹ ರಾಶಿಯವರಿಗೆ ಪ್ರೀತಿಯ ತಿಂಗಳು. ಸಿಂಹ ರಾಶಿಯವರು ತಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಪ್ರೀತಿಯನ್ನು ತೋರಿಸಲು ಮತ್ತು ವಿಶೇಷ ಭಾವನೆ ಮೂಡಿಸಲು ಈ ಪ್ರಯತ್ನಿಸುತ್ತಾರೆ.
ಕನ್ಯಾರಾಶಿ : ಈ ತಿಂಗಳು, ಕನ್ಯಾ ರಾಶಿಯವರು ತಮ್ಮ ಪ್ರೀತಿಪಾತ್ರರ ಜೊತೆ ಕಾಲಕಾಲಕ್ಕೆ ಮನಸ್ತಾಪ ಉಂಟು ಮಾಡಿಕೊಳ್ಳುತ್ತಾರೆ. ಆದರೆ, ಕಾಳಜಿ ವಹಿಸಿಕೊಂಡು ಜಗಳ ಮಾಡದೆ ಸರಿಪಡಿಸಿಕೊಳ್ಳಬೇಕು.
ತುಲಾ ರಾಶಿ : ಎಂದಿನಂತೆ, ತುಲಾ ರಾಶಿಯವರ ಪ್ರೇಮ ಜೀವನವು ಈ ತಿಂಗಳು ಶಾಂತವಾಗಿರುತ್ತದೆ. ಯಾವುದೇ ಅಸಮಾಧಾನವಿದ್ದರೆ, ಜಗಳಗಳನ್ನು ತಪ್ಪಿಸಲು ನಿಮ್ಮ ಪ್ರೀತಿಪಾತ್ರರ ಜೊತೆ ಮಾತನಾಡಿ.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಈ ತಿಂಗಳು ತಮ್ಮ ಹೃದಯ ಹೇಳುವುದನ್ನು ಕೇಳಲಿದ್ದಾರೆ. ಅವರು ತಮ್ಮ ಪ್ರೀತಿಪಾತ್ರರ ಜೊತೆಗೆ ಅವರು ಹಿಂದೆಂದೂ ಯಾರಿಗೂ ಹೇಳದ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಈ ರಾಶಿಯವರ ಸುವರ್ಣ ದಿನಗಳು ಆರಂಭ ! ಸೋಲೆಲ್ಲಾ ಗೆಲುವಾಗುವ ಸಮಯ
ಮಕರ ರಾಶಿ : ಈ ರಾಶಿಯವರು ಈ ತಿಂಗಳು ತಮ್ಮ ಪ್ರೇಮ ಜೀವನದಲ್ಲಿ ಪ್ರಾಯೋಗಿಕ ವಿಧಾನಗಳನ್ನು ಅನುಸರಿಸುತ್ತಾರೆ. ತಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಜೀವನದಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಾರೆ.
ಕುಂಭ ರಾಶಿ : ಈ ತಿಂಗಳು ತಮ್ಮ ಪ್ರೀತಿಪಾತ್ರರ ಬಗ್ಗೆ ತಿಳಿದುಕೊಳ್ಳುವ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಭೌತಿಕತೆಯನ್ನು ಮೀರಿ, ಅವರು ತಮ್ಮ ಗೆಳೆಯ/ಗೆಳತಿಯೊಂದಿಗೆ ಭಾವನಾತ್ಮಕ ಬಂಧವನ್ನು ಸೃಷ್ಟಿಸಲು ಬಯಸುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ತಮ್ಮ ಆತ್ಮೀಯರೊಂದಿಗೆ ಚರ್ಚಿಸಲಿದ್ದಾರೆ.
ಮೀನ ರಾಶಿ : ಈ ರಾಶಿಯವರು ಇತರರನ್ನು ಅರ್ಥಮಾಡಿಕೊಳ್ಳುವಲ್ಲಿ ಉತ್ತಮರು. ತಮ್ಮ ಪ್ರೀತಿಪಾತ್ರರನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಪ್ರೇಮ ಜೀವನಕ್ಕೆ ಆದ್ಯತೆ ನೀಡುತ್ತಾರೆ. ಕೆಲವು ಕಷ್ಟದ ಕ್ಷಣಗಳು ಬಂದರೂ ಅದನ್ನು ಬದಿಗೊತ್ತಿ ಶುದ್ಧ ಪ್ರೀತಿಯಲ್ಲಿ ಮಾತ್ರ ಪ್ರೀತಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.