ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರಿಗೆ ಆಫರದ ಆಫರ್ ಸಿಗ್ತಾನೆ ಇದೆ. ಒಂದು ಕಡೆ ಫ್ರೀ ಬಸ್, ಮತ್ತೊಂದು ಕಡೆ ಅನ್ನ ಭಾಗ್ಯದ ದುಡ್ಡು, ಮಗದೊಂದು ಕಡೆ ಗೃಹಲಕ್ಷ್ಮಿ ದುಡ್ಡು. ಹೀಗೆ ಹತ್ತಾರು ಯೋಜನೆಗಳ ನಡುವೆ ಇದೀಗ ಮತ್ತೊಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಮಹಿಳಾ ಪ್ರಯಾಣಿಕರ ಹಿತ ದೃಷ್ಟಿಯಿಂದ ಖಾಸಗೀ ಬಸ್ ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರ್ಯಾಕ್ ಸಿಸ್ಟಂ ಅಳವಡಿಕೆಗೆ ಸಾರಿಗೆ ಇಲಾಖೆ ಮುಂದಾಗಿದೆ.
ನಿರ್ಭಯ ಯೋಜನೆಯಡಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದ್ದು, ಈಗಾಗಲೇ ಸಾರಿಗೆ ಇಲಾಖೆಯಿಂದ ಸುತ್ತೋಲೆಯನ್ನ ಹೊರಡಿಸಿದೆ. ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣ ಹಿನ್ನೆಲೆ ದೇಶದಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಜಿಪಿಎಸ್ ಟ್ರ್ಯಾಕ್ ಮತ್ತು ಪ್ಯಾನಿಕ್ ಬಟನ್ ನ್ನ ಅಳವಡಿಸಲಾಗಿದೆ. ಇದೀಗ ಖಾಸಗೀ ಬಸ್ ಗಳಲ್ಲಿ ಈ ಸಿಸ್ಟಮ್ ಅಳವಡಿಕೆ ಮಾಡಲು ಎಲ್ಲಾ ರೀತಿಯ ಸಿದ್ದತೆ ನಡೆಸಲಾಗ್ತಿದೆ.
ಇದನ್ನೂ ಓದಿ: ಬಿಜೆಪಿಯವರು ಆಪ್ರೇಷನ್ ಕಮಲ ಡಾಕ್ಟರೇಟ್ ತೆಗೆದುಕೊಂಡಿದ್ದಾರೆ
ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರ್ಯಾಕ್ ಹೇಗೆ ಕಾರ್ಯ ನಿರ್ವಹಿಸುತ್ತೆ;
ಮಹಿಳಾ ಪ್ರಯಾಣಿಕರು ಬಸ್ ಗಳಲ್ಲಿ ಸಂಚಾರ ಮಾಡುವ ವೇಳೆ ತೊಂದರೆ ಆದ್ರೆ ಕೂಡಲೇ ಪ್ಯಾನಿಕ್ ಬಟನ್ ನ್ನು ಪ್ರೆಸ್ ಮಾಡಬಹುದು. ಪ್ರೆಸ್ ಮಾಡುತ್ತಿದ್ದಂತೆ ಅದು ಬಸ್ ನ ಚಾಲಕನಿಗೆ ಮೆಸೆಜ್ ಹೋಗಲಿದೆ. ಬಳಿಕ ಚಾಲಕ ಜಾಗುಕರನಾಗಿ ತೊಂದರೆಯಲ್ಲಿರುವ ಮಹಿಳೆಯನ್ನ ರಕ್ಷಣೆ ಮಾಡಬಹುದು.
ಇನ್ನುಳಿದಂತೆ ಜಿಪಿಎಸ್ ಟ್ರ್ಯಾಕ್ ಅಳವಡಿಕೆ ಮಾಡೋದ್ರಿಂದ ಬಸ್ ಎಲ್ಲೆಲ್ಲಿ ಸಂಚಾರ ಮಾಡಲಾಗ್ತಿದೆ. ಯಾವ ಮಾರ್ಗದಲ್ಲಿ ಬಸ್ ಓಡುತ್ತಿದೆ ಎಂಬ ಎಲ್ಲಾ ಮಾಹಿತಿ ಜಿಪಿಎಸ್ ಮೂಲಕ ಸಾರಿಗೆ ಇಲಾಖೆ ಕಂಟ್ರೋಲ್ ರೂಂ ಗೆ ಹೋಗಲಿದೆ. ಈ ಮೂಲಕ ಬಸ್ ನಲ್ಲಿ ಏನೇ ಸಮಸ್ಯೆ ಆದ್ರೂ ಜಿಪಿಎಸ್ ಟ್ರ್ಯಾಕರ್ ಮೂಲಕ ಆರ್ ಟಿ ಓ ಗೆ ರವಾನೆ ಆಗಲಿದೆ.
ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಗೃಹಿಣಿ ಬಲಿ, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ!
ಖಾಸಗೀ ಬಸ್ ಮಾಲೀಕರಿಂದ ಅಸಮಧಾನ;
ಖಾಸಗೀ ಬಸ್ ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರ್ಯಾಕ್ ಅಳವಡಿಕೆಗೆ ಮಾಲೀಕರ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾರಿಗೆ ಇಲಾಖೆಯ ಸುತ್ತೋಲೆಗೆ ಖಾಸಗೀ ಬಸ್ ಗಳ ಮಾಲೀಕರಿಂದ ಖಂಡನೆ ವ್ಯಕ್ತವಾಗ್ತಿದೆ. ಯಾಕಂದ್ರೆ ಪ್ಯಾನಿಕ್ ಬಟನ್, ಜಿಪಿಎಸ್ ಟ್ರ್ಯಾಕ್ ಸಿಸ್ಟಮ್ ಸೇರಿ ಇನ್ನಿತರ ಪರಿಕರುಗಳು ಬಸ್ ಮಾಲೀಕರೇ ಭರಿಸಬೇಕು ಎಂದು ಸಾರಿಗೆ ಇಲಾಖೆ ಹೇಳಿದ್ದು, ಅಸಮಧಾನಕ್ಕೆ ಕಾರಣವಾಗಿದೆ. ಅಲ್ಲದೇ ಅವಶ್ಯಕತೆ ಇರುವ ಬಸ್ ಗಳಿಗೆ ಮಾತ್ರ ಪ್ಯಾನಿಕ್ ಮತ್ತು ಜಿಪಿಎಸ್ ಸಿಸ್ಟಮ್ ತನ್ನಿ ಎಂದು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.