Coffee-Green Tea: ನಮ್ಮಲ್ಲಿ ಹೆಚ್ಚಿನವರು ತೂಕ ಇಳಿಕೆ ದೃಷ್ಟಿಯಿಂದ ಗ್ರೀನ್ ಟೀ ಸೇವಿಸುತ್ತಾರೆ. ಇನ್ನೂ ಕೆಲವರಿಗೆ ಕಾಫಿ ಕುಡಿಯದೇ ಬೇರೆ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ.ಆದರೆ, ಬಿಪಿ ಇರುವವರು ಕಾಫಿ ಇಲ್ಲವೇ ಗ್ರೀನ್ ಟೀ ಸೇವಿಸುವುದು ಎಷ್ಟು ಒಳ್ಳೆಯದು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ...! ಸಾಮಾನ್ಯವಾಗಿ, ಹೆಚ್ಚಿನ ರಕ್ತದೊತ್ತಡ ಎಂದರೆ ಹೈ ಬಿಪಿ ಇರುವವರಿಗೆ ಕೆಫಿನ್ ಸೇವನೆ ಒಳ್ಳೆಯದಲ್ಲ. ಆದರೆ, ಕಾಫಿ ಹಾಗೂ ಗ್ರೀನ್ ಟೀ ಎರಡರಲ್ಲೂ ಕೆಫಿನ್ ಅಂಶವಿದ್ದು, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಎಂತಹವರಿಗೆ ಈ ಡ್ರಿಂಕ್ಸ್ ಅಪಾಯಕಾರಿ ಆಗಿದೆ. ಸಂಶೋಧನೆ ಏನು ಹೇಳುತ್ತದೆ?
ಜರ್ನಲ್ ಆಫ್ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಾಫಿ ಕುಡಿಯುವ ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಹೃದಯಾಘಾತದಿಂದ ಸಾವಿನ ಅಪಾಯ ತುಂಬಾ ಅಧಿಕವಾಗಿರುತ್ತದೆ. ಆದರೆ ಬಿಪಿ ಸಾಮಾನ್ಯವಾಗಿರುವವರು ಕಾಫಿ ಕುಡಿಯುವುದರಿಂದ ಅಷ್ಟಾಗಿ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಅಷ್ಟೇ ಅಲ್ಲ, ಬಿಪಿ ರೋಗಿಗಳಾಗಿದ್ದರೂ ಸಹ ದಿನಕ್ಕೆ ಒಂದು ಬಾರಿಯಷ್ಟೇ ಕಾಫಿ ಅಥವಾ ಗ್ರೀನ್ ಟೀ ಕುಡಿಯುವ ಬಿಪಿ ರೋಗಿಗಳಲ್ಲೂ ಕೂಡ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಕಡಿಮೆ ಎಂದು ಸಂಶೋಧಕರು ತಮ್ಮ ಅಧ್ಯಯನದಲ್ಲಿ ಪತ್ತೆ ಹಚ್ಚಿದ್ದಾರೆ.
ಸುಮಾರು 19 ವರ್ಷಗಳ ಕಾಲ ನಡೆದ ಈ ಅಧ್ಯಯನದಲ್ಲಿ ಆರಂಭಿಕ ಅವಧಿಯಲ್ಲಿ, 40 ರಿಂದ 79 ವರ್ಷ ವಯಸ್ಸಿನ 6570 ಕ್ಕೂ ಹೆಚ್ಚು ಪುರುಷರು ಮತ್ತು 12,000 ಮಹಿಳೆಯರನ್ನು ಅಧ್ಯಯನ ಮಾಡಲಾಗಿದ್ದು ಇದರಿಂದ ಈ ಮೇಲಿನ ಫಲಿತಾಂಶವನ್ನು ಕಂಡು ಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದು ಒಳ್ಳೆಯದಾ... ಕೆಟ್ಟದ್ದಾ?
ಹೈ ಬಿಪಿ ರೋಗಿಗಳಿಗೆ ಒಳ್ಳೆಯದಲ್ಲ ಕಾಫಿ:
ಒಂದು ಕಪ್ ಕಾಫಿ ಕುಡಿಯುವುದರಿಂದ ಸರಿಸುಮಾರು 80 ರಿಂದ 90 ಮಿಗ್ರಾಂನಷ್ಟು ಕೆಫಿನ್ ಸಿಗುತ್ತದೆ. ಹಾಗಾಗಿ, ಹೈ ಬಿಪಿ ರೋಗಿಗಳಿಗೆ ಕಾಫಿ ಒಳ್ಳೆಯದಲ್ಲ. ಹೈ ಬಿಪಿ ರೋಗಿಗಳು ನಿತ್ಯ ಒಂದು ಕಪ್ ಕಾಫಿ ಕುಡಿದರೂ ಕೂಡ ಅವರಲ್ಲಿ ಹೃದಯ ಕಾಯಿಲೆಗಳ ಅಪಾಯ ಹೆಚ್ಚು ಎಂದು ಸಂಶೋಧನೆ ಬಹಿರಂಗಪಡಿಸಿದೆ.
ಬಿಪಿ ಇರುವವರು ಗ್ರೀನ್ ಟೀ ಕುಡಿಯಬಹುದೇ?
ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಪಾನೀಯ ಎಂತಲೇ ಹೆಸರುವಾಸಿ ಆಗಿರುವ ಗ್ರೀನ್ ಟೀಯಲ್ಲಿಯೂ ಕೆಫಿನ್ ಅಂಶ ಕಂಡು ಬರುತ್ತದೆ. ಆದರೆ, ಅದರ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಇದು ಹೃದಯ ಬಡಿತ, ಚಯಾಪಚಯವನ್ನು ಅಪಾಯಕಾರಿ ಮಟ್ಟಕ್ಕೆ ಹೆಚ್ಚಿಸುವುದಿಲ್ಲ ಎಂದು ತಿಳಿದುಬಂದಿದೆ. ಆದಾರೂ, ಬಿಪಿ ಇರುವವರು ನಿಮ್ಮ ವೈದ್ಯರ ಸಲಹೆ ಮೇರೆಗಷ್ಟೇ ಗ್ರೀನ್ ಟೀ ಕುಡಿಯಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ- ಅಲೋವೆರಾ ಜ್ಯೂಸ್ ಸೇವನೆಯಿಂದ ಆರೋಗ್ಯಕ್ಕಿದೆ 5 ಅದ್ಭುತ ಪ್ರಯೋಜನಗಳು
ಆರೋಗ್ಯವಂತ ವಯಸ್ಕರ ಬಿಪಿ ಎಷ್ಟಿರಬೇಕು?
ಆರೋಗ್ಯವಂತ ವಯಸ್ಕರ ರಕ್ತದೊತ್ತಡವು 90/60 mm Hg ನಿಂದ 120/80 mm Hg ನಡುವೆ ಇರಬೇಕು.
ಬಿಪಿ ಹೆಚ್ಚಾದರೆ ಏನಾಗುತ್ತದೆ?
ಬಿಪಿ ಅಧಿಕವಾದರೆ ಇದು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಹೃದಯ ಕಾಯಿಲೆಗಳ ಅಪಾಯವು ಹೆಚ್ಚು. ಆದಾಗ್ಯೂ, ಪ್ರತಿ ದಿನ ಕೇವಲ ಒಂದೇ ಒಂದು ಕಪ್ ಕಾಫಿ ಅಥವಾ ಗ್ರೀನ್ ಟೀ ಕುಡಿಯುವುದರಿಂದ ಯಾವುದೇ ರೀತಿಯ ಅಪಾಯವಿಲ್ಲ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.