ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದು ಒಳ್ಳೆಯದಾ... ಕೆಟ್ಟದ್ದಾ?

Eating papaya on empty stomach : ದೈಹಿಕ ಆರೋಗ್ಯಕ್ಕಾಗಿ ಜನರು ವಿವಿಧ ಆರೋಗ್ಯಕರ ಅಭ್ಯಾಸಗಳನ್ನು ಕೈಗೊಳ್ಳುತ್ತಾರೆ. ಅದರಲ್ಲಿ ಪಪ್ಪಾಯಿ ವರ್ಷವಿಡೀ ಕಡಿಮೆ ಬೆಲೆಯಲ್ಲಿ ದೊರೆಯುವ ಅದ್ಭುತ ಹಣ್ಣಾದ ಪಪ್ಪಾಯಿಯನ್ನು ಸೇವಿಸುತ್ತಾರೆ. ಆದರೆ ಕೆಲವರು ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ. ಹಾಗಾದರೆ ಇದು ಒಳ್ಳೆಯದಾ...ಕೆಟ್ಟದ್ದಾ..? ಎನ್ನುವುದನ್ನು ತಿಳಿದುಕೊಳ್ಳೋಣ. 

Written by - Savita M B | Last Updated : Sep 8, 2023, 01:39 PM IST
  • ಪಪ್ಪಾಯಿ ಆರೋಗ್ಯಕರ ಹಣ್ಣಾದರೂ ಅದನ್ನು ಮಿತವಾಗಿ ಸೇವಿಸಬೇಕು.
  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಸೇವಿಸಿದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
  • ಹೌದು ಪಪ್ಪಾಯಿಯು ಕೆಲವರಲ್ಲಿ ಅಡ್ಡ ಪರಿಣಾಮಗಳನ್ನು ಬೀರಬಹುದು.
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದು ಒಳ್ಳೆಯದಾ... ಕೆಟ್ಟದ್ದಾ? title=

Eating papaya : ಪಪ್ಪಾಯಿ ಆರೋಗ್ಯಕರ ಹಣ್ಣಾದರೂ ಅದನ್ನು ಮಿತವಾಗಿ ಸೇವಿಸಬೇಕು. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಸೇವಿಸಿದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈ  ಪಪ್ಪಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮತ್ತು ಕಡಿಮೆ ಕ್ಯಾಲೋರಿ ಕೊಬ್ಬು ಇರುವುದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಅದ್ಭುತವಾದ ಹಣ್ಣು.

ಆದರೆ ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹೌದು ಪಪ್ಪಾಯಿಯು ಕೆಲವರಲ್ಲಿ ಅಡ್ಡ ಪರಿಣಾಮಗಳನ್ನು ಬೀರಬಹುದು. ಪೋಷಕಾಂಶಗಳಿಂದ ಕೂಡಿರುವ ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ತಿಂದರೆ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ

ಉಸಿರಾಟದ ತೊಂದರೆ
ಹೆಚ್ಚು ಹಣ್ಣಾದ ಪಪ್ಪಾಯಿಯನ್ನು ಪ್ರತಿದಿನ ಬೆಳಗ್ಗೆ ತಿನ್ನಬಾರದು. ಏಕೆಂದರೆ ಪಪ್ಪಾಯಿಯಲ್ಲಿರುವ ಪಪೈನ್ ಕಿಣ್ವ ಉಸಿರಾಟದಲ್ಲಿ ಅಲರ್ಜಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಉಸಿರಾಟದ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಉಸಿರಾಟದ ತೊಂದರೆ ಮತ್ತು ಎದೆಯ ಬಿಗಿತದಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಕಿಡ್ನಿ ಸ್ಟೋನ್
ಚಿಕ್ಕ ಪಪ್ಪಾಯಿಯಲ್ಲಿ 96 ಮಿಲಿಗ್ರಾಂ ವಿಟಮಿನ್ ಸಿ ಇರುತ್ತದೆ. ಹಾಗಾಗಿ ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ಸೇವಿಸಿದಾಗ ಅದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ.‌

ಇದನ್ನೂ ಓದಿ-Home remedies for Constipation: ಮಲಬದ್ಧತೆ ನಿವಾರಣೆಗೆ ಅದ್ಭುತ ಮನೆಮದ್ದುಗಳು

ಜೀರ್ಣಕ್ರಿಯೆಯ ಮೇಲೆ ಪರಿಣಾಮ 
ಸಾಮಾನ್ಯವಾಗಿ ಹೆಚ್ಚು ಪಪ್ಪಾಯಿಯನ್ನು ಸೇವಿಸುವುದರಿಂದ ಜೀರ್ಣಾಂಗವ್ಯೂಹದ ಕಾರ್ಯನಿರ್ವಹಣೆಯಲ್ಲಿ ಅಡ್ಡಿಯಾಗಬಹುದು. ಒಂದು ವೇಳೆ ಸೇವಿಸಿದರೆ ಎಷ್ಟು ಸೇವಿಸಬೇಕು ಎಂದು ತಿಳಿದು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇಲ್ಲದಿದ್ದರೆ ಇದು ಜೀರ್ಣಾಂಗವ್ಯೂಹದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಹೊಟ್ಟೆ ಸೆಳೆತ ಮತ್ತು ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಹಾಲುಣಿಸುವ ಮಹಿಳೆಯರಿಗೆ ಒಳ್ಳೆಯದಲ್ಲ 
ಪಪ್ಪಾಯಿ ಹಣ್ಣಿನಲ್ಲಿರುವ ಕಿಣ್ವಗಳು ಮಕ್ಕಳಿಗೆ ಒಳ್ಳೆಯದಲ್ಲ. ಇದು ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಹಾಲುಣಿಸುವ ಮಹಿಳೆಯರು ಪಪ್ಪಾಯಿ ತಿನ್ನುವಾಗ ಎಚ್ಚರಿಕೆ ವಹಿಸಬೇಕು. ವೈದ್ಯರನ್ನು ಸಂಪರ್ಕಿಸಿದ ನಂತರವೇ ಇದನ್ನು ಸೇವಿಸಬೇಕು.

ಚರ್ಮದ ತುರಿಕೆ
ಪಪ್ಪಾಯಿ ತಿನ್ನುವುದರಿಂದ ನಿಮ್ಮ ತ್ವಚೆಯು ಹೊಳೆಯುತ್ತದೆ. ಆದರೆ ಅದೇ ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸೇವಿಸಿದರೆ ಅದು ತ್ವಚೆಯ ಮೇಲೆ ಒಳ್ಳೆಯ ಪರಿಣಾಮ ಬೀರುವುದಿಲ್ಲ. ಏಕೆಂದರೆ ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವ ಮತ್ತು ಆ್ಯಂಟಿಆಕ್ಸಿಡೆಂಟ್ ಎಲ್ಲಾ ರೀತಿಯ ಚರ್ಮಕ್ಕೆ ಸೂಕ್ತವಲ್ಲ. 

ಇದನ್ನೂ ಓದಿ-ಡೈ, ಹೇರ್ ಕಲರ್, ದುಬಾರಿ ಪ್ರಾಡಕ್ಟ್ ಬೇಡವೇ ಬೇಡ ! ಹಿತ್ತಲಲ್ಲೇ ಬೆಳೆಯುವ ಈ ಎಲೆ ನೀಡುವುದು ಬಿಳಿ ಕೂದಲಿಗೆ ಶಾಶ್ವತ ಪರಿಹಾರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News