ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದ Vodafone: 229 ರೂ.ಗೆ ಸಿಗುತ್ತೆ ಅಮೋಘ ಕೊಡುಗೆ!

229 ರೂ. ನ ಯೋಜನೆ ಜಾರಿಗೆ ತಂದಿದ್ದು, ಇದರ ಮಾನ್ಯತೆಯು 28 ದಿನಗಳು. ಇದರಲ್ಲಿ, ಬಳಕೆದಾರರು ದಿನಕ್ಕೆ 2 ಜಿಬಿ 4G/3G ಡೇಟಾವನ್ನು ಪಡೆಯುತ್ತಾರೆ.

Last Updated : Jun 4, 2019, 01:04 PM IST
ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದ Vodafone: 229 ರೂ.ಗೆ ಸಿಗುತ್ತೆ ಅಮೋಘ ಕೊಡುಗೆ! title=

ನವದೆಹಲಿ: ಟೆಲಿಕಾಂ ವಲಯದಲ್ಲಿ ಮಹತ್ತರವಾದ ಸ್ಪರ್ಧೆ ಇದ್ದೇ ಇದೆ. ಮಾರುಕಟ್ಟೆಗೆ ಜಿಯೋ ಕಾಲಿಟ್ಟಾಗಿನಿಂದ ಎಲ್ಲಾ ಟೆಲಿಕಾಂ ಕಂಪನಿಗಳು ನಿರಂತರವಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಲೇ ಇವೆ.  ಅದೇ ರೀತಿಯಲ್ಲಿ ವೊಡಾಫೋನ್ ಕೂಡ ತನ್ನ ಪ್ರೀ-ಪೇಡ್ ಗ್ರಾಹಕರಿಗಾಗಿ ಬಂಪರ್ ಯೋಜನೆಯನ್ನು ಪ್ರಾರಂಭಿಸಿದೆ. 

ಹೌದು, ವೊಡಾಫೋನ್ ತನ್ನ ಗ್ರಾಹಕರಿಗಾಗಿ 229 ರೂ. ನ ಯೋಜನೆ ಜಾರಿಗೆ ತಂದಿದ್ದು, ಇದರ ಮಾನ್ಯತೆಯು 28 ದಿನಗಳು. ಇದರಲ್ಲಿ, ಬಳಕೆದಾರರು ದಿನಕ್ಕೆ 2 ಜಿಬಿ 4G/3G ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ 28 ದಿನಗಳವರೆಗೆ ಸ್ಥಳೀಯ, ಎಸ್‌ಟಿಡಿ ಅನಿಯಮಿತ ಕರೆಗಳನ್ನು ಹಾಗೂ ದೈನಂದಿನ 100 ಉಚಿತ ಎಸ್ಎಂಎಸ್ ಸೌಲಭ್ಯವನ್ನು ಪಡೆಯಲಿದ್ದಾರೆ.

ಇದಲ್ಲದೆ, ವೊಡಾಫೋನ್ ಪ್ಲೇ ಸ್ಟೋರ್ ಲೈವ್ ಟಿವಿ, ಚಲನಚಿತ್ರಕ್ಕಾಗಿ 28 ದಿನಗಳ ಲಾಭವನ್ನು ಪಡೆಯಬಹುದು. ವೊಡಾಫೋನ್ ಪ್ಲೇ ಅಪ್ಲಿಕೇಶನ್ ಡೌನ್ಲೋಡ್ ಮಾಡಲು, ಪ್ಲೇ ಮತ್ತು 199 ಗೆ ಕಳುಹಿಸಿ.

ಅಷ್ಟೇ ಅಲ್ಲದೆ ವೊಡಾಫೋನ್ 199 ರೂಪಾಯಿಗಳ ಯೋಜನೆಯನ್ನು ಕೂಡಾ ತಂದಿದೆ. ಮೇಲಿನ ಎಲ್ಲಾ ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿದೆ. ಆದರೆ 1.5 GB ಯಷ್ಟು ಡೇಟಾ ಮಾತ್ರ ಲಭ್ಯವಿದೆ. ಅಲ್ಲದೆ, MyVodafone App ಮೂಲಕ 199 ರೂಪಾಯಿಗಳ ರೀಚಾರ್ಜ್ ಮಾಡಿ 100% ಕ್ಯಾಶ್ಬ್ಯಾಕ್ ಪಡೆಯಬಹುದು.
 

Trending News