Disadvantages Of Tender Coconut: ಎಳನೀರು ಉತ್ತಮ ಶಕ್ತಿ ವರ್ಧಕ. ಹಾಗಾಗಿಯೇ, ಅನಾರೋಗ್ಯ ಸಮಯದಲ್ಲಿ ಎಳನೀರು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ, ನಾಣ್ಯಕ್ಕೆ ಎರಡು ಮುಖಗಳಿರುವಂತೆ ಎಳನೀರಿನಲ್ಲಿ ಒಳ್ಳೆಯದ ಅಂಶಗಳ ಜೊತೆಗೆ ಕೆಲವು ಕೆಟ್ಟ ಅಂಶಗಳು ಇವೇ. ಉತ್ತಮ ಆರೋಗ್ಯಕ್ಕೆ ಎಳನೀರು ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಎಳೆನೀರು ಸೇವನೆಯಿಂದ ಸಮಸ್ಯೆ ಉಲ್ಬಣಿಸಬಹುದು ಎಂದು ಹೇಳಲಾಗುತ್ತದೆ.
ಹೌದು, ಆರೋಗ್ಯ ತಜ್ಞರ ಪ್ರಕಾರ, ಎಳನೀರಿನಿಂದ ಅನುಕೂಲತೆಗಳ ಜೊತೆಗೆ ಅನಾನುಕೂಲತೆಯೂ ಇದೆ. ಹಾಗಿದ್ದರೆ, ಎಳನೀರಿನಿಂದ ಉಂಟಾಗುವ 10 ಅನಾನುಕೂಲಗಳು ಯಾವುವು. ಯಾವ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಎಳನೀರು ಒಳ್ಳೆಯದಲ್ಲ ಎಂದು ತಿಳಿಯೋಣ...
ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಎಳನೀರು ಕುಡಿಯಲೇಬಾರದು:
* ಅತಿಸಾರ:
ಎಳನೀರು ಜೀರ್ಣಾಂಗ ವ್ಯವಸ್ಥೆಯ ಮೇಲೆ ವಿರೇಚಕ ಪರಿಣಾಮವನ್ನು ಉಂಟು ಮಾಡಬಹುದು. ಹಾಗಾಗಿ, ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಎಳನೀರು ಸೇವನೆಯನ್ನು ತಪ್ಪಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Home remedies for Constipation: ಮಲಬದ್ಧತೆ ನಿವಾರಣೆಗೆ ಅದ್ಭುತ ಮನೆಮದ್ದುಗಳು
* ವ್ಯಾಯಾಮದ ಬಳಿಕ ಎಳನೀರು ಕುಡಿಯಬೇಡಿ:
ನಮ್ಮಲ್ಲಿ ಕೆಲವರು ವಾಕಿಂಗ್, ವ್ಯಾಯಾಮದ ಬಳಿಕ ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ. ಆದರೆ, ತಾಲೀಮು ಮುಗಿದ ನಂತರ ಎಳನೀರಿನ ಬದಲಿಗೆ ಸರಳವಾದ ಪಾನೀಯ ಉತ್ತಮವಾಗಿದೆ.
* ಅಲರ್ಜಿ:
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಲರ್ಜಿ ಸಮಸ್ಯೆ ಇರುತ್ತದೆ. ಮರದ ಕಾಯಿ ಅಲರ್ಜಿ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಎಳನೀರನ್ನು ಕುಡಿಯಬಾರದು.
* ಮೂತ್ರವರ್ಧಕ:
ಎಳನೀರಿನ ಮೂತ್ರವರ್ಧಕವಾಗಿದೆ. ಹಾಗಾಗಿ, ಇದರ ಅತಿಯಾದ ಸೇವನೆಯು ನಿಮ್ಮ ಲಿವರ್ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
* ಎಲೆಕ್ಟ್ರೋಲೈಟ್:
ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಅಂಶವೂ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ, ಅತಿಯಾಗಿ ಎಳನೀರಿನ ಸೇವನೆಯನ್ನು ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ.
* ಹೈ ಶುಗರ್:
ಮಧುಮೇಹಿಗಳಿಗೆ ಎಳನೀರು ಒಳ್ಳೆಯದಲ್ಲ. ಅದರಲ್ಲೂ ನೀವು ಹೈ ಶುಗರ್ ಸಮಸ್ಯೆ ಹೊಂದಿದ್ದರೆ ಯಾವುದೇ ಕಾರಣಕ್ಕೂ ಎಳನೀರನ್ನು ಸೇವಿಸಲೇಬಾರದು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
* ಲೋ ಬಿಪಿ:
ಇನ್ನೂ ಲೋ ಬಿಪಿ ಸಮಸ್ಯೆ ಇರುವವರು ಸಹ ಎಳನೀರನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ವಾಸ್ತವವಾಗಿ ಎಳನೀರಿನ ಸೇವನೆಯಿಂದ ರಕ್ತದೊತ್ತಡ ಕಡಿಮೆ ಆಗುವುದರಿಂದ ಲೋ ಬಿಪಿ ಇರುವವರು ಇದರಿಂದ ದೂರ ಉಳಿಯಿರಿ.
ಇದನ್ನೂ ಓದಿ- ಡೈ, ಹೇರ್ ಕಲರ್, ದುಬಾರಿ ಪ್ರಾಡಕ್ಟ್ ಬೇಡವೇ ಬೇಡ ! ಹಿತ್ತಲಲ್ಲೇ ಬೆಳೆಯುವ ಈ ಎಲೆ ನೀಡುವುದು ಬಿಳಿ ಕೂದಲಿಗೆ ಶಾಶ್ವತ ಪರಿಹಾರ
* ಮೂತ್ರಪಿಂಡದ ಕಾಯಿಲೆ :
ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಎಳನೀರು ಉತ್ತಮವಲ್ಲ ಎಂದು ಹೇಳಲಾಗುತ್ತದೆ.
* ಪಾರ್ಶ್ವವಾಯು:
ಎಳನೀರನ್ನು ಅತಿಯಾಗಿ ಸೇವಿಸುವುದರಿಂದ ವಯಸ್ಸಾದ ರೋಗಿಯಲ್ಲಿ ತೀವ್ರವಾದ ಮಂದವಾದ ಪಾರ್ಶ್ವವಾಯು ಉಂಟಾಗುತ್ತದೆ ಎಂದು ವರದಿಯೊಂದರಿಂದ ಬಹಿರಂಗಗೊಂಡಿದೆ.
* ಮಾರಣಾಂತಿಕ 3-ನೈಟ್ರೊಪ್ರೊಪಿಯೊನಿಕ್:
ಎಳನೀರು ಆರ್ಥ್ರಿನಿಯಮ್ ಸ್ಯಾಕರಿಕೋಲಾ ಎಂಬ ಶಿಲೀಂಧ್ರದಿಂದ ಕಲುಷಿತವಾಗಬಹುದು. ಇದು ಕೆಲವೊಮ್ಮೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.