ಏಷ್ಯಾಕಪ್’ ಮೂಲಕ ಏಕದಿನಕ್ಕೆ ಪಾದಾರ್ಪಣೆ ಮಾಡಲಿರುವ 22ರ ಹರೆಯದ ವೇಗಿ: ಈತ ಪಾಕ್ ಆಕ್ರಮಿತ ಕಾಶ್ಮೀರದ ಕ್ರಿಕೆಟಿಗ

PAK vs SL Playing XI: ಪಾಕ್ ಆಕ್ರಮಿತ ಕಾಶ್ಮೀರ ಮೂಲದ ಕ್ರಿಕೆಟಿಗ ಜಮಾನ್ ಖಾನ್ ಅವರು ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪರ ಏಕದಿನ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

Written by - Bhavishya Shetty | Last Updated : Sep 14, 2023, 07:34 AM IST
    • ಏಷ್ಯಾ ಕಪ್ 2023ರಲ್ಲಿ ಮುಂದಿನ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ
    • ಪಾಕ್ ಆಕ್ರಮಿತ ಕಾಶ್ಮೀರ ಮೂಲದ ಕ್ರಿಕೆಟಿಗ ಜಮಾನ್ ಖಾನ್ ಪಾದಾರ್ಪಣೆ ಮಾಡಲು ಸಿದ್ಧ
    • ಈ ಮಹತ್ವದ ಪಂದ್ಯಕ್ಕಾಗಿ ಪಾಕಿಸ್ತಾನ ತನ್ನ ಪ್ಲೇಯಿಂಗ್ 11 ಘೋಷಣೆ
ಏಷ್ಯಾಕಪ್’ ಮೂಲಕ ಏಕದಿನಕ್ಕೆ ಪಾದಾರ್ಪಣೆ ಮಾಡಲಿರುವ 22ರ ಹರೆಯದ ವೇಗಿ: ಈತ ಪಾಕ್ ಆಕ್ರಮಿತ ಕಾಶ್ಮೀರದ ಕ್ರಿಕೆಟಿಗ title=
Pakistan vs Sri Lanka

PAK vs SL Playing XI: ಏಷ್ಯಾ ಕಪ್ 2023ರಲ್ಲಿ ಮುಂದಿನ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಈ ಹಣಾಹಣಿಯಲ್ಲಿ ಗೆಲ್ಲುವ ತಂಡ ಫೈನಲ್‌’ನಲ್ಲಿ ಭಾರತವನ್ನು ಎದುರಿಸಲಿದೆ. ಇನ್ನು ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಮಹತ್ವದ ಪಂದ್ಯಕ್ಕಾಗಿ ಪಾಕಿಸ್ತಾನ ತನ್ನ  ಪ್ಲೇಯಿಂಗ್ 11 ಘೋಷಿಸಿದ್ದು, ಅದರಲ್ಲಿ 22 ವರ್ಷದ ಆಟಗಾರನಿಗೆ ಸ್ಥಾನ ನೀಡಲಾಗಿದೆ. ಈ ಮೂಲಕ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: 2024ರವರೆಗೆ ಈ ರಾಶಿಯವರಿಗೆ ಕೋಟೇಶ್ವರ ಯೋಗ: ಉಕ್ಕಿಬರಲಿದೆ ಸಂಪತ್ತು, ಎಲ್ಲಾ ಕೆಲಸದಲ್ಲಿ ಗೆಲುವು-ವ್ಯಾಪಾರದಲ್ಲಿ ಬಹುಪಟ್ಟು ಲಾಭ

ಪಾಕ್ ಆಕ್ರಮಿತ ಕಾಶ್ಮೀರ ಮೂಲದ ಕ್ರಿಕೆಟಿಗ ಜಮಾನ್ ಖಾನ್ ಅವರು ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪರ ಏಕದಿನ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಮಿರ್‌ಪುರದ ಬಡ ಕುಟುಂಬದ ಈ ಆಟಗಾರ ಕಾಶ್ಮೀರ ಲೀಗ್‌’ನಲ್ಲಿ ಆಡಿದ ನಂತರ ಕೆನಡಾ ಮತ್ತು ಶ್ರೀಲಂಕಾದ ಟಿ20 ಲೀಗ್‌’ನಲ್ಲಿ ಆಡಿದ್ದಾರೆ. ಆದರೆ ಯಾವುದೇ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿಲ್ಲ. ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಆರು T20 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ.

ನಸೀಮ್ ಶಾ ಬದಲಿಗೆ ಅವಕಾಶ:

ಗಾಯಗೊಂಡಿರುವ ನಸೀಮ್ ಶಾ ಬದಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜಮಾನ್ ಖಾನ್’ಗೆ ತಂಡದಲ್ಲಿ ಅವಕಾಶ ನೀಡಿದೆ. ಪಾಕಿಸ್ತಾನ ತಂಡದ ಮ್ಯಾನೇಜ್‌ಮೆಂಟ್ ಬುಧವಾರ ಪ್ರಕಟಿಸಿದ ಪ್ಲೇಯಿಂಗ್ 11 ರಲ್ಲಿ, ವೇಗದ ಬೌಲರ್ ಹ್ಯಾರಿಸ್ ರೌಫ್ ಗಾಯದ ಕಾರಣ ಪಂದ್ಯದಲ್ಲಿ ಆಡುವುದಿಲ್ಲ ಎಂದು ಖಚಿತಪಡಿಸಲಾಯಿತು.

2021 ರಲ್ಲಿ ಕಾಶ್ಮೀರ ಲೀಗ್‌’ನಲ್ಲಿ ಗಮನ ಸೆಳೆದಿದ್ದ ಜಮಾನ್, ಬಳಿಕ ಪಾಕಿಸ್ತಾನ ಸೂಪರ್ ಲೀಗ್’ನಲ್ಲಿ ಅವಕಾಶ ನೀಡಲಾಯಿತು. ಇನ್ನು ಪಾಕಿಸ್ತಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಮುಖ್ಯ ತರಬೇತುದಾರರಾಗಿರುವ ಇಂಗ್ಲಿಷ್ ಕೌಂಟಿ ತಂಡ ಡರ್ಬಿಶೈರ್‌’ಗಾಗಿಯೂ ಆಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌’ನಲ್ಲಿ ನಡೆದ 'ದಿ ಹಂಡ್ರೆಡ್' ಪಂದ್ಯಾವಳಿಯಲ್ಲಿ ಮ್ಯಾಂಚೆಸ್ಟರ್ ಇನ್ವಿನ್ಸಿಬಲ್ಸ್ ಪರ ಜಮಾನ್ ಆರು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ವಿಕೆಟ್ ಪಡೆದಿದ್ದರು.

ಇದನ್ನೂ ಓದಿ:  Horoscope: ಈ ರಾಶಿಗಿರಲಿದೆ ಮಹಾವಿಷ್ಣು ವಿಶೇಷ ಶ್ರೀರಕ್ಷೆ: ಇಂದು ಕೈತುಂಬಾ ದುಡ್ಡು, ಬಾಳು ಬಂಗಾರ

ಪಾಕಿಸ್ತಾನದ ಪ್ಲೇಯಿಂಗ್ 11:

ಮೊಹಮ್ಮದ್ ಹ್ಯಾರಿಸ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಜಮಾನ್ ಖಾನ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News