ಸಿದ್ದರಾಮಯ್ಯ ಸರ್ಕಾರ @100: ಬಿಜೆಪಿಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪಟ್ಟಿ ಬಿಡುಗಡೆ!

Farmers Suicide In Karnataka: 2013 ರಿಂದ 2018ರ ಸಿದ್ದರಾಮಯ್ಯರ ಮೊದಲ ಅವಧಿಯಲ್ಲಿ ಬರೊಬ್ಬರಿ 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈಗಾಗಲೇ 150ರ ಗಡಿ ದಾಟಿದೆ! ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Sep 16, 2023, 09:01 PM IST
  • ರಾಜ್ಯದಲ್ಲಿ ಜೂನ್ ತಿಂಗಳಿಂದಲೇ ಮುಂಗಾರು ಕೈ ಕೊಟ್ಟು ಬರಗಾಲ‍ದ ಮುನ್ಸೂಚನೆ ಸಿಕ್ಕಿತ್ತು
  • ಇದು ಯಾರು ಬರೆದ ಕಥೆಯೋ, ನಮಗಾಗಿ ಬಂದ ವ್ಯಥೆಯೋ" ಎಂಬಂತಾಗಿದೆ ಅನ್ನದಾತರ ಬದುಕು!
  • ರಾಜ್ಯದಲ್ಲಿಯೇ ದಿನನಿತ್ಯ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ ಎಂದು ಟೀಕಿಸಿದ ಬಿಜೆಪಿ
ಸಿದ್ದರಾಮಯ್ಯ ಸರ್ಕಾರ @100: ಬಿಜೆಪಿಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪಟ್ಟಿ ಬಿಡುಗಡೆ!  title=
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ರಾಜ್ಯ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ಜೂನ್ ತಿಂಗಳಿಂದಲೇ ಮುಂಗಾರು ಕೈ ಕೊಟ್ಟು ಬರಗಾಲ‍ದ ಮುನ್ಸೂಚನೆ ಸಿಕ್ಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬರಗಾಲವನ್ನು ತಳ್ಳಿ ಹಾಕುತ್ತಾ, ಹಲವು ದಂಧೆಗಳಲ್ಲಿ ತೊಡಗಿಕೊಂಡಿತ್ತು’ ಎಂದು ಕಿಡಿಕಾರಿದೆ.

‘ಇದೀಗ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಹಳ್ಳ ತೊಡಲು ಮುಂದಾದ ಸಿದ್ದರಾಮಯ್ಯರ ಸರ್ಕಾರ ಬರ ಪೀಡಿತ ತಾಲೂಕುಗಳನ್ನು ಸರಿಯಾಗಿ ಸಮೀಕ್ಷೆ ಮಾಡದೆ ಆತುರಕ್ಕೆ ಬಿದ್ದು ಬೆಳಗಾವಿ ಜಿಲ್ಲೆಯ ತಾಲೂಕುಗಳ ಜೊತೆಗೆ ರಾಜ್ಯದ ಹಲವು ತಾಲೂಕುಗಳನ್ನು ಬರ ಪೀಡಿತ ಪಟ್ಟಿಯಿಂದ ಕೈ ಬಿಟ್ಟಿದೆ. ಮಳೆಯೂ ಇಲ್ಲದೆ ಬೆಳೆಯೂ ಕೈಗೆ ಸಿಗದೆ ಅನ್ನದಾತ ಕಂಗಾಲಾಗಿ ಕೂತಿದ್ದಾನೆ. ಬರವೇ ಇಲ್ಲವೆಂದು ಕಾಲಹರಣ ಮಾಡಿದ್ದ #ATMSarkara ಅನುದಾನ ನೀಡಬೇಕೆಂಬ ಕಾರಣಕ್ಕೆ ಬರಪೀಡಿತ ಪಟ್ಟಿಯಿಂದ ರಾಜ್ಯದ ಹಲವು ತಾಲೂಕುಗಳನ್ನು ಹೊರಗಿಟ್ಟು ಅನ್ಯಾಯ ಮಾಡುತ್ತಿದೆ‌’ ಎಂದು ಕುಟುಕಿದೆ.

ಇದನ್ನೂ ಓದಿ: ವಾಹನ ಕಳುವಾದ್ರೆ ಪೊಲೀಸ್‌ ಠಾಣೆಗೆ ಹೋಗುವ ಅಗತ್ಯವಿಲ್ಲ

ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ‘ಇದು ಯಾರು ಬರೆದ ಕಥೆಯೋ, ನಮಗಾಗಿ ಬಂದ ವ್ಯಥೆಯೋ" ಎಂಬಂತಾಗಿದೆ ಅನ್ನದಾತರ ಬದುಕು! ರಾಜ್ಯದಲ್ಲಿ ದಿನನಿತ್ಯ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿಕಾರಿದೆ.

‘2013 ರಿಂದ 2018ರ ಸಿದ್ದರಾಮಯ್ಯರ ಮೊದಲ ಅವಧಿಯಲ್ಲಿ ಬರೊಬ್ಬರಿ 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈಗಾಗಲೇ 150ರ ಗಡಿ ದಾಟಿದೆ! ಸಿದ್ದರಾಮಯ್ಯನವರೇ ತಮ್ಮ ಅವಧಿಯಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು ಎಂಬ ರಕ್ಕಸ ಇತಿಹಾಸವನ್ನು ತಾವು ಬರೆಯುತ್ತಿದ್ದೀರಿ!’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಸಾಲು ಕೊಡುವ ನೆಪದಲ್ಲಿ ಅನುಚಿತ ವರ್ತನೆ: ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಧರ್ಮದೇಟು!

ಆತ್ಮಹತ್ಯೆ ಮಾಡಿಕೊಂಡ ಜಿಲ್ಲಾವಾರು ರೈತರ ಸಂಖ್ಯೆ

ಹಾವೇರಿ – 29, ಬೆಳಗಾವಿ -21, ಶಿವಮೊಗ್ಗ -16, ಯಾದಗಿರಿ -12, ಚಿಕ್ಕಮಗಳೂರು -12, ಕಲಬುರಗಿ -9, ವಿಜಯನಗರ -8, ಮೈಸೂರು – 8, ಧಾರವಾಡ -7, ಮಂಡ್ಯ -7, ಕೊಪ್ಪಳ- 5, ಚಿತ್ರದುರ್ಗ -5, ಬೀದರ್‌ – 4, ಹಾಸನ -4, ದಾವಣಗೆರೆ -3, ಗದಗ – 3, ವಿಜಯಪುರ -3, ರಾಮನಗರ- 2, ಬಳ್ಳಾರಿ- 2, ರಾಯಚೂರು- 1, ಬಾಗಲಕೋಟೆ-1 ಮತ್ತು ಕೊಡಗು- 1.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News