ಐದರಿಂದ ಏಳು ಶೇ. ದಷ್ಟು ವಿದ್ಯುತ್ ದರ ಏರಿಕೆ ! ಅಕ್ಟೋಬರ್ ಒಂದರಿಂದಲೇ ಜಾರಿ

Electricity Rates Increased:TSECL ಈ ಹಿಂದೆ 2014 ರಲ್ಲಿ ವಿದ್ಯುತ್ ದರವನ್ನು ಬದಲಾಯಿಸಿತ್ತು. ಪ್ರಸ್ತುತ, ಈಶಾನ್ಯ ರಾಜ್ಯದಲ್ಲಿ ಸುಮಾರು 10 ಲಕ್ಷ ವಿದ್ಯುತ್ ಗ್ರಾಹಕರಿದ್ದಾರೆ.

Written by - Ranjitha R K | Last Updated : Sep 25, 2023, 02:29 PM IST
  • ಅಕ್ಟೋಬರ್ 1 ರಿಂದ ಹೊಸ ದರಗಳು ಅನ್ವಯ
  • ಈ ಹಿಂದೆ 2014ರಲ್ಲಿ ದರದಲ್ಲಿ ಬದಲಾವಣೆಯಾಗಿತ್ತು
  • ವಿದ್ಯುತ್ ದರವನ್ನು ಏಕೆ ಹೆಚ್ಚಿಸಲಾಗಿದೆ
ಐದರಿಂದ ಏಳು ಶೇ. ದಷ್ಟು ವಿದ್ಯುತ್ ದರ ಏರಿಕೆ ! ಅಕ್ಟೋಬರ್ ಒಂದರಿಂದಲೇ ಜಾರಿ  title=

Electricity Rates Increased : ವಿದ್ಯುತ್ ದರ ಇಳಿಕೆಯಾಗುತ್ತದೆ ಎಂದು ನೀರೀಕ್ಷಿಸುತ್ತಿರುವವರಿಗೆ ದೊಡ್ಡ ಶಾಕ್ ಸಿಕ್ಕಿದೆ. ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಈ ದರ ಏರಿಕೆ ಅಕ್ಟೋಬರ್ ಒಂದರಿಂದಲೇ ಜಾರಿಗೆ ಬರಲಿದೆ. ಈ ಬಾರಿ ಸರಾಸರಿ ಶೇ.5ರಿಂದ 7ರಷ್ಟು ವಿದ್ಯುತ್ ದರ ಏರಿಕೆಯಾಗಿದೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಅಕ್ಟೋಬರ್ 1 ರಿಂದ ಹೊಸ ದರಗಳು ಅನ್ವಯ : 
ತ್ರಿಪುರಾ ಸ್ಟೇಟ್ ಇಲೆಕ್ಟ್ರಿಸಿಟಿ ಕಾರ್ಪೊರೇಷನ್ ಲಿಮಿಟೆಡ್ (ಟಿಎಸ್‌ಇಸಿಎಲ್) ವಿದ್ಯುತ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಹೊಸ ವಿದ್ಯುತ್ ದರಗಳು ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದೆ. TSECL, ಒಂದು ಕಾಲದಲ್ಲಿ ಲಾಭ ಗಳಿಸುವ ಸರ್ಕಾರಿ ಘಟಕವಾಗಿತ್ತು. ಆದರೆ, 2021-22ರ ಆರ್ಥಿಕ ವರ್ಷದಲ್ಲಿ ಒಟ್ಟು 280 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ.  ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿಯೇ ಘಟಕಕ್ಕೆ 80 ಕೋಟಿ ರೂಪಾಯಿಗಳ ನಷ್ಟವಾಗಿದೆ. 

ಇದನ್ನೂ ಓದಿ : ನಿರೀಕ್ಷೆ ಮೀರಿ ಹೆಚ್ಚಳವಾಗಲಿದೆ ಡಿಎ ! ಸರ್ಕಾರಿ ನೌಕರರ ವೇತನದಲ್ಲಿಯೂ ಆಗುವುದು ಭರ್ಜರಿ ಏರಿಕೆ

ಈ ಹಿಂದೆ 2014ರಲ್ಲಿ ದರದಲ್ಲಿ ಬದಲಾವಣೆಯಾಗಿತ್ತು : 
TSECL ಈ ಹಿಂದೆ 2014 ರಲ್ಲಿ ವಿದ್ಯುತ್ ದರವನ್ನು ಬದಲಾಯಿಸಿತ್ತು. ಪ್ರಸ್ತುತ, ಈಶಾನ್ಯ ರಾಜ್ಯದಲ್ಲಿ ಸುಮಾರು 10 ಲಕ್ಷ ವಿದ್ಯುತ್ ಗ್ರಾಹಕರಿದ್ದಾರೆ.

ಪರಿಶೀಲನೆ ನಡೆಸಿ ಈ ನಿರ್ಧಾರ  : 
ಎಲ್ಲಾ ಅಂಶಗಳನ್ನು ಪರಿಗಣಿಸಿ ಮತ್ತು ತ್ರಿಪುರಾ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದೊಂದಿಗೆ (ಟಿಇಆರ್‌ಸಿ) ಸಮಾಲೋಚಿಸಿದ ನಂತರ ವಿದ್ಯುತ್ ನಿಗಮವನ್ನು ಉಳಿಸುವ ಸಲುವಾಗಿ ವಿದ್ಯುತ್ ದರವನ್ನು ಸರಾಸರಿ 5-7% ರಷ್ಟು ಹೆಚ್ಚಿಸಲಾಗುವುದು ಎಂದು TSECL ವ್ಯವಸ್ಥಾಪಕ ನಿರ್ದೇಶಕ ದೇಬಶಿಶ್ ಸರ್ಕಾರ್ ತಿಳಿಸಿದ್ದಾರೆ.

ವಿದ್ಯುತ್ ದರವನ್ನು ಏಕೆ ಹೆಚ್ಚಿಸಲಾಗಿದೆ?
ವಿದ್ಯುತ್ ದರ ಹೆಚ್ಚಳದ ಹಿಂದಿನ ಪ್ರಮುಖ ಕಾರಣ ಗ್ಯಾಸ್ ಬೆಲೆ ಏರಿಕೆ. ಕಳೆದ ಕೆಲವು ವರ್ಷಗಳಲ್ಲಿ ಇದು ಸುಮಾರು 196 ಪ್ರತಿಶತದಷ್ಟು ಹೆಚ್ಚಾಗಿದೆ. 

ಇದನ್ನೂ ಓದಿ : ಬ್ಯಾಂಕ್ ಸಾಲ ಪಡೆದವರಿಗೆ ಆರ್ ಬಿಐ ನೀಡಲಿದೆ ಪರಿಹಾರ ! ಮುಂದಿನ ತಿಂಗಳ ಆರಂಭದಲ್ಲಿಯೇ ಘೋಷಣೆ ಮಾಡಲಿದೆ ನೀತಿ

ಮಾಹಿತಿ ನೀಡಿದ ಸರ್ಕಾರ :
ಈ ಹಿಂದೆ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಡೆಸಲು TSECL ಗ್ಯಾಸ್ ಖರೀದಿಸಲು ತಿಂಗಳಿಗೆ 15 ಕೋಟಿ ರೂಪಾಯಿ ಖರ್ಚು ಮಾಡುತ್ತಿತ್ತು. ಆದರೆ ಈಗ ಈ ವೆಚ್ಚವು ತಿಂಗಳಿಗೆ 35-40 ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಬಿಟ್ಟರೆ ಬೇರೆ ದಾರಿ ಇಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News