Belly Fat : ಈ ಪಾನೀಯವನ್ನು ದಿನಕ್ಕೆ 3 ಬಾರಿ ಕುಡಿದರೆ 5 ದಿನದಲ್ಲಿ ಹೊಟ್ಟೆಯ ಕೊಬ್ಬು ಕರಗುತ್ತೆ!

Belly Fat Burn Drink: ಇತ್ತೀಚಿನ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಸಮಸ್ಯೆ ಸಾಮಾನ್ಯವಾಗಿದೆ. ಇದು ತೀವ್ರ ಅಸ್ವಸ್ಥತೆಯನ್ನು ಉಂಟು ಮಾಡುತ್ತಿದೆ. ಆಹಾರ ಪದ್ಧತಿ ಮತ್ತು ಜೀವನಶೈಲಿ ಇದಕ್ಕೆ ಪ್ರಮುಖ ಕಾರಣವೆಂದು ತೋರುತ್ತದೆ. 

Written by - Chetana Devarmani | Last Updated : Oct 10, 2023, 03:53 PM IST
  • ಬೆಲ್ಲಿ ಫ್ಯಾಟ್ ಸಮಸ್ಯೆ ನಿಮ್ಮನ್ನುಕಾಡುತ್ತಿದೆಯೇ?
  • ಕೊಬ್ಬು ಅಸ್ವಸ್ಥತೆಯನ್ನು ಉಂಟುಮಾಡುವುದು
  • ಹೊಟ್ಟೆ ಸುತ್ತಲಿನ ಕೊಬ್ಬು ಕರಗಿಸಲು ಇಲ್ಲಿದೆ ಮದ್ದು
Belly Fat : ಈ ಪಾನೀಯವನ್ನು ದಿನಕ್ಕೆ 3 ಬಾರಿ ಕುಡಿದರೆ 5 ದಿನದಲ್ಲಿ ಹೊಟ್ಟೆಯ ಕೊಬ್ಬು ಕರಗುತ್ತೆ!   title=
Belly Fat

Belly Fat Home Remedies : ಆಧುನಿಕ ಜೀವನಶೈಲಿಯಲ್ಲಿ ಬೊಜ್ಜು ಅಥವಾ ಅಧಿಕ ತೂಕವು ಪ್ರಮುಖ ಸಮಸ್ಯೆಯಾಗುತ್ತಿದೆ. ಇದರೊಂದಿಗೆ ತೂಕ ಹೆಚ್ಚಿಲ್ಲದಿದ್ದರೂ ಹೊಟ್ಟೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾದ ಕೊಬ್ಬು ಅಸ್ವಸ್ಥತೆಯನ್ನು ಉಂಟುಮಾಡುವುದು ಮಾತ್ರವಲ್ಲದೆ ಅನಾರೋಗ್ಯಕ್ಕೂ ಕಾರಣವಾಗುತ್ತದೆ.

ಸ್ಥೂಲಕಾಯತೆ, ಅಧಿಕ ತೂಕ, ಹೊಟ್ಟೆ ಕೊಬ್ಬು ಅಥವಾ ಫಿಟ್‌ನೆಸ್ ಮನುಷ್ಯ ಹುಟ್ಟಿದ ನಂತರ ವಯಸ್ಸಾದಂತೆ ಕಾಣಿಸಿಕೊಳ್ಳುತ್ತದೆ. ಆಹಾರ ಪದ್ಧತಿ ಮತ್ತು ಜೀವನಶೈಲಿ ಸರಿಯಿಲ್ಲದಿದ್ದರೆ, ಹೊಟ್ಟೆ ಕೊಬ್ಬು ಮತ್ತು ಬೊಜ್ಜು ಮುಂತಾದ ಸಮಸ್ಯೆಗಳು ಬರುತ್ತವೆ. ಹೊಟ್ಟೆಯಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುವುದರಿಂದ ಬೆಲ್ಲಿ ಫ್ಯಾಟ್ ಸಮಸ್ಯೆ ಉದ್ಭವಿಸುತ್ತದೆ. ಕಾಲಕಾಲಕ್ಕೆ ಈ ಸಮಸ್ಯೆ ಕಡಿಮೆಯಾಗದಿದ್ದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ಇದನ್ನೂ ಓದಿ : ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು...ಈ ಫೇಸ್ ಮಾಸ್ಕ್ ಬಳಸಿ! 

ಹೊಟ್ಟೆಯ ಕೊಬ್ಬಿನ ಸಮಸ್ಯೆಯನ್ನು ಕಡಿಮೆ ಮಾಡಲು ಕೇವಲ ವ್ಯಾಯಾಮ ಸಾಕಾಗುವುದಿಲ್ಲ. ವ್ಯಾಯಾಮದ ಜೊತೆಗೆ ಕೆಲವು ರೀತಿಯ ಪಾನೀಯಗಳನ್ನು ಸೇವಿಸಬೇಕು ಎಂದು ಆಯುರ್ವೇದ ವಿಜ್ಞಾನ ಹೇಳುತ್ತದೆ. ಇದಕ್ಕೆ ಪರಿಪೂರ್ಣ ಪರ್ಯಾಯವೆಂದರೆ ನಿಂಬೆ-ಶುಂಠಿ ಪಾನೀಯ. ಕೇವಲ ಐದು ದಿನಗಳಲ್ಲಿ ಫಲಿತಾಂಶವನ್ನು ಕಾಣಬಹುದು. ಶುಂಠಿಯಲ್ಲಿರುವ ಜಿಂಜರಾಲ್ ಮತ್ತು ಶೋಗಾಲ್‌ಗಳು ದೇಹದಲ್ಲಿನ ಆಂತರಿಕ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅದೇ ಸಮಯದಲ್ಲಿ ಹಸಿವು ಕಡಿಮೆಯಾಗುತ್ತದೆ. ಇದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ. ನಿಂಬೆಯಲ್ಲಿರುವ ವಿಟಮಿನ್ ಸಿ ಕಾರಣದಿಂದಾಗಿ, ಹಸಿವು ಸಾಕಷ್ಟು ಕಡಿಮೆಯಾಗುತ್ತದೆ.

ನಿಂಬೆ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿ. ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಮೂರು ಕಪ್ ನೀರು ಸೇರಿಸಿ. ಈಗ ಮಿಶ್ರಣವನ್ನು 10-15 ನಿಮಿಷ ಕುದಿಸಿ. ರುಚಿಗೆ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಕೇವಲ ಐದು ದಿನಗಳಲ್ಲಿ ಹೊಟ್ಟೆಯ ಕೊಬ್ಬು ಸುಲಭವಾಗಿ ಕರಗುತ್ತದೆ. 

ಇದನ್ನೂ ಓದಿ : ನೀವು ಹಾಲು ಕುಡಿಯಲು ಇಷ್ಟಪಡುವುದಿಲ್ಲವೇ ಹಾಗಾದರೆ ಈ ಆಹಾರಗಳಿಂದ ದೇಹಕ್ಕೆ ಕ್ಯಾಲ್ಸಿಯಂ ಪಡೆಯಿರಿ 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News