ಆನ್ಲೈನ್ ಗೇಮಿಂಗ್‍ನಲ್ಲಿ ಕೋಟಿ ಗೆದ್ದು ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ!

Online Gaming Jackpot: ಇತ್ತೀಚೆಗೆ ಆನ್‍ಲೈನ್ ಕ್ರಿಕೆಟ್ ಗೇಮ್‍ನಲ್ಲಿ ಸೋಮನಾಥ್ 1.5 ಕೋಟಿ ಬಹುಮಾನ ಗೆಲ್ಲುವ ಮೂಲಕ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ ಸೋಮನಾಥ್ ವಿರುದ್ಧ ತನಿಖೆ ಕೈಗೊಂಡಿತ್ತು.

Written by - Puttaraj K Alur | Last Updated : Oct 18, 2023, 08:45 PM IST
  • ಆನ್ಲೈನ್ ಗೇಮಿಂಗ್‍ನಲ್ಲಿ ಕೋಟಿ ಗೆದ್ದು ಸುದ್ದಿಯಾಗಿದ್ದ PSI ಸಸ್ಪೆಂಡ್!
  • ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಸೋಮನಾಥ್ ಝೆಂಡೆ ಅಮಾನತು
  • ಆನ್‍ಲೈನ್ ಕ್ರಿಕೆಟ್ ಗೇಮ್‍ನಲ್ಲಿ 1.5 ಕೋಟಿ ಗೆದ್ದಿದ್ದ ಸೋಮನಾಥ್
ಆನ್ಲೈನ್ ಗೇಮಿಂಗ್‍ನಲ್ಲಿ ಕೋಟಿ ಗೆದ್ದು ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ! title=
PSI ಸೋಮನಾಥ್ ಝೆಂಡೆ ಸಸ್ಪೆಂಡ್

ನವದೆಹಲಿ: ಆನ್ಲೈನ್ ಗೇಮಿಂಗ್ ಮೂಲಕ ಕೋಟ್ಯಂತರ ಹಣ ಗೆದ್ದು ಸಖತ್ ಸುದ್ದಿಯಾಗಿದ್ದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಒಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಸೋಮನಾಥ್ ಝೆಂಡೆ ಅಮಾನತುಗೊಂಡವರು.

ಸೋಮನಾಥ್ ಝೆಂಡೆ ಅವರು ಪುಣೆಯ ಪಿಂಪ್ರಿ ಚಿಂಚ್‍ವಾಡಾ(Pimpri-Chinchwad)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಶಿಸ್ತಿನ ವರ್ತನೆ ಹಾಗೂ ಪೊಲೀಸ್ ಇಲಾಖೆಗೆ ಕಳಂಕ ತಂದ ಆರೋಪದಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: Daily GK Quiz: ಹುಟ್ಟಿನಿಂದ ಸಾಯುವವರೆಗೂ ನಿದ್ರೆ ಮಾಡದ ಜೀವಿ ಯಾವುದು?

ಇತ್ತೀಚೆಗೆ ಆನ್‍ಲೈನ್ ಕ್ರಿಕೆಟ್ ಗೇಮ್‍ನಲ್ಲಿ ಸೋಮನಾಥ್ 1.5 ಕೋಟಿ ಬಹುಮಾನ ಗೆಲ್ಲುವ ಮೂಲಕ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ ಸೋಮನಾಥ್ ವಿರುದ್ಧ ತನಿಖೆ ಕೈಗೊಂಡಿತ್ತು. ತನಿಖಾ ವರದಿ ಬಂದ ಬೆನ್ನಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದ ಕಾರಣ ಹಾಗೂ ಅಶಿಸ್ತಿನ ವರ್ತನೆ ಹಿನ್ನೆಲೆ ಸೋಮನಾಥ್ ಅವರನ್ನು ಅಮಾನತುಗೊಳಿಸಲಾಗಿದೆ. ಮುಂದಿನ ಇಲಾಖಾವಾರು ವಿಚಾರಣೆಯನ್ನು ಉಪಪೊಲೀಸ್ ಆಯುಕ್ತರಿಗೆ ಒಪ್ಪಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಸತೀಶ್ ಮಾನೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಜಧಾನಿ ದೆಹಲಿಯಲ್ಲಿ ಇಂದು ಕರವೇಯಿಂದ ಪ್ರತಿಭಟನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News