ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಮುಖ್ಯ ಕಾರಣವಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮತ್ತೆ ಸಿಬಿಐ ತನಿಖೆ ಎದುರಿಸುವ ಸಂಕಷ್ಟ ಎದುರಾಗಿದ್ದು ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ವಿಷಯದಲ್ಲಿ ಟ್ರಬಲ್ ಶೂಟರ್ ಎಂದು ಕರೆಯಲ್ಪಡುವ ಡಿಕೆಗೆ ಈಗ ಕಾನೂನು ಹೋರಾಟ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಸರಾ ಹಬ್ಬದ ಬಳಿಕ ಮುಂಬರುವ ಲೋಕಸಭೆ ಚುನಾವಣೆ ತಯಾರಿ ಚುರುಕು ಗೊಳಿಸಲು ಹಾಗೂ ಮುಂದಿನ ವರ್ಷದಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು ಸಂಸದರನ್ನ ಗೆಲ್ಲಿಸುವ ಪಣ ತೊಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಈಗ ದೊಡ್ಡ ಅಡಚಣೆ ಎದುರಾಗಿದೆ. ಸದ್ಯ ಜಾಮೀನಿನಲ್ಲಿ ಇರುವ ಡಿಕೆ ಮತ್ತೆ ಸಿಬಿಐ ಎಂಬ ತೂಗುಗತ್ತಿ ವಿರುದ್ಧ ಕಾನೂನು ಹೋರಾಟ ಮಾಡಬೇಕಿದೆ. ವಿಜಯದಶಮಿ ಬಳಿಕ 18 ರಿಂದ 20 ಕಮಲ - ಜೆಡಿಎಸ್ ನಾಯಕರನ್ನ ಆಪರೇಷನ್ ಮಾಡಿ ಪಕ್ಷಕ್ಕೆ ಕರೆತರುವ ಯೋಜನೆ ಹಾಕಿಕೊಂಡಿದ್ದ ಟ್ರಬಲ್ ಶೂಟರ್ ಗೆ ಸಂಕಷ್ಟ ಮುಂದಾಗಿದೆ.
ಇದನ್ನೂ ಓದಿ: ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಬಳಸದಂತೆ ಸರ್ಕಾರ ಆದೇಶ
ಸದ್ಯ ಡಿ ಕೆ ಶಿವಕುಮಾರ್ ಹೈ ಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗುವ ಬಗ್ಗೆ ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಈಗಾಗಲೇ ಕಾನೂನು ತಜ್ಞರು ಹಾಗೂ ವಕೀಲರ ಜೊತೆ ಡಿಕೆ ಸಹೋದರರು ದೂರವಾಣಿ ಮೂಲಕ ಮಾತನ್ನಾಡಿದ್ದಾರೆ. ಸುಪ್ರೀಂ ಕೋರ್ಟ್ ಕರ್ನಾಟಕ ಹೈ ಕೋರ್ಟ್ ಆದೇಶ ಎತ್ತಿಹಿಡಿದರೆ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ರಾಜಕೀಯವಾಗಿ ಇವರಿಗೆ ದೊಡ್ಡ ಹೊಡೆತ ಆಗಲಿದೆ.ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿಬಿಐ ವಿಚಾರಣೆಗೆ ಕರೆದರೆ, ಪ್ರವಾಸ, ಪ್ರಚಾರ ಮಾಡುವುದಕ್ಕೆ ಪಕ್ಷಕ್ಕೆ ಹಾಗೂ ಸ್ವಂತ ವರ್ಚಸ್ಸಿಗೂ ತೊಂದರೆ ಆಗಲಿದೆ.
ಇನ್ನುಳಿದಂತೆ ವಿಷಯಗಳ ಕೊರತೆ ಎದುರಿಸುತ್ತಿದ್ದ ವಿಪಕ್ಷಗಳಿಗೆ ಈಗ ಡಿಕೆ ವಿಚಾರಣೆ ರಾಜಕೀಯ ಆಹಾರ ಆಗಲಿದೆ, ಇದನ್ನ ಲೋಕಸಮರ ಸಂದರ್ಭದಲ್ಲಿ ಉಪಯೋಗಿಸಲು ಮೈತ್ರಿ ಪಕ್ಷ ತಯಾರಿ ನಡೆಸಿದೆ.
ಇದನ್ನೂ ಓದಿ: ದೇವನಹಳ್ಳಿ ಭೂಸ್ವಾಧೀನಕ್ಕೆ ವಿರೋಧ: ರೈತರ ಜತೆ ಅ.25ರ ಬಳಿಕ ಮತ್ತೊಂದು ಸಭೆ: ಎಂ ಬಿ ಪಾಟೀಲ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.