ಹೊಸ ನಿಯಮದಂತೆಯೇ ಸರ್ಕಾರಿ ನೌಕರರ ವೇತನ ಹೆಚ್ಚಳ ! ಮೂಲ ವೇತನ 26 ಸಾವಿರಕ್ಕೆ ಏರಿಕೆ

ಹೊಸ ನಿಯಮದ  ಪ್ರಕಾರ ಸರ್ಕಾರಿ ನೌಕರರ ಮೂಲ ವೇತನ 18 ಸಾವಿರದಿಂದ 26 ಸಾವಿರಕ್ಕೆ ಹೆಚ್ಚಾಗುತ್ತದೆ.  

ಬೆಂಗಳೂರು  : ಭತ್ಯೆಗಳಲ್ಲಿ ಇತ್ತೀಚಿನ ಹೆಚ್ಚಳದಿಂದಾಗಿ, ನೌಕರರ ವೇತನವು ಶೀಘ್ರದಲ್ಲೇ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದಲ್ಲದೇ ಮುಂದಿನ ವೇತನ ಆಯೋಗ ಅಂದರೆ 8ನೇ ವೇತನ ಆಯೋಗ ಜಾರಿ ಬಗ್ಗೆಯೂ ಬಹಳಷ್ಟು ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಹೊಸ ವೇತನ ಆಯೋಗ ಜಾರಿಗೆ ಬರಲಿದೆ ಎನ್ನಲಾಗಿದೆ. 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಇನ್ನು ಕೆಲವೇ ತಿಂಗಳಲ್ಲಿ ಹೊಸ ವೇತನ ಜಾರಿಯಾಗಬೇಕು. 8ನೇ ವೇತನ ಆಯೋಗ ಜಾರಿಗೆ ಬಂದರೆ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಇನ್ನು ಕೆಲವೇ ತಿಂಗಳುಗಳಲ್ಲಿ ಹೊಸ ವೇತನ ಆಯೋಇಗ ಜಾರಿಯಾಗಬೇಕು. ಅಥವಾ ವೇತನ ನಿಯಮದಲ್ಲಿ ಬದಲಾವಣೆಯಾಗಬೇಕು. 8ನೇ ವೇತನ ಆಯೋಗವೇ ರಚನೆಯಾಗಲಿದೆ ಎನ್ನುವ ಮಾತು ಭಾರೀ ಜೋರಾಗಿ ಕೇಳಿ ಬರುತ್ತಿದೆ.   

2 /5

ಮುಂದಿನ ವರ್ಷದ ಅಂದರೆ 2024 ರ ಜನವರಿಯಲ್ಲಿಯೇ 8ನೇ ವೇತನ ಆಯೋಗದ ಘೋಷಣೆಯಾಗಲಿದೆ ಎನ್ನಲಾಗಿದೆ. ಇದೀಗ ಜುಲೈ ತುಟ್ಟಿಭತ್ಯೆ ಹೆಚ್ಚಳವಾಗಿದ್ದು, ಮುಂದಿನ ಡಿಎ ಜನವರಿ 2024 ರಲ್ಲಿ ಏರಿಕೆಯಾಗಬೇಕಿದೆ.  

3 /5

ಜನವರಿಯಲ್ಲಿ ಡಿಎ ಶೇಕಡಾ 4 ರಷ್ಟು ಹೆಚ್ಚಿದರೆ, ಒಟ್ಟು ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪುತ್ತದೆ. ಹೀಗಾದರೆ ವೇತನ ಪರಿಷ್ಕರಣೆ ಮಾಡಬೇಕು. ವೇತನವನ್ನು ಪರಿಷ್ಕರಿಸಲು ಹೊಸ ವೇತನ  ಆಯೋಗ ರಚನೆಯಾಗಬೇಕು ಅಥವಾ ವೇತನ ನಿಯಮದಲ್ಲಿ ಬದಲಾವಣೆಯಾಗಬೇಕು. 

4 /5

ವರದಿಗಳ ಪ್ರಕಾರ, 8 ನೇ ವೇತನ ಆಯೋಗ ಜಾರಿಯಾದಲ್ಲಿ ಪ್ರತಿ ವರ್ಷ ವೇತನವನ್ನು ಪರಿಷ್ಕರಣೆಯಾಗುತ್ತದೆ. ಪ್ರಸ್ತುತ, ಪ್ರತಿ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ. 

5 /5

8 ನೇ ವೇತನ ಆಯೋಗದ ಪ್ರಕಾರ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗಬಹುದು. ಅಂದರೆ ನೌಕರರ ಕನಿಷ್ಠ ವೇತನ ಶೇ.44.44ರಷ್ಟು  ಏರಿಕೆಯಾಗುತ್ತದೆ ಎನ್ನಲಾಗಿದೆ. ಈ ಪ್ರಕಾರ ಮೂಲ ವೇತನ 18 ಸಾವಿರದಿಂದ 26 ಸಾವಿರಕ್ಕೆ ಹೆಚ್ಚಾಗುತ್ತದೆ.