Shukra Shashi Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಧನತ್ರಯೋದಶಿಯ ಪರ್ವದಂಟು ಅತ್ಯಂತ ಅಪರೂಪದ ಗ್ರಹಗಳ ಸಂಯೋಜನೆ ನೆರವೇರುತ್ತಿದೆ. ಧನತ್ರಯೋದಶಿಯ ದಿನ ಶುಕ್ರನು ಕನ್ಯಾ ರಾಶಿಯಲ್ಲಿ ಇರಲಿದ್ದಾನೆ ಮತ್ತು ಈ ದಿನ ಚಂದ್ರನು ಕೂಡ ಕನ್ಯಾ ಸಾಗಲಿದ್ದಾನೆ. ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಶುಕ್ರರ ಸಂಯೋಗದಿಂದ ಶುಕ್ರ ಶಶಿ ಯೋಗವು ರೂಪುಗೊಳ್ಳಲಿದೆ. ಈ ಯೋಗದ ಪ್ರಭಾವದಿಂದಾಗಿ, ನಿಮ್ಮ ಸಂಪತ್ತು ಈ ಬಾರಿ ಧನತ್ರಯೋದಶಿಯ ಹಬ್ಬದಂದು ಅಪಾರ ಹೆಚ್ಚಾಗಲಿದೆ. (Spiritual News In Kannada)
Dhanatrayodashi 2023 Horoscope: ಈ ಬಾರಿ ಧಂತೇರಸ್‌ನ ಶುಭ ಸಂದರ್ಭದಲ್ಲಿ ಅನೇಕ ಶುಭ ಕಾಕತಾಳೀಯಗಳು ನಡೆಯುತ್ತಿವೆ. ಈ ದಿನ, ಹಸ್ತಾನಕ್ಷತ್ರವೂ ಇರುತ್ತದೆ, ಇದು ಉದ್ಯಮಿಗಳಿಗೆ ಅಪಾರ ಆರ್ಥಿಕ ಲಾಭವನ್ನು ತಂದುಕೊಡಲಿದೆ. ಹಸ್ತಾನಕ್ಷತ್ರವು ಉದ್ಯಮಿಗಳಿಗೆ ಉತ್ತಮ ಮಾರಾಟದ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಈ ನಕ್ಷತ್ರದಲ್ಲಿ ಮಾಡಲಾಗುವ ಶಾಪಿಂಗ್ ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ನಕ್ಷತ್ರದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ ಮತ್ತು ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ. ಇದಲ್ಲದೆ, ಶಾಶ್ವತ ಆಸ್ತಿ ಮತ್ತು ಕಟ್ಟಡಗಳನ್ನು ನೀಡುವ ಶನಿಯು ಧನತ್ರಯೋದಶಿ ದಿನ 30 ವರ್ಷಗಳ ನಂತರ ತನ್ನ ಮೂಲತ್ರಿಕೋನ ಕುಂಭದಲ್ಲಿ ತನ್ನ ನೇರ ನಡೆಯಲ್ಲಿ ಸಾಗಲಿದ್ದಾನೆ. ಹೀಗಾಗಿ ಧನತ್ರಯೋದಶಿಯ ದಿನ ರೂಪುಗೊಂಡ ಈ ಎಲ್ಲಾ ಮಂಗಳಕರ ಯೋಗಗಳು 7 ರಾಶಿಗಳ ಜನರ ಸಂಪತ್ತನ್ನು ಹಲವು ಪಟ್ಟು ಹೆಚ್ಚಿಸಲಿದೆ .ಈ ಧನತ್ರಯೋದಶಿ ಯಾವ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
ಇದನ್ನೂ ಓದಿ-Diwali 2023 ಬಳಿಕ ತ್ರಿಗ್ರಹಿ ಯೋಗ ನಿರ್ಮಾಣ, ಸೂರ್ಯ-ಮಂಗಳರ ಕೃಪೆಯಿಂದ ಈ ಜನರ ಜೀವನದಲ್ಲಿ ಅಪಾರ ಕನಕವೃಷ್ಟಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ವೃಷಭ ರಾಶಿ: ಧನತ್ರಯೋದಶಿಯ ದಿನ ವೃಷಭ ರಾಶಿಯ ಜನರಿಗೆ ತಾಯಿ ಲಕ್ಷ್ಮಿ ಆಶೀರ್ವಾದದಿಂದ ರೂಪುಗೊಂಡ ಮಂಗಳಕರ ಯೋಗ ವಿಶೇಷ ಪ್ರಯೋಜನವನ್ನು ತಂದು ಕೊಡಲಿದೆ. ನಿಮ್ಮ ಸಂಪತ್ತಿನಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ ಮತ್ತು ನೀವು ಅನೇಕ ಅದ್ಭುತ ವೃತ್ತಿ ಸಂಬಂಧಿತ ಅವಕಾಶಗಳನ್ನು ಪಡೆಯುವಿರಿ. ಹೊಸ ಶಕ್ತಿಯು ನಿಮ್ಮೊಳಗೆ ಸಂಚರಿಸಲಿದೆ ಮತ್ತು ನೀವು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಈ ಅವಧಿಯಲ್ಲಿ ದೀರ್ಘಕಾಲದಿಂದ ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಕೈಸೇರಲಿದೆ ಮತ್ತು ನಿಮ್ಮ ಜೀವನದಲ್ಲಿ ಸಮೃದ್ಧಿ ಹೆಚ್ಚಾಗಲಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಹಬ್ಬವನ್ನು ಆಚರಿಸುತ್ತೀರಿ ಮತ್ತು ತಾಯಿ ಲಕ್ಷ್ಮಿ ನಿಮ್ಮ ಮೇಲೆ ಅಪಾರ ಕೃಪೆ ತೋರಲಿದ್ದಾಳೆ.
2. ಕರ್ಕ ರಾಶಿ: ಧನತ್ರಯೋದಶಿಯ ಶುಭ ಕಾಕತಾಳೀಯದ ಪ್ರಭಾವದಿಂದ ಕರ್ಕ ರಾಶಿಯ ಜನರಿಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ನಿಮ್ಮ ಕೆಲವು ಸ್ಥಗಿತಗೊಂಡ ಯೋಜನೆಗಳು ಮತ್ತೆ ಪ್ರಾರಂಭವಾಗಬಹುದು ಮತ್ತು ಈ ಸಮಯದಲ್ಲಿ ನೀವು ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವೃತ್ತಿಜೀವನದಲ್ಲಿ ಯಶಸ್ಸಿನ ಅನೇಕ ಅವಕಾಶಗಳಿವೆ. ತಾಯಿ ಲಕ್ಷ್ಮಿಯ ಆಶೀರ್ವಾದ ಮತ್ತು ಮಂಗಳಕರ ನಕ್ಷತ್ರದ ಪ್ರಭಾವದಿಂದಾಗಿ, ಉದ್ಯಮಿಗಳು ಧನತ್ರಯೋದಶಿಯ ಸಂದರ್ಭದಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಮತ್ತು ನೀವು ಆರ್ಥಿಕವಾಗಿ ಪ್ರಬಲಲಾಗುವಿರಿ. ಹೊಟೇಲ್ ಉದ್ಯಮದಲ್ಲಿರುವವರಿಗೂ ಈ ಧನತ್ರಯೋದಶಿ ಸಾಕಷ್ಟು ಶುಭಕರವಾಗಿರಲಿದೆ.
3. ಕನ್ಯಾ ರಾಶಿ: ಈ ಬಾರಿಯ ಧನತ್ರಯೋದಶಿ ಕನ್ಯಾ ರಾಶಿಯ ಜನರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರಲಿದೆ ಎಂದು ಪರಿಗಣಿಸಲಾಗಿದೆ. ಗ್ರಹಗಳ ಮಂಗಳಕರ ಸಂಯೋಜನೆಯಿಂದಾಗಿ, ನೀವು ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವಿರಿ ಮತ್ತು ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಸಂತೋಷ-ಸಮೃದ್ಧಿಯ ಅವಕಾಶಗಳಿವೆ. ನಿಮ್ಮ ಜೀವನದಲ್ಲಿ ಯಶಸ್ಸಿನ ಅನೇಕ ಅವಕಾಶಗಳು ಒದಗಿ ಬರಲಿವೆ ಮತ್ತು ವಿದೇಶಕ್ಕೆ ಹೋಗಲು ಸಾಕಷ್ಟು ಸಮಯದಿಂದ ಪ್ರಯತ್ನಿಸುತ್ತಿರುವವರಿಗೂ ಯಶಸ್ಸು ಸಿಗಲಿದೆ. ಕಚೇರಿಯಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುವಿರಿ. ನೀವು ಕಚೇರಿಯ ಜನರಿಂದ ಎಲ್ಲಾ ರೀತಿಯ ಬೆಂಬಲವನ್ನು ಪಡೆಯುವಿರಿ ಮತ್ತು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಈ ಅವಧಿಯಲ್ಲಿ ಸಾಧ್ಯವಾಗಲಿದೆ.
4. ತುಲಾ ರಾಶಿ: ತುಲಾ ರಾಶಿಯವರಿಗೆ ಈ ಬಾರಿ ಧನತ್ರಯೋದಶಿ ತುಂಬಾ ಅದೃಷ್ಟ ಹೊತ್ತು ತರಲಿದೆ ಎಂದು ಪರಿಗಣಿಸಲಾಗಿದೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ, ನಿಮಗೆ ನಿಮ್ಮ ಸಿಲುಕಿಕೊಂಡ ಹಣವನ್ನು ಮರಳಿ ಪಡೆಯಬಹುದು ಮತ್ತು ವ್ಯಾಪಾರದಲ್ಲಿ ಸಮೃದ್ಧಿಯ ಸಾಧ್ಯತೆಗಳಿವೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ ಮತ್ತು ನಿಮ್ಮ ಮನೆಯ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಇರಲಿದೆ. ಈ ಮಧ್ಯೆ ನೀವು ಉತ್ತಮ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ವ್ಯಾಪಾರದಲ್ಲಿ ಮಾಡಿದ ಹೂಡಿಕೆಯು ಭವಿಷ್ಯದಲ್ಲಿ ನಿಮಗೆ ಹೆಚ್ಚಿನ ಲಾಭವನ್ನು ನೀಡಲಿದೆ.
5. ಮಕರ ರಾಶಿ: ಮಕರ ರಾಶಿಯ ಜನರು ಈ ಧನತ್ರಯೋದಶಿಯ ದಿನ ನಿರ್ಮಾಣಗೊಳ್ಳುತ್ತಿರುವ ಗ್ರಹಗಳ ಶುಭ ಸಂಯೋಜನೆಯ ಪ್ರಭಾವದಿಂದ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲಿದ್ದಾರೆ. ನಿಮ್ಮ ಕುಟುಂಬದಲ್ಲಿ ಸಮೃದ್ಧಿ ಹೆಚ್ಚಾಗಲಿದೆ ಮತ್ತು ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಉದ್ಯೋಗದಲ್ಲಿರುವವರಿಗೆ ಪ್ರಗತಿಯ ಸಾಧ್ಯತೆಗಳಿವೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದದಿಂದ ನಿಮಗೆ ಅಪಾರ ಧನಪ್ರಾಪ್ತಿಯಾಗಲಿದೆ ಏತನ್ಮಧ್ಯೆ, ನೀವು ಹಣವನ್ನು ಉಳಿಸಲು ಸಾಧ್ಯವಾಗಲಿದ್ದು, ಇದು ನಿಮ್ಮ ಕಾರ್ಪಸ್ ಅನ್ನು ಹಲವು ಪಟ್ಟು ಹೆಚ್ಚಿಸಲಿದೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಸುಧಾರಿಸಲಿದೆ. ದೀಪಾವಳಿಯ ಮುಂಚೆಯೇ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ.
6. ಮೇಷ ರಾಶಿ: ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಈ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಕುಟುಂಬ ಸದಸ್ಯರ ಜೊತೆಗೆ ಒಳ್ಳೆಯ ಕಾಲ ಕಳೆಯುವಿರಿ. ವೈವಾಹಿಕ ಜೀವನ ಸುಖದಿಂದ ಕೂಡಿರಲಿದೆ. ಆರೋಗ್ಯ ಉತ್ತಮ ವಾಗಿರಲಿದೆ. ನೌಕರವರ್ಗದ ಜನರಿಗೂ ಉತ್ತಮ ಲಾಭ ಸಿಗಲಿದೆ. ವ್ಯಾಪಾರದಲ್ಲಿಯೂ ಕೂಡ ಲಾಭದ ಸಂಕೇತಗಳಿವೆ.
7. ಮಿಥುನ ರಾಶಿ: ಗ್ರಹಗಳ ಸ್ಥಿತಗತಿಯ ಲೆಕ್ಕಾಚಾರದಲ್ಲಿ ಮಿಥುನ ರಾಶಿಯ ಜಾತಕದವರರಿಗೂ ಕೂಡ ವಿಶೇಷ ಲಾಭ ಸಿಗಲಿದೆ. ಧನತ್ರಯೋದಶಿಯ ದಿನ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ದೀರ್ಘಕಾಲದಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿದ್ದು, ನಿಮಗೆ ಧನ-ಸಂಪತ್ತು ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಮಾಜದಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ. ನೌಕರವರ್ಗದ ಜನರಿಗೆ ಪರಿಶ್ರಮದ ಫಲ ಸಿಗಲಿದೆ. ನಿಮ್ಮ ಕೆಲಸವನ್ನು ಪರಿಗಣಿಸಿ ಉನ್ನತ ಅಧಿಕಾರಿಗಳು ನಿಮಗೆ ಬಡ್ತಿ ಭಾಗ್ಯ ಮತ್ತು ಇಂಕ್ರಿಮೆಂಟ್ ನೀಡುವ ಸಾಧ್ಯತೆ ಇದ. ವ್ಯಾಪಾರ ಮಾಡುವ ಜನರಿಗೂ ಕೂಡ ಲಾಭದ ಸಂಕೇತಗಳಿವೆ. ಹಣ ಹೂಡಿಕೆಗಾಗಿ ಯೋಚಿಸುತ್ತಿದ್ದರೆ, ಈ ಸಮಯ ಅತ್ಯುತ್ತಮವಾಗಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)