ಕೇವಲ 2,600 ರೂಪಾಯಿ ಬೆಲೆಯ ಫೋನ್ ಬಿಡುಗಡೆ ಮಾಡಿದ ಜಿಯೋ ! JioPhone Prima 4Gಯ ವೈಶಿಷ್ಟ್ಯಗಳೇನು ಗೊತ್ತಾ ?

JioPhone Prima 4G : JioPhone Prima ಅನ್ನು ಕೇವಲ  2,599 ರೂಪಾಯಿಗೆ ಖರೀದಿಸಬಹುದು. ಇದನ್ನು Amazon, JioMart ಮತ್ತು Reliance Digital ಸ್ಟೋರ್‌ಗಳಿಂದ ಖರೀದಿಸಬಹುದು.

Written by - Ranjitha R K | Last Updated : Nov 9, 2023, 10:15 AM IST
  • JioPhone Prima 4G ವಿಶೇಷಣಗಳು
  • ಕೆಲವೊಂದು ಅಪ್ಲಿಕೇಶನ್‌ಗಳನ್ನು ಮೊದಲೇ ಇನ್ಸ್ಟಾಲ್ ಮಾಡಲಾಗಿರುತ್ತದೆ.
  • JioPhone Prima 4G ಬೆಲೆ ಕೇವಲ 2,600
ಕೇವಲ 2,600 ರೂಪಾಯಿ ಬೆಲೆಯ ಫೋನ್ ಬಿಡುಗಡೆ ಮಾಡಿದ ಜಿಯೋ ! JioPhone Prima 4Gಯ ವೈಶಿಷ್ಟ್ಯಗಳೇನು ಗೊತ್ತಾ ? title=

JioPhone Prima 4G : ಕಳೆದ ತಿಂಗಳು, ರಿಲಯನ್ಸ್ ಜಿಯೋ ತನ್ನ ಹೊಸ ಫೀಚರ್ ಫೋನ್, ಜಿಯೋಫೋನ್ ಪ್ರೈಮಾ 4G ಅನ್ನು  ಪರಿಚಯಿಸಿತು. ಈ ಫೋನ್ ಅನ್ನು ಮೊದಲು JioMart ಮೂಲಕ ಮಾತ್ರ ಖರೀದಿಸಬಹುದಿತ್ತು. ಆದರೆ ಈಗ ಇದು Amazon Indiaನಲ್ಲಿ ಕೂಡಾ ಈ ಫೋನ್ ಖರೀದಿಗೆ ಲಭ್ಯವಿದೆ. ಫೋನ್ ಬಲವಾದ ಬ್ಯಾಟರಿ, ಉತ್ತಮ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. 

JioPhone Prima 4G ವಿಶೇಷಣಗಳು :
JioPhone Prima 4G ಶಕ್ತಿಯುತ ಮತ್ತು ಸೊಗಸಾದ ಸಾಧನವಾಗಿದೆ. ಅದು 4G ಸಂಪರ್ಕ, 1800mAh ಬ್ಯಾಟರಿಯನ್ನು ಹೊಂದಿದ್ದು, 23 ಭಾಷೆಗಳನ್ನು ಬೆಂಬಲಿಸುತ್ತದೆ. ಹಿಂಭಾಗದಲ್ಲಿ  ಜಿಯೋ ಲೋಗೋದೊಂದಿಗಿನ ಗೋಲಾಕಾರದ  ವಿನ್ಯಾಸ ವು  ನೋಡಲು ಆಕರ್ಷಕವಾಗಿದೆ. ಈ ಫೋನ್ ಕೇವಲ 1.55 ಸೆಂ.ಮೀ ದಪ್ಪವಿರುವುದು ವಿಶೇಷ. 

ಇದನ್ನೂ ಓದಿ : Free... Free...Free.. ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಬಂಬಾಟ್ ಉಡುಗೊರೆ ನೀಡಿದೆ ಈ ಟೆಲಿಕಾಂ ಕಂಪನಿ!

ಈ ಸಾಧನವು ARM ಕಾರ್ಟೆಕ್ಸ್ A53 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. 128GB ಸ್ಟೋರೇಜ್ ಅನ್ನು ಹೊಂದಿದ್ದು,  ಅಗತ್ಯ ವಿದ್ದಲ್ಲಿ ಅದನ್ನು ವಿಸ್ತರಿಸಬಹುದಾಗಿದೆ. ಇದು FM ರೇಡಿಯೋ ಮತ್ತು ಪ್ರಮಾಣಿತ ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಒಳಗೊಂಡಿದೆ. ಇದು ಸಾಮಾನ್ಯ ಸ್ಮಾರ್ಟ್ಫೋನ್ ಗಳಿಗಾಗಿ ವಿನ್ಯಾಸಗೊಳಿಸಲಾದ KaiOS ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತದೆ. ಅದರಲ್ಲಿ ಸಿಮ್ ಕಾರ್ಡ್ ಅನ್ನು ಸೇರಿಸಿದಾಗ ಬ್ಲೂಟೂತ್ ಆವೃತ್ತಿ 5.0 ಅನ್ನು  ಸಪೋರ್ಟ್ ಮಾಡುತ್ತದೆ. 

JioPhone Prima 4Gಯಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳನ್ನು ಮೊದಲೇ ಇನ್ಸ್ಟಾಲ್ ಮಾಡಲಾಗಿರುತ್ತದೆ. ಈ ಅಪ್ಲಿಕೇಶನ್ ಅನ್ನು ತಕ್ಷಣದಿಂದಲೇ ಬಳಸಬಹುದು. ಇವುಗಳಲ್ಲಿ YouTube,JioTV, JioCinema, JioSaavn ಮತ್ತು JioNews ಸೇರಿವೆ. 

ಇದನ್ನೂ ಓದಿ : Electricity Bill: ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯ ಈ 3 ಗ್ಯಾಜೆಟ್‌ಗಳನ್ನು ಇಂದೇ ಬದಲಾಯಿಸಿ

JioPhone Prima 4G ಬೆಲೆ :
JioPhone Prima ಅನ್ನು ಕೇವಲ  2,599 ರೂಪಾಯಿಗೆ ಖರೀದಿಸಬಹುದು. ಈ ಫೋನ್ ಸೊಗಸಾದ ನೀಲಿ ಬಣ್ಣದಲ್ಲಿ ಲಭ್ಯವಿದೆ. ಇದನ್ನು Amazon, JioMart ಮತ್ತು Reliance Digital ಸ್ಟೋರ್‌ಗಳಿಂದ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News